- ಶಿವಪ್ಪ ನ ಆಸ್ತಿ ಉಳಿಸುವ ಭರವಸೆ ಕೊಟ್ಟ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ…!
- ಹೈಕೋರ್ಟ್ ಆದೇಶ ಉಲ್ಲಂಘಿಸಿ ಖಾಸಗಿ ವ್ಯಕ್ತಿಗಳಿಗೆ ಭೂಪರಿವರ್ತನೆ ಮಾಡಿದ ಶುಭಕಲ್ಯಾಣ್
- ಭೂ ಕಳ್ಳರ ನೆರವಿಗೆ ಜಿಲ್ಲಾಡಳಿತ….
- ಕಂದಾಯ ಸಚಿವರ ಕಚೇರಿಯಿಂದ ತನಿಖೆಗೆ ಆದೇಶ
ಮೈಸೂರಿನ ಮೂಡ ಹಗರಣ ದ ರೀತಿ ವೈ ಎನ್ ಹೊಸಕೋಟೆ ಕೋಟೇಶ್ವರ ದೇವಸ್ಥಾನಕ್ಕೆ ಸೇರಿದ ಜಮೀನು ಕಾನೂನು ಬಾಹಿರವಾಗಿ ವಹಿವಾಟು ಗಳು ನಡೆದಿವೆ. ಜೊತೆಗೆ ಈ ಜಮೀನನ್ನು ಇಬ್ಬರು ಖಾಸಗಿ ವ್ಯಕ್ತಿಗಳ ಹೆಸರಿಗೆ ಭೂ ಪರಿವರ್ತನೆ ಮಾಡಿದ್ದಾರೆ ಇತ್ತೀಚೆಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಎನ್ ಎಸ್ ಮಂಜುನಾಥ್ ಅವರ ಹೆಸರಿಗೆ ಭೂ ಪರಿವರ್ತನೆ ಮಾಡಿದ್ದಾರೆ. ಪ್ರಕ್ರಿಯೆಗಳು ಹೈಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ.
ತುಮಕೂರು ಜಿಲ್ಲೆ, ಪಾವಗಡ ತಾಲ್ಲೂಕು ವೈಎನ್ ಹೊಸಕೋಟೆ ಗ್ರಾಮಕ್ಕೆ ಸೇರಿದ 249 – 250 ಸರ್ವೇ ನಂಬರ್ ಸರ್ಕಾರ ಕ್ಕೆ ಸೇರಿದ್ದು ಎಂದು ಐದು ನ್ಯಾಯಾಂಗ ಸಂಸ್ಥೆ ಗಳು ಆದೇಶಗಳಲ್ಲಿ ತಿಳಿಸಿವೆ. ಈ ಜಮೀನು ಸಂಬಂಧಿಸಿದ ಕೆಲವು ಕೇಸ್ ಗಳಲ್ಲಿ ಕಂದಾಯ ಇಲಾಖೆ ಕಾರ್ಯದರ್ಶಿ, ತುಮಕೂರು ಜಿಲ್ಲಾಧಿಕಾರಿ, ಮಧುಗಿರಿ ಎ.ಸಿ ಮತ್ತು ಪಾವಗಡ ತಾಹಸಿಲ್ದಾರ್ RESPONDENT ಹಾಗಿದ್ದರು ಕೇಸ ಮುಗಿದಿದ್ದು ಈ ಜಮೀನು ( ದೇವಸ್ಥಾನ) ಸರ್ಕಾರ ಕ್ಕೆ ಸೇರಿದ್ದು ಎಂಬ ಆದೇಶ ಬಂದು 23 ವರ್ಷ ಕಳೆದರು ಈ ದಿನದ ವರೆಗೂ ಕಂದಾಯ ಇಲಅಖೆಯ ಅಧಿಕಾರಿಗಳು ಸರ್ಕಾರದ ವಶಕ್ಕೆ ಪಡೆದಿಲ್ಲ.
ಪಾವಗಡ ತಹಸಿಲ್ದಾರ್ ವರದರಾಜು, ಮಧುಗಿರಿ ಉಪವಿಭಾಗಾಧಿಕಾರಿ ಶಿವಪ್ಪ, ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಖಾಸಗಿ ವ್ಬಕ್ತಿ ಗಳಿಗೆ ಬಹು ಪರಾಗ್ ಎನ್ನುವ ಮೂಲಕ ಸರ್ಕಾರಿ ಆಸ್ತಿ ಖಾಸಗಿ ವ್ಯಕ್ತಿಗಳ ಪಾಲಾಗುವಂತೆ ಮಾಡಿದ್ದಾರೆ. 01-04-2024 ರಂದು ಭೂಪರಿವರ್ತನೆ ಮಾಡಿರುವುದೇ ಇದ್ದಕ್ಕೆ ಜ್ವಲಂತ ಸಾಕ್ಷಿ…
ನೀವು ಸರ್ಕಾರಿ ಭೂಮಿ ಲಪಟಾಯಿಸ ಬೇಕಾದರೆ ಈ ಭೂ ಕಳ್ಳರ ಹತ್ತಿರ ತರಬೇತಿ ಪಡೆಯಬೇಕು ಅಷ್ಟರ ಮಟ್ಟಿಗೆ ಇದೆ ಇವರ ಟ್ಯಾಲೆಂಟ್, ವೈ ಎನ್ ಹೊಸಕೋಟೆ ಜನತೆಗೆ, ಕೋಟೇಶ್ವರ ದೇವಸ್ಥಾನ ಸಮಿತಿ ಎಲ್ಲರನ್ನು ಯಾಮಾರಿಸಿದ್ದಾರೆ. ಯಾರು – ಯಾರಿಗೆ ಇವರು ಯಾವ ಯಾವ ರೀತಿ ಪಂಗನಾಮ ಹಾಕಿದ್ದಾರೆ ಮುಂದೆ ಇಂಚು –ಇಂಚು ಹೇಳುತ್ತೇವೆ……!

ಸಂಪೂರ್ಣ ವಿವರ :

ವೈ ಎನ್ ಹೊಸಕೋಟೆ ಗ್ರಾಮ ವ್ಯಾಪ್ತಿಯಲ್ಲಿ ಬರು ಕೋಟೇಶ್ವರ ದೇವಸ್ಥಾನ ದೇವರ ಹೆಸರಿಗೆ ಸೇರಿದ 249 ಮತ್ತು 250 ಜಮೀನು ಕಾನೂನು ಬಾಹಿರವಾಗಿ ಭೂಮಿ ಯ ಹಕ್ಕುಇಲ್ಲದ ಖರೆ ಹನುಮಂತರಾಯಪ್ಪ ಅವರಿಂದ ಟಿ. ವಿ ವೆಂಕಟೇಶ್ ,ಎನ್ ಆರ್ ಅಶ್ವಥ್ ಕುಮಾರ್ ಇತರರು 11-06 -1988 ರಲ್ಲಿ 25 ಸಾವಿರ ರೂಪಾಯಿಗೆ ಖರೀದಿ ಮಾಡುತ್ತಾರೆ ಈ ಹಿಂದೆ ಹಲವು ವ್ಯಕ್ತಿಗಳು ಉಪ ನೊಂದಾವಣೆ ಕಚೇರಿಯಲ್ಲಿ ಸೇಲ್ ಡೀಡ್ ( ಪರಭಾರೆಗಳನ್ನು) ಮಾಡಿಕೊಂಡಿದ್ದಾರೆ ಆದರೆ ಇವರಿಗೆ ಭೂಮಿಯ ಹಕ್ಕು ಬಂದಿರುವುದಿಲ್ಲ.
.
ಖರೆ ಹನುಮಂತರಾಯಪ್ಪ , ಎನ್ ಆರ್ ಅಶ್ವಥಕುಮಾರ್ ತಂಡ ಈ ಕೆಳಕಂಡ ಎಲ್ಲಾ ನ್ಯಾಯಾಲಯಗಳ ಕದ ತಟ್ಟಿದೆ
1.ಪಾವಗಡ ಲ್ಯಾಂಡ್ ಟ್ರಿಬನಲ್ – LRF 9/1974-75 DATED 19-06-1979 – INA NO 9/1983-84
2.A.C ನ್ಯಾಯಾಲಯ – NO. AGC.AC.CR(P) NO. 35/1990 -91
3.ಜಿಲ್ಲಾಧಿಕಾರಿಗಳ ನ್ಯಾಯಾಲಯ – Case No /RA/10/92-93
4.ಕರ್ನಾಟಕ ಅಫೀಲ್ ಟ್ರಿಬನಲ್- Karnataka appellate tribunal in appel No- 249/
5.ಹೈಕೋರ್ಟ್ : ಕೇಸ್ ನಂ – WP-9393/2001 AND 9713/2001 ) 18-06-2002
ಮೇಲೆ ಉಲ್ಲೇಖಿತ ಐದು (5) ನ್ಯಾಯಾಲಯಗಳಲ್ಲೂ ಖರೆ ಹನುಮಂತರಾಯಪ್ಪ, ಎನ್ ಆರ್ ಅಶ್ವಥಕುಮಾರ್ ಟಿ.ವಿ ವೆಂಕಟೇಶ್ ತಂಡಕ್ಕೆ ಭೂಮಿಯ ಹಕ್ಕು ಲಭಿಸುವುದಿಲ್ಲ, ಎಲ್ಲಾ ಕಡೆ ಕೇಸ್ ವಜಾ ಹಾಗುತ್ತದೆ.
ಎ.ಸಿ ಸಂದೀಪ್ ಧವೆ ಅವರು ನೀಡಿದ್ದ ತೀರ್ಪು ಗೆ ಮನ್ನಣೆ ಸಿಗುತ್ತದೆ.
——————————————————
1. ಪಾವಗಡ ಲ್ಯಾಂಡ್ ಟ್ರಿಬನಲ್ :
ಖರೆ ಹನುಮಂತಪ್ಪ ಎನ್ನುವ ವ್ಯಕ್ತಿ ಪಾವಗಡ ಲ್ಯಾಂಡ್ ಟ್ರಿಬನಲ್ ನಲ್ಲಿ ಸರ್ವೆ ನಂಬರ್ 249 ಮತ್ತು 250 ರ ಜಮೀನು ಹಕ್ಕು ಪಡೆಯಲು ಮೊದಲು 1974-75 ರಲ್ಲಿ ಮೊರೆ ಹೋಗುತ್ತಾರೆ (LRF 9/1974-75 ) 19-6-1979 ರಲ್ಲಿ ರಂದು ತೀರ್ಪು ಬಂದು ವಜಾ ಹಾಗುತ್ತದೆ ನಂತರ ಎರಡನೆ ಬಾರಿಗೆ1983-84 ರಲ್ಲಿ ( INA NO 9/1983-84) ಟ್ರಿಬನಲ್ ಮುಂದೆ ಹೋಗುತ್ತಾರೆ ಆಗಲು ವಜಾ ಹಾಗುತ್ತದೆ.ಭೂಮಿ ಹಕ್ಕು ಇಲ್ಲದ ಖರೆ ಹನುಮಂತಪ್ಪ ನಿಂದ ಟಿ,ವಿ ವೆಂಕಟೇಶ್,ಎನ್ ಆರ್ ಅಶ್ವಥ್ ಕುಮಾರು ಮತ್ತು ಇತರರು 11-5-1988 ರಂದು ಖರೀದಿಸುತ್ತಾರೆ. ತಮ್ಮ ಪ್ರಭಾವ ಬಳಸಿ ಮ್ಯಟೇ಼ನ್ ಮಾಡಿಸಿಕೊಳ್ಳುತ್ತಾರೆ. MR 7/198 -88 ನಂತರ 1990 -91 ರಲ್ಲಿ ಮಧುಗಿರಿ ವಿಗಾಧಿಕಾರಿಗಳಿ ಗೆ ಭೂಪರಿವರ್ತನೆ ಗೆ ಅರ್ಜಿ ಸಲ್ಲಿಸುತ್ತಾರೆ. ಅಸಲಿ ಆಟ ಇಲ್ಲಿಂದ ಶುರುವಾಗುತ್ತದೆ.
2.ಮಧುಗಿರಿ A.C ನ್ಯಾಯಾಲಯ :
ಎನ್ ಆರ್ ಅಶ್ವಥ್ ಕುಮಾರ್, ಟಿ.ವಿ ವೆಂಕಟೇಶ್ ಮತ್ತು ಇತರರು ಭೂ ಪರಿವರ್ತನೆ ಮಾಡಲು1990 -91 ರಲ್ಲಿ ಅರ್ಜಿ ಸಲ್ಲಿಸುತ್ತಾರೆ. ಆಗ ವೈ ಎನ್ ಹೊಸಕೋಟೆ ವಾಸಿಗಳಾದ ಲೇಟ್ ಬಿ ಎಲ್ ಮಲ್ಲಯ್ಯ, ಹೆಚ್ ಎನ್ ನಾಗಭೂಷಣ್ ಭೂ ಪರಿವರ್ತನೆ ಮಾಡಬಾರದು ಈ ಜಮೀನು ಕೋಟೇಶ್ವರ ದೇವಸ್ಥಾನಕ್ಕೆ ಸೇರಿದ್ದು ಎಂದು ತಕರಾರು ಅರ್ಜಿ ಸಲ್ಲಿಸುತ್ತಾರೆ. NO. AGC.AC.CR(P) NO. 35/1990 -91

ಮಧುಗಿರಿ ಉಪ ವಿಭಾಗಾಧಿಕಾರಿಯಾಗಿದ್ದ ಸಂದೀಪ್ ಧವೆ ಸರ್ವೆ ನಂಬರ್ 249 ಮತ್ತು 250 ರ ಜಮೀನಿಗೆ ಸಂಬಂದಿಸಿದ ಎಲ್ಲಾ ಕಡತಗಲನ್ನು ಪರಿಶೀಲಿಸಿ 26-06-1991 ರಂದು ತೀರ್ಪು ನೀಡುತ್ತಾರೆ. ಈ ತೀರ್ಪಿನಲ್ಲಿ ಸರ್ವೆ ನಂಬರ್ 249 ಮತ್ತು 250 ರ ಜಮೀನು ಎನ್ ಆರ್ ಅಶ್ವಥ್ ಕುಮಾರ್, ಟಿ.ವಿ ವೆಂಕಟೇಶ್ ಇತರರಿಗೆ ಜಮೀನಿನ ಹಕ್ಕು ಬರುವುದಿಲ್ಲ ಇದು ಕೋಟೇಶ್ವರ ದೇವಸ್ಥಾನಕ್ಕೆ ಸೇರಿದ್ದು ಪಾವಗಡ ತಹಸಿಲ್ದಾರ್ ಅವರು ತ್ವರಿತವಾಗಿ ಜಮೀನಿ ಹಕ್ಕುನ್ನು ಕೋಟೇಶ್ವರ ದೇವಸ್ಥಾನ ಹೆಸರಿಗೆ ಬದಲಿಸಬೇಕೆಂದು ತೀರ್ಪು ನೀಡುತ್ತಾರೆ. ಮಧುಗಿರಿ ಉಪ ವಿಭಾಗಾಧಿಕಾರಿಯಾಗಿದ್ದ ಸಂದೀಪ್ ಧವೆ ಅವರ ಆದೇಶದಂತೆ 28-8-1991 ರಂದು ಜಮೀನಿನ ದಾಖಲೆಗಳು ಕೋಟೇಶ್ವರ ದೇವಸ್ತಾನ ದ ಹೆಸರಿಗೆ ಬದಲಾಗುತ್ತದೆ.
3.ಜಿಲ್ಲಾಧಿಕಾರಿಗಳ ನ್ಯಾಯಾಲಯ :
ಮಧುಗಿರಿ ಉಪ ವಿಭಾಗಾಧಿಕಾರಿಯಾಗಿದ್ದ ಸಂದೀಪ್ ಧವೆ ತೀರ್ಪಿನ ನಂತರ ಭೂ ದಾಖಲೆಗಳು ದೇವಸ್ಥಾನ ದ ಹೆಸರಿಗೆ ಬದಲಾಗುತ್ತವೆ. ಇವರ ಆದೇಶವನ್ನು ಪ್ರಶ್ನಿಸಿ 1992-93 ರಲ್ಲಿ ಎನ್ ಆರ್ ಅಶ್ವಥ್ ಕಮಾರ ತಂಡ ಕೇಸ್ ಹಾಕುತ್ತಾರೆ.
ಜಿಲ್ಲಾಧಿಕಾರಿಗಳ ನ್ಯಾಯಾಲಯದ ತೀರ್ಪು 20-04- 1999 ರಂದು ಬರುತ್ತದೆ.
ಈ ತೀರ್ಪಿನಲ್ಲೂ ಮಧುಗಿರಿ ಉಪ ವಿಭಾಗಾಧಿಕಾರಿಯಾಗಿದ್ದ ಸಂದೀಪ್ ಧವೆ ಅವರ ಆದೇಶ ಊರ್ಜಿತವಾಗುತ್ತದೆ. ಈ ತೀರ್ಪಿನಲ್ಲಿ ಒಂದು ಪ್ರಮುಖ ಅಂಶವನ್ನು ಉಲ್ಲೇಖಿಸಿದ್ದಾರೆ. ಇನಾಮ್ ಅಬಾಲಿಶ್ ಆಕ್ಟ್ 1977 ಕ್ಕೆ 1979 ರಲ್ಲಿ ತಿದ್ದುಪಡಿ ತಂದಿದ್ದು ಅದರ ಪ್ರಕಾರ ತಹಸಿಲ್ದಾರ್ ಅವರಿಗೆ ಭೂಮಿಯ ಹಕ್ಕು ಸಂಬಂದಿಸಿದ ಆದೇಶ ನೀಡುವ ಅಧಿಕಾರ ಬರುವುದಿಲ್ಲ, ಆದೇಶ ನೀಡಿದ್ದರೆ ಅದು ಊರ್ಜಿತವಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ನ್ಯಾಯಾಲಯ ತಿಳಿಸಿದೆ.
4.ಕರ್ನಾಟಕ ಅಫೀಲ್ ಟ್ರಿಬನಲ್ :
ಜಿಲ್ಲಾದಿಕಾರಿಗಳ ನ್ಯಾಯಲಯ ದ ಆದೇಶವನ್ನು ಕರ್ನಾಟಕ ಅಫೀಲ್ ಟ್ರಿಬನಲ್ ( Appeal NO- 249/1999) ನಲ್ಲಿ ಪ್ರಶ್ನಿಸುತ್ತಾರೆ. 26-09-2000 ರಂದು ತೀರ್ಪು ನೀಡಿ ದ ಟ್ರಿಬನಲ್ ಎ,ಸಿ ಮತ್ತು ಡಿ.ಸಿ ಅವರ ಆದೇಶವನ್ನು ಎತ್ತಿ ಹಿಡಿಯುತ್ತದೆ.ಕೇಸ್ ಡಿಸ್ ಮಿಸ್ ಆಗುತ್ತದೆ.
5.ಹೈಕೋರ್ಟ್ ತೀರ್ಪು : WP-9393/2001
ಕರ್ನಾಟಕ ಅಫೀಲ್ ಟ್ರಿಬನಲ್ ಆದೇಶವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸುತ್ತಾರೆ. ( ಕೇಸ್ ನಂ – WP-9393/2001 AND 9713/2001 19-06-2002 ರಂದು ತೀರ್ಪು ಬರುತ್ತದೆ.
- ಎನ್ ಆರ್ ಅಶ್ವತ್ಥಕುಮಾರ್ ಮತ್ತು ಇತರರಿಗೆ ಹೈಕೋರ್ಟ್ ಭೂಮಿ ಹಕ್ಕು ಮತ್ತು ಭೂ ಪರಿವರ್ತನೆಗೆ ಅನುನತಿ ಸಿಗುವುದಿಲ್ಲ. ನಿಮಗೆ ಭೂಮಿಯ ಹಕ್ಕು ಬೇಕಾದರೆ ನೀವು ಸಿವಿಲ್ ನ್ಯಾಯಾಯದಲ್ಲಿ ಮೊದಲು ನಿಮ್ಮ ಭೂಮಿಯ ಹಕ್ಕನ್ನು ಪಡೆದು ನಂತರ ಭೂ ಪರಿವರ್ತನೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಹೇಳಿದೆ ಆದರೆ ಇವರು ಇಲ್ಲಿಯ ವರೆಗೂ ಸಿವಿಲ್ ನ್ಯಾಯಾಲಯದಲ್ಲಿ ಭೂಮಿಯ ಹಕ್ಕನ್ನು ಪಡೆದಿರುವ ಬಗ್ಗೆ ದಾಖಲೆಗಳು ಲಭ್ಯವಿಲ್ಲ.
- ಕಂದಾಯ ಅಧಿಕಾರಿಗಳು 23 ವರ್ಷಕಳೆದರು ಇಲ್ಲಿಯವರೆಗು ಟಿ ವಿ ವೆಂಕಟೇಶ್, ಎನ್ ಆರ್ ಅಶ್ವತ್ಥಕುಮಾರ್ ಮತ್ತು ಇತರ ರ ಹೆಸರಿಗೆ ಇರುವ ಭೂಮಿ ಹಕ್ಕನ್ನು ಸರ್ಕಾರದ ಹೆಸರಿಗೆ ಬದಲಾವಣೆ ಮಾಡಿಲ್ಲ, ಭೂಮಿಯನ್ನು ಸರ್ಕಾರ ವಶಕ್ಕೆ ಪಡೆದಿಲ್ಲ
ಪಾವಗಡ ತಹಸಿಲ್ಲಾರ್ 28-02-2024 ರಂದು ,ಮಧುಗಿರಿ ಎಸಿ 14-03-2024 ಮತ್ತು ತುಮಕೂರು ಜಿಲ್ಲಾಧಿಕಾರಿ 07-03-2024 ದೂರು ನೀಡಲಾಗಿತ್ತು ಆದರೆ ಇಂದಿನ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
ಜಿಲ್ಲಾಧಿಕಾರಿಗಳು, ತಹಸಿಲ್ದಾರ್ ಮತ್ತು ಅವರ ಸಿಬ್ಬಂದಿ ಹೈಕೋರ್ಟ್ ಆದೇಶ ಉಲ್ಲಂಘಿಸಿ ದೂರು ನೀಡಿದ ನಂತರ ಎನ್ ಎಸ್ ಮಂಜುನಾಥ್ ಗೆ ಭೂ ಪರಿವರ್ತನೆ ಮಾಡಿಕೊಟ್ಟಿದ್ದಾರೆ,
———————————————————————-ದೇವಸ್ಥಾನದ ಹೆಸರಿನಲ್ಲಿದ್ದ ಭೂಮಿ ಹೇಗೆ ಬದಲಾವಣೆ ಆಯ್ತು .

ಐದು ನ್ಯಾಯಾಲುದಲ್ಲಿ ಸೋಲು ಕಂಡ ಟಿ ವಿ ವೆಂಕಟೇಶ್, ಎನ್ ಆರ್ ಅಶ್ವಥ್ ಕುಮಾರ್ ಮತ್ತು ಇತರರಿಗೆ ಭೂಮಿ ಹಕ್ಕು ಹೇಗೆ ಬದಲಾಗುತ್ತದೆ….? ದೇವಸ್ಥಾನದ ಹೆಸರಿನಲ್ಲಿದ್ದ ಭೂಮಿ ಹಕ್ಕನ್ನು1994 ಪಾವಗಡ ತಹಸಿಲ್ದಾರ್ ಆಗಿದ್ದ ವ್ಯಕ್ತಿ ಭೂಮಿ ಹಕ್ಕು ( ಪಹಣಿ-ಮ್ಯೂಟೇಶನ್) ಬದಲಾವಣೆ ಮಾಡಿಕೊಟ್ಟಿದ್ದಾರೆ. ಆ ಸಮಯದಲ್ಲಿ ಬಸವರಾಜು ಎನ್ನುವವರು ತಹಸಿಲ್ದಾರ್ ಆಗಿದ್ದರು ಎನ್ನಲಾಗಿದೆ.
ತುಮಕೂರು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿರುವ ಸಂದರ್ಭದಲ್ಲಿ Case No /RA/10/92-93) RESPONDENT ಹಾಗಿರುವ ಪಾವಗಡ ತಾಹಸಿಲ್ದಾರ್ 14-2-1994 ರಂದು ಭೂಮಿಯ ಹಕ್ಕ ನ್ನು ಟಿ. ವಿ ವೆಂಕಟೇಶ್, ಎನ್ ಆರ್ ಅಶ್ವಥ್ ಕುಮಾರ್ ಮತ್ತು ಇತರರಿಗೆ ಬದಲಾವಣೆ ಮಾಡಿದ್ದಾರೆ.
ತಹಸಿಲ್ದಾರ್ ಗೆ – ಮಕ್ಮಲ್ ಟೋಪಿ
ಭೂಮಿ ಹಕ್ಕು ಬದಲಾವಣೆ ಮಾಡಲು ನೀಡಿರುವ ಕಾರಣ ಕೋರ್ಟ್ ಆದೇಶ….! ಖರೆ ಹನುಮಂತರಾಯಪ್ಪ11-5-1988 ರಂದು ಟಿ.ವಿ ವೆಂಕಟೇಶ್ ಮತ್ತು ಎನ್ ಆರ್ ಅಶ್ವಥ್ ಕುಮಾರ್ ಇತರರಿಗೆ ಜಮೀನು ಮಾರಾಟ ಮಾಡಿದ ಮೇಲೆ ಇದೆ ಖರೆ ಹನುಮಂತರಾಯಪ್ಪ ನಿಂದ 1990 ರಲ್ಲಿ ಪಾವಗಡ ಲ್ಯಾಂಡ್ ಟ್ರಿಬನಲ್ ಕೇಸ್ ಸಂಖ್ಯೆ INA NO 9/1983-84 ರ ಆದೇಶವನ್ನು ರದ್ದು ಪಡಿಸುವಂತೆ (WP 24311/1990) ಹೈಕೋರ್ಟ್ ಮೊರೆ ಹೋಗುತ್ತಾರೆ.
ಟಿ.ವಿ ವೆಂಕಟೇಶ್ ಮತ್ತು ಖರೆ ಹನುಮಂತರಾಯಪ್ಪ ಇಬ್ಬರು ಸಂದೀಪ್ ದವೆ ಅವರ ( NO. AGC.AC.CR(P) NO. 35/1990 -91 ) ಆದೇಶ ವನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಮತ್ತೊಂದು ಕೇಸ್ ( WP 4860/1991 ನ್ನು ಹಾಕುತ್ತಾರೆ. ನಂತರ ಕೇಸ್ ವಾಪಸ್ಸು ತೆಗೆದುಕೊಂಡಿದ್ದಾರೆ.
ಹೈಕೋರ್ಟ ಆದೇಶ :
ಪಾವಗಡ ಲ್ಯಾಂಡ್ ಟ್ರಿಬನಲ್ ಕೇಸ್ ಸಂಖ್ಯೆ INA NO 9/1983-84 ರ ಆದೇಶವನ್ನು ಪ್ರಶಿಸಿರುತ್ತಾರೆ – ಈ ಜಮೀನು ಇಮಾನು ಮುಕ್ತವಾಗಿದೆ. ಭೂ ನ್ಯಾಯಮಂಡಳಿ ಮಾಡಿರುವ ಆದೇಶದ ಬಗ್ಗೆ ನಾವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದು ಅನಗತ್ಯ, ಭೂ ನ್ಯಾಯಮಂಡಳಿ ಅಧಿಕಾರಿಗಳು ಇವರ ಅರ್ಜಿಯನ್ನು ಪರಿಗಣಿಸಿ ಕಾನೂನಿನ ಪ್ರಕಾರ ಸಾದ್ಯವಾದಷ್ಟು ಬೇಗ ಈ ವಿಷಯವನ್ನು ವಿಲೇವಾರಿ ಮಾಡುವುದು ಸೂಕ್ತ ಎಂದು ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.
ಜಿಲ್ಲಾಧಿಕಾರಿಗಳ ನ್ಯಾಯಾಲಯದ ತೀರ್ಪು 20-04- 1999 ರಂದು ಬರುತ್ತದೆ. ತೀರ್ಪು ಬರುವುದಕ್ಕೆ ಮುಂಚೆ RESPONDENT ಹಾಗಿರುವ ಪಾವಗಡ ತಾಹಸಿಲ್ದಾರ್ ಭೂಮಿ ಹಕ್ಕು ಬದಲಾವಣೆ ಮಾಡಿರುವುದು ಕಾನೂನೂ ಬಾಹಿರ ಅಲ್ಲವಾ,,,?
ಇನಾಮ್ ಅಬಾಲಿಶ್ ಆಕ್ಟ್ 1977 ಕ್ಕೆ 1979 ರಲ್ಲಿ ತಂದ ತಿದ್ದುಪಡಿ :
ಇನಾಮ್ ಅಬಾಲಿಶ್ ಆಕ್ಟ್ 1977 ಕ್ಕೆ 1979 ರಲ್ಲಿ ತಂದ ತಿದ್ದುಪಡಿ ಪ್ರಕಾರ ಜಿಲ್ಲಾದಿಕಾರಿ ಶ್ರೇಣಿ ಯ ಅಧಿಕಾರ ಮಾತ್ರ ಭೂಮಿ ಹಕ್ಕು ಬದಲಾವಣೆ ಮಾಡಲು ಅವಕಾಶ ನೀಡಲಾಗಿದೆ ಆದರೆ ಇಲ್ಲಿ ಪಾವಗಡ ತಾಹಸಿಲ್ದಾರ್ 14-2-1994 ರಂದು ಭೂಮಿಯ ಹಕ್ಕುನ್ನು ಎನ್ ಆರ್ ಅಶ್ವಥ್ ಕುಮಾರ್ ತಂಡಕ್ಕೆ ಭೂ ದಾಖಲೆ ಬದಲಾವಣೆ ಮಾಡಿರುವ ಆದೇಶ ಅಸಿಂಧು ಈ ಆದೇಶ ಕ್ಕೆ ಯಾವುದೇ ಪ್ರಾಮುಖ್ಯತೆ ಇಲ್ಲ ಎಂದು ಜಿಲ್ಲಾಧಿಕಾರಿಗಳ ತೀರ್ಪುನಲ್ಲಿ ಉಲ್ಲೇಖವಾಗಿದೆ.
ಕಂದಾಯ ಇಲಾಖೆ – ಸಾರ್ವಜನಿಕರಿಗೆ ಮೋಸ :
ಹೈಕೋರ್ಟ್ ನಲ್ಲಿ (ಕೇಸ್ ನಂ – WP-9393/2001 AND 9713/2001 ) 19-06-2002 ರಂದು ತೀರ್ಪು ಬರುತ್ತದೆ. ಇಲ್ಲಿ ಉಲ್ಲೇಖಿಸುರುವಂತೆ ಎಸ್ ಆರ್ ಅಶ್ವತ್ಥ್ ಕುಮಾರ್, ಟಿ ವಿ ವೆಂಕಟೇಶ್ ಮತ್ತು ಇತರರಿಗೆ ಸರ್ವೆ ನಂಬರ್ 249 ಮತ್ತು 250 ರಲ್ಲಿ ಭೂಮಿಯ ಹಕ್ಕು ಇಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದ್ದರು ಇವರು 23 ವರ್ಷದಿಂದ ಕಾನೂನೂ ಬಾಹಿರವಾಗಿ ಲೇಔಟ್ ಮಾಡಿ ಕೆಲವರಿಗೆ ಸೈಟ್ ಮಾರಿದ್ದಾರೆ ಎನ್ನಲಾಗುತ್ತಿದೆ
. ಎನ್ ಆರ್ ಅಶ್ವತ್ ಕುಮಾರ್ & ಟಿ ವಿ ವೆಂಕಟೇಶ ತಂಡಕ್ಕೆ ಈ ಜಮೀನಿ ನ ಹಕ್ಕು ಇಲ್ಲದೆ ಇದ್ದಾಗ ನಿವೇಶನ ಮಾರಾಟ ಮಾಡಿರುವುದು ಮೋಸ ಅಲ್ಲವಾ…?
ಸರ್ಕಾರ ಜಮೀನು ( ದೇವಸ್ಥಾನ) ಸೈಟ್ ಮಾಡಿ ಮಾರಟ ಮಾಡಲು ಇವರು ಯಾರು….? ಕಡಿಮೆ ಧರ ಕ್ಕೆ ನಿವೇಶನ ಸಿಗುತ್ತದೆ ಎಂದು ದಾಖಲೆ ಪರಿಶೀಲನೆ ಮಾಡದೆ ( ಲೀಗಲ್ ಒಪಿನಿಯನ್) ಖರೀದಿಸಿರುವುದು ಸಾರ್ವಜನಿಕರ ತಪ್ಪು ಅಲ್ಲ ವಾ…? ಇದಕ್ಕೆ ಯಾರು ಹೊಣೆ…!
ಸ್ವಂತ ಮನೆ ಇರಬೇಕು ಎನ್ನುವುದು ಮದ್ಯಮ ವರ್ಗದ ಕುಟುಂಗಳ ಕನಸು ಇಂತಹ ಬಲಹೀನತೆಯೆ ರಿಯಲ್ ಎಸ್ಟೇಟ್ ಮಾಫಿಯಾ ಗೆ ಅಸ್ತ್ರ.
ಎನ್ ಆರ್ ಅಶ್ವತ್ಥಕುಮಾರ್ ಮತ್ತು ಎನ್ ಎಸ್ ಮಂಜುನಾಥ್ ಇತರರು ಸತ್ಯವನ್ನು ಮುಚ್ಚಿಟ್ಟು ಕಂದಾಯ ಇಲಾಖೆ ಗೆ ಮೋಸ (cheating ) ಮಾಡಿ ಭೂ ಪರಿವರ್ತನೆ ಮಾಡಿಕೊಂಡಿದ್ದಾರೆ. ಪಾವಗಡ ತಹಸಿಲ್ಲಾರ್ / ತುಮಕೂರು ಜಿಲ್ಲಾಧಿಕಾರಿಗಳು ಇವರ ಮೇಲೆ cheating ಕೇಸ್ ಪೈಲ್ ಮಡಿ ಕ್ರಮ ಕೈಗೊಂಡಿಲ್ಲ ಯಾಕೆ….? ಇದು ಒಂದು ಯಕ್ಷ ಪ್ರಶ್ನೆ…?—
——————————————————–+————
ಸಪ್ತಸ್ವರ : ಸಾರಿಗೆ ಮತ್ತು ಮುಜರಾಯಿ ಸಚಿವರಿಗೆ ವಿವರಣೆ
ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿಯವರನ್ನು ಹಾಗೂ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರ ಕಚೇರಿಯನ್ನು ಸಪ್ತಸ್ವರ ಮಾದ್ಯಮ ಸಂಪರ್ಕಿಸಿ ಕೋಟೇಶ್ವರ ದೇವಸ್ಥಾನ ಜಮೀನು ನ ಸಂಪೂರ್ಣ ಕಥೆಯನ್ನು ವಿವರಿಸಿದ್ದು ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಕಾನೂನಾತ್ಮಕ ಕ್ರಮ ಕೈಗೊಳ್ಲುವ ಭರವಸೆ ನೀಡಿದ್ದಾರೆ.
ಕಂದಾಯ ಸಚಿವರ ಕಚೇರಿ ಯ ಆದೇಶ :
ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರ ಕಚೇರಿನ್ನು ಸಪ್ತಸ್ವರ ಮಾಧ್ಯಮದಿಂದ ಸಂಪರ್ಕಿಸಿ ಕೊಟೇಶ್ವರ ದೇವಸ್ಥಾನದ ಜಮೀನಿನ ಕಥೆಯನ್ನು ಹೇಳಿದಾಗ ಅವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಅಧಿಕಾರಿಗಳು ಮುಂಬರುವ ದಿನಗಳಲ್ಲಿ ಕ್ರಮ ಕೈಗೊಳ್ಳುತ್ತಾರ ಇಲ್ಲ ಲೋಕಾಯುಕ್ತ ಸಂಸ್ಥೆಯನ್ನು ಮೊರೆ ಹೋಗಬೇಕಾ ಎಂಬುದಕ್ಕೆ ಕಾಲ ವೇ ಉತ್ತರಿಸಬೇಕು……!
ಸಪ್ತಸ್ವರ ದ ಆಶಯ:
ಪಾವಗಡ ಪಟ್ಟಣ ದ ನಂತರ ಹೆಚ್ಚು ಜನ ಸಾಂದ್ರತೆ ಇರುವ ಊರು ಎಂದರೆ ವೈ ಎನ್ ಹೊಸಕೋಟೆ ಇಲ್ಲಿ ಒಂದು ಆಟದ ಮೈದಾನ ವಿಲ್ಲ. ಕೋಟೇಶ್ವರ ದೇವಸ್ಥಾನದ ಜಮೀನು ಸುತ್ತ – ಮುತ್ತ ವಿ ಎಸ್ ಮತ್ತು ಎಸ್ ಎಂ, ಪ್ರಿಯದರ್ಶಿನಿ ವಿದ್ಯಾ ಸಂಸ್ಥೆಗಳು ಸರ್ಕಾರಿ ಫೌಢಶಾಲೆ, ಆರ್ ವಿ.ಪಿ ಕಾಲೇಜ್‌ಗಳು ಇವೆ. ಈ ಎಲ್ಲಾ ಮಕ್ಕಳಿಗೆ ಆಟವಾಡಲು ಮೈದಾನ ಇಲ್ಲ
ಈ ಜಮೀನನ್ನು ಸರ್ಕಾರ ವಶಕ್ಕೆ ಪಡೆದು ಆಟದ ಮೈದಾನ ಮಾಡಿದರೆ ಮಕ್ಕಳಿಗೆ, ಹಿರಿಯ ನಾಗರೀಕರಿಗ ವಾಕ್ ಮಾಡುವ ಜಾಗ, ಜೊತೆಗೆ ಸರ್ಕಾರಿ ಕಾರ್ಯಕ್ರಮಗಳು(ಜಯಂತಿಗಳು) ರಾಜಕೀಯ ಪಕ್ಷಗಳ ಸಮಾವೇಶಗಳಿಗೆ ಒಂದು ಒಳ್ಳೆಯ ಸ್ಥಳ ಸಿಕ್ಕಂತೆ ಹಾಗುತ್ತದೆ ಎಂಬುದು ಸಪ್ತಸ್ವರ ದ ಆಶಯ…..