IMG 20250212 WA0019

ಪಾವಗಡ : ಅದ್ದೂರಿ ಯಾಗಿ ನಡೆದ ಶ್ರೀ ಶನೇಶ್ವರ ಸ್ವಾಮಿ ಬ್ರಹ್ಮರಥೋತ್ಸವ……!

ಅದ್ದೂರಿ ಯಾಗಿ ನಡೆದ ಶ್ರೀ ಶನೇಶ್ವರ ಸ್ವಾಮಿ ಬ್ರಹ್ಮರಥೋತ್ಸವ……. ಪಾವಗಡ: ಪಟ್ಟಣ ಸುಪ್ರಸಿದ್ಧ ಶ್ರೀ ಕ್ಷೇತ್ರ ಶನಿಮಹಾತ್ಮ ದೇಗುಲದಲ್ಲಿ ಜೇಷ್ಠಾದೇವಿ ಸಹಿತ ಶೈನೈಶ್ಚರ ಸ್ವಾಮಿ ಬ್ರಹ್ಮ ರಥೋತ್ಸವ ಬುಧವಾರ ಬಹಳ ವಿಜೃಂಭಣೆಯಿಂದ ನಡೆಯಿತು. ಬ್ರಹ್ಮ ರಥೋತ್ಸವದ ಪ್ರಯುಕ್ತ ದೇವಾಲಯದಲ್ಲಿ ಬೆಳಿಗ್ಗೆ 5-00 ಗಂಟೆಯಿಂದ ಶ್ರೀಸತ್ಯನಾರಾಯಣಸ್ವಾಮಿ ವ್ರತ, ರಥೋತ್ಸವಾಗಮನ, ಆವಾಹಿತ ದೇವತಾರಾಧನೆ, ಸೂರ್ಯಾರಾಧನೆ, ಅಲಂಕಾರ, ಎಲೆಪೂಜೆ ಇತ್ಯಾದಿ ಕೈಂಕರ್ಯಗಳು ಪೂರ್ಣಾಹುತಿ ನಡೆಯಿತು. ಶೀತಲಾಂಭ ದೇವಿಗೆ ರಥೋತ್ಸವದ ಅಂಗವಾಗಿ ಅಭಿಷೇಕ, ಕುಂಕುಮಾರ್ಚನೆ ಏರ್ಪಡಿಸಲಾಗಿತ್ತು. ಶೀತಲಾಂಭ ದೇವಿ ಮೂಲ ವಿಗ್ರಹಕ್ಕೆ ವಿಶೇಷ […]

Continue Reading
DSC 3919 scaled

ತುಮಕೂರು : ಕಾಲಮಿತಿಯಲ್ಲಿ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಸೂಚನೆ

ಕಾಲಮಿತಿಯಲ್ಲಿ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಸಚಿವ ಸೋಮಣ್ಣ ಸೂಚನೆ ತುಮಕೂರು(ಕ.ವಾ.)ಫೆ.8: ಜಿಲ್ಲೆಯಲ್ಲಿ ಕೈಗೊಂಡಿರುವ ರೈಲ್ವೆ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕೆಂದು ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಹೊಸದಾಗಿ ಮಂಜೂರಾದ ರೈಲ್ವೆ ಯೋಜನೆಗಳನ್ನು ಮಾರ್ಚ್ 25ರೊಳಗಾಗಿ ಕೈಗೆತ್ತಿಕೊಳ್ಳಬೇಕು. ಜಿಲ್ಲೆಯಲ್ಲಿ ಈಗಾಗಲೇ ಪ್ರಗತಿಯಲ್ಲಿರುವ ಡಿ.ರಾಮಪುರ ಗೇಟ್, ಬಡ್ಡಿಹಳ್ಳಿ ಗೇಟ್, ದೊಡ್ಡನಕೆರೆ ಸೇರಿ ಮತ್ತಿತರ […]

Continue Reading
IMG 20250206 WA0007 scaled

ಪಾವಗಡ : ಪಿ ಎಲ್ ಡಿ ಬ್ಯಾಂಕ್ ನ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ರ ಅವಿರೋಧ ಆಯ್ಕೆ….!

ಪಿ ಎಲ್ ಡಿ ಬ್ಯಾಂಕ್ ನ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ರ ಅವಿರೋಧ ಆಯ್ಕೆ. ಪಾವಗಡ : ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಸಿ.ವೆಂಕಟೇಶ್ ಚುನಾವಣೆ ಅಧಿಕಾರಿ ಯಾಗಿ ಕಾರ್ಯ ನಿರ್ವಹಿಸಿದರು.ಅಧ್ಯಕ್ಷ ಸ್ಥಾನಕ್ಕೆ ಎನ್.ಶೇಷಗಿರಿ,ಉಪಾಧ್ಯಕ್ಷ ಸ್ಥಾನಕ್ಕೆ ಅನಿತಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದು, ಇತರೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ. ಕಡಮಲಕುಂಟೆ ಗ್ರಾಮದ ಎನ್.ಶೇಷಗಿರಿ ಅದ್ಯಕ್ಷರಾಗಿ ಮತ್ತು […]

Continue Reading
IMG 20250205 WA0005

ಪಾವಗಡ : ಕೊತ್ತೂರು ಗಂಗಮ್ಮನಿಗೆ ಒಲಿದ 2025ರ ಕಾಯಕ ಬಂಧು ಪ್ರಶಸ್ತಿ….!

ಕೊತ್ತೂರು ಗಂಗಮ್ಮನಿಗೆ ಒಲಿದ 2025ರ ಕಾಯಕ ಬಂಧು ಪ್ರಶಸ್ತಿ. ಪಾವಗಡ : ತಾಲ್ಲೂಕಿನ ಸಿ ಕೆ ಪುರ ಗ್ರಾಂ. ಪಂ. ವ್ಯಾಪ್ತಿಯ ಕೊತ್ತೂರು ಗ್ರಾಮದ ಗಂಗಮ್ಮನಿಗೆ 2025ರ ಕಾಯಕ ಬಂಧು ಪ್ರಶಸ್ತಿ ಲಭಿಸಿದೆ. ನರೇಗಾ ಯೋಜನೆಯ ಪರಿಣಾಮಕಾರಿ ಅನುಷ್ಠಾನ, ಅತಿ ಹೆಚ್ಚು ಮಾನವ ದಿನಗಳ ಸೃಜನೆ, ಹೆಚ್ಚು ಜನರಿಗೆ ಉದ್ಯೋಗ ನೀಡಿಕೆ, ಶಾಲಾ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಹಾಗೂ ಜಿಲ್ಲೆಯ ವಿನೂತನ ಕಾರ್ಯಕ್ರಮಗಳನ್ನು ಪರಿಗಣಿಸಿ ತುಮಕೂರು ಜಿಲ್ಲಾ ಪಂಚಾಯಿತಿಗೆ 2025ರ ನರೇಗಾ ಪ್ರಶಸ್ತಿ, ಉತ್ತಮ ಗ್ರಾಮ ಪಂಚಾಯಿತಿ […]

Continue Reading
IMG 20250204 WA0009

ಪಾವಗಡ : ರಥಸಪ್ತಮಿ ಅಂಗವಾಗಿ ವಿಶೇಷ ಪೂಜೆ….!.

ರಥಸಪ್ತಮಿ ಅಂಗವಾಗಿ ವಿಶೇಷ ಪೂಜಾ ಉತ್ಸವ. ಪಾವಗಡ : ಪಟ್ಟಣದ ಶ್ರೀ ಕ್ಷೇತ್ರ ಶ್ರೀ ಶನಿಮಹಾತ್ಮ ದೇವಸ್ಥಾನದಲ್ಲಿ ಸ್ವಸ್ತಿ ಶ್ರೀ ಕ್ರೋಧಿನಾಮ ಸಂವತ್ಸರ ಮಾಘ ಶುದ್ಧ ಸಪ್ತಮಿ ಯಂದು ಮಂಗಳವಾರ ಶ್ರೀ ಜೇಷ್ಠಾದೇವಿ ಮತ್ತು ಶನೈಶ್ಚರಸ್ವಾಮಿಯವರಿಗೆ ರಥಸಪ್ತಮಿ ಯ ಪ್ರಯುಕ್ತ ವಿಶೇಷ ಪೂಜಾದಿಗಳನ್ನು ಹಾಗೂ ಅಭಿಷೇಕವನ್ನು ಏರ್ಪಡಿಸಲಾಯಿತು. ಬೆಳಿಗ್ಗೆ 5-00 ಗಂಟೆಗೆ ಅರುಣಪೂರ್ವಕ ಸೂರ್ಯಾರಾಧನೆ, ಅಭಿಷೇಕಗಳು ಸಹಸ್ರನಾಮಾರ್ಚನೆ, ಅಲಂಕಾರ, ಮಹಾಮಂಗಳಾರತಿ. ಬೆಳಿಗ್ಗೆ 9-00 ಗಂಟೆಗೆ ಸಪ್ತಾಶ್ವವಾಹನೋತ್ಸವ, ಸೂರ್ಯಮಂಡಲೋತ್ಸವ. ಮಧ್ಯಾಹ್ನ 12-30 ಗಂಟೆಗೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ […]

Continue Reading
IMG 20250131 WA0029

ಪಾವಗಡ: ಸಾಲ ಕೊಡುವವರು ಆರ್‌ಬಿಐ ನಿಯಮಾವಳಿಯನ್ನು ಪಾಲಿಸಬೇಕು….!

ಸಾಲ ಕೊಡುವವರು ಆರ್‌ಬಿಐ ನಿಯಮಾವಳಿಯನ್ನು ಪಾಲಿಸಬೇಕು. ಪಾವಗಡ : ಮೈಕ್ರೋ ಫೈನಾನ್ಸ್ ಸಂಸ್ಥೆಯಿಂದ ಸಾಲ ನೀಡಬೇಕಾದರೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಗ್ರಾಹಕರಿಗೆ ಹಣವನ್ನು ನೀಡಬೇಕು ಎಂದು ತಹಶೀಲ್ದಾರ್ ವರದರಾಜು ತಿಳಿಸಿದರು. ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಯ ಪ್ರತಿನಿಧಿಗಳ ಜೊತೆ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮೈಕ್ರೋ ಫೈನಾನ್ಸ್ ನಿಂದ ಸಾಲ ನೀಡಿದವರು ಸಾಲ ವಸೂಲಿಗಾಗಿ ಬೆಳಗ್ಗೆ 09 ರಿಂದ 6:00 ಗಂಟೆ ವರೆಗೂ ವಸೂಲಿ ಮಾಡಿಕೊಳ್ಳಬಹುದು ಎಂದರು. ಸಾಲ ಕೊಟ್ಟ ಮೈಕ್ರೋ ಫೈನಾನ್ಸ್ […]

Continue Reading
IMG 20250131 WA0028

ಪಾವಗಡ : ಹೊಸ ಯೋಜನೆಗಳಿಗೆ ಶೀಘ್ರವೇ ಚಾಲನೆ…!

ತಾಲೂಕಿನಲ್ಲಿ ಹೊಸ ಯೋಜನೆಗಳಿಗೆ ಶೀಘ್ರವೇ ಚಾಲನೆ. ಶಾಸಕ ಹೆಚ್ ವಿ ವೆಂಕಟೇಶ್ ಪಾವಗಡ : ತಾಲೂಕಿನಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡಿದ್ದು ಸ್ವತಹ: ಮುಖ್ಯಮಂತ್ರಿಗಳಿಂದ ಉದ್ಘಾಟನೆ ಮಾಡಿಸುವೆ ಎಂದು ಶಾಸಕ ಹೆಚ್ ವಿ ವೆಂಕಟೇಶ್ ತಿಳಿಸಿರು. ತಾಲ್ಲೂಕಿನ ದೊಡ್ಡಹಳ್ಳಿ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ತಾಲ್ಲೂಕಿಗೆ ಈಗಾಗಲೇ ಐಟಿಐ ಕಾಲೇಜು ಮಂಜೂರು ಆಗಿದೆ, ರೈಲ್ವೆ ಕಾಮಗಾರಿ ನಡೆಯುತ್ತಿದೆ, ಬೈಪಾಸ್ ರಸ್ತೆ ಅನುಮೋದನೆಗೊಂಡಿದ್ದು, […]

Continue Reading
IMG 20250130 WA0025

ಪಾವಗಡ : 7ನೇ ವೇತನ ಆಯೋಗದಲ್ಲಿ ನಿವೃತ್ತ ನೌಕರರಿಗೆ ಅನ್ಯಾಯ….!

7ನೇ ವೇತನ ಆಯೋಗದಲ್ಲಿ ನಿವೃತ್ತ ನೌಕರರಿಗೆ ಅನ್ಯಾಯ: ಆರೋಪ ಮನವಿ ಪತ್ರ ಸಲ್ಲಿಕೆ. ಪಾವಗಡ : ರಾಜ್ಯ ಸರ್ಕಾರ ಜಾರಿಗೊಳಿಸಿದ 7ನೇ ವೇತನ ಆಯೋಗದಲ್ಲಿ ನಿವೃತ್ತ ಸರ್ಕಾರಿ ನೌಕರರಿ ಗೆ ಅಧಿಕಾರಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ತಾಲ್ಲೂಕು ನಿವೃತ್ತ ನೌಕರರ ಸಂಘ ದ ಪದಾಧಿಕಾರಿಗಳು ತಹಶೀಲ್ದಾರ್ ವರದರಾಜು ಮುಖಾಂತರ ಮುಖ್ಯಮಂತ್ರಿಯ ರವರಿಗೆ ಮನವಿ ಪತ್ರ ಸಲ್ಲಿಕೆ. ಪ್ರತಿಭಟನೆ ಉದ್ದೇಶಿಸಿ ನಿವೃತ್ತ ಉಪನ್ಯಾಸಕ ಸುರೇಶ್ ಮಾತನಾಡಿ, 7ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದ ಮೇಲೆ ನಿವೃತ್ತ […]

Continue Reading
IMG 20250122 WA0040

ಪಾವಗಡ : ಸಾರ್ವಜನಿಕರ ದೂರುಗಳನ್ನು ಆಲಿಸಿದ ಲೋಕಾಯುಕ್ತ ಎಸ್ ಪಿ…..!

ಸಾರ್ವಜನಿಕರ ದೂರುಗಳನ್ನು ಆಲಿಸಿದ ಲೋಕಾಯುಕ್ತ ಎಸ್ ಪಿ ಲಕ್ಷ್ಮಿ ನಾರಾಯಣ ಪಾವಗಡ: ಅಧಿಕಾರಿಗಳು ವಿನಾಕಾರಣ ಸಾರ್ವಜನಿಕರಿಗೆ ಕೆಲಸಗಳನ್ನು ಮಾಡಿಕೊಡದೆ ಅಲೆಸಬಾರದೆಂದು ಲೋಕಾಯುಕ್ತ ಎಸ್ ಪಿ ಲಕ್ಷ್ಮಿ ನಾರಾಯಣ ತಿಳಿಸಿದರು. ಪಟ್ಟಣದ ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಬುಧವಾರ ತುಮಕೂರು ಲೋಕಾಯುಕ್ತ ಅಧಿಕಾರಿಗಳಿಂದ ಏರ್ಪಡಿಸಿದ್ದ ಕುಂದು ಕೊರತೆ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒಗಳು ಸಾರ್ವಜನಿಕರಿಗೆ ಸಿಗುತ್ತಿಲ್ಲವೆಂದು, ಹಕ್ಕು ಪತ್ರ ಖಾತೆಗೆ ಸಂಬಂಧಿಸಿದಂತೆ ಕೆಲಸಗಳನ್ನು ಮಾಡಿಕೊಡಲು ವಿನಾಕಾರಣ ಅಲೆಸಲಾಗುತ್ತದೆ ಎಂದು ಸಾರ್ವಜನಿಕರಿಂದ ದೂರನ್ನು ಪಡೆದುಕೊಂಡಿರುವುದಾಗಿ […]

Continue Reading
IMG 20250118 WA0004

ಪಾವಗಡ : ಶಿಕ್ಷಕರು – ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ನಿರ್ಮಾತೃಗಳು….!.

ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ನಿರ್ಮಾತೃಗಳು. ಪಾವಗಡ : ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುವರೆಂದು ವಿದ್ಯಾರ್ಥಿಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಶಿಕ್ಷಕರ ಪಾತ್ರ ಶ್ಲಾಘನೀಯವೆಂದು ಸಲೀ ಮುಲ್ಲಾ ಖಾನ್ ತಿಳಿಸಿದರು. ಪಟ್ಟಣದ ಶ್ರೀ ಶನಿ ಮಹಾತ್ಮ ದೇವಾಲಯದ ಹಿಂಭಾಗದ ಸರ್ಕಾರಿ ಕಿರಿಯ ಪ್ರಾರ್ಥಮಿಕ ಪಾಠಶಾಲೆಗೆ ಶನಿವಾರ ನಿವೃತ್ತ ಶಿಕ್ಷಕ ಖಲೀ ಮುಲ್ಲಾ ಖಾನ್ ಮತ್ತು ಅವರ ಧರ್ಮಪತ್ನಿ ಖುರ್ಶಿದ್ ಉನ್ನಿಸಾ ಸ್ಮರಣಾರ್ಥ ಅವರ ಕುಟುಂಬಸ್ಥರು ಶಾಲೆಗೆ ಡಿಜಿಟಲ್ ಇಂಟ್ರಕ್ಷನ್ ಬೋರ್ಡ್ ಕೊಡುಗೆಯಾಗಿ ನೀಡಿ ಅವರು […]

Continue Reading