Covid 19: ರಾಷ್ಟ್ರರಾಜಧಾನಿ ನವದೆಹಲಿಯ ಆರೋಗ್ಯ ಸಚಿವ ಸಂತ್ಯೇಂದ್ರ ಜೈನ್ ಅನಾರೋಗ್ಯಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನವ ದೆಹಲಿ ಜೂನ್ 16 :- ದೆಹಲಿ ಕೇಜ್ರಿವಾಲ್ ಸರ್ಕಾರದ ಆರೋಗ್ಯ ಸಚಿವ ಸಂತ್ಯೇಂದ್ರ ಜೈನ್ ಜ್ವರ ಹಾಗೂ ಉಸಿರಾಟ ತೊಂದರೆಯಿಂದ ದೆಹಲಿಯ ರಾಜೀವ್ ಗಾಂಧಿ ಸೂಪರ್ ಸ್ಪೆಷ್ಯಾಲಿಟಿ ಆಸ್ಪತ್ರೆ ಗೆ ( RGSSH) ದಾಖಲಾಗಿದ್ದಾರೆ.
ಆಸ್ಪತ್ರೆಗೆ ದಾಖಲಾದ ದೆಹಲಿ ಆರೋಗ್ಯ ಸಚಿವ :
ಆರೋಗ್ಯ ಸಚಿವ ಸಂತ್ಯೇಂದ್ರ ಜೈನ್ ಅವರಿಗೆ ಕೊರೋ ನಾ ಪರೀಕ್ಷೆ ಮಾಡಲಾಗುವುದು ಎಂದು ದೆಹಲಿ ಸರ್ಕಾರ ದ ಮಾದ್ಯಮ ಪ್ರತಿನಿಧಿ ತಿಳಿಸಿದ್ದಾರೆ.
ಇತ್ತೀಚೆಗೆ ದೆಹಲಿ ಯಲ್ಲಿ ನಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವ ದ ಕೋವಿಡ್ 19 ಸರ್ವಪಕ್ಷ ಸಭೆ ಯಲ್ಲಿ ಸಚಿವ ಸಂತ್ಯೇಂದ್ರ ಜೈನ್ ಪಾಲ್ಗೊಂಡಿದ್ದರು.
ಇತ್ತೀಚೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೋವಿಡ್ 19 ಪರೀಕ್ಷೆ ಗೆ ಮಾಡಿಸಿ ಕೊಂಡಿದ್ದರು, ನೆಗಟಿವ್ ವರದಿ ಬಂದಿತ್ತು.