IMG 20250514 WA0018

Karnataka: ಕೆಕೆ ವಿಂಡ್ ಸಲ್ಯೂಷನ್ಸ್ ಹೊಸ ಘಟಕ‌ಆರಂಭ …..!

BUSINESS

ಕೆಕೆ ವಿಂಡ್ ಸಲ್ಯೂಷನ್ಸ್ ಬೆಂಗಳೂರಿನಲ್ಲಿ ಹೊಸ ಘಟಕ‌ಆರಂಭ

ಬೆಂಗಳೂರು, ಮೇ 14, 2025: ಎ.ಪಿ.ಮೊಲ್ಲರ್ ಹೋಲ್ಡಿಂಗ್ ಮಾಲೀಕತ್ವದ €1 ಬಿಲಿಯನ್ ಕಂಪನಿ ಕೆಕೆ ವಿಂಡ್ ಸಲ್ಯೂಷನ್ಸ್ ಭಾರತದ ಬೆಂಗಳೂರಿನಲ್ಲಿ ಹೊಸ ಉತ್ಪಾದನಾ ಸೌಲಭ್ಯ ಮತ್ತು ಕಛೇರಿಯನ್ನು ಉದ್ಘಾಟಿಸಿದ್ದು ತನ್ನ ಜಾಗತಿಕ ವಿಸ್ತರಣೆಯ ಕಾರ್ಯತಂತ್ರದಲ್ಲಿ ಮತ್ತು ನವೀಕರಿಸಬಲ್ಲ ಶಕ್ತಿಗೆ ತನ್ನ ಬದ್ಧತೆಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಈ ಸೌಲಭ್ಯವು ಏಷ್ಯಾದಲ್ಲಿ ಕೆಕೆ ವಿಂಡ್ ಸಲ್ಯೂಷನ್ಸ್ ಹೊಂದಿರುವ ಅತ್ಯಂತ ದೊಡ್ಡ ಮತ್ತು ಪ್ರಾದೇಶಿಕವಾಗಿ ಮತ್ತು ವಿಶ್ವದಾದ್ಯಂತ ಗ್ರಾಹಕರಿಗೆ ಸೇವೆ ಒದಗಿಸುತ್ತಿರುವ ತನ್ನ ಜಾಗತಿಕ ಪೂರೈಕೆ ಸರಣಿಯ ಪ್ರಮುಖ ಭಾಗವಾಗಿದೆ.

17,000 ಚದರ ಮೀಟರ್ ಫ್ಯಾಕ್ಟರಿಯು ದಾಬಸ್ ಪೇಟ್ ಕೈಗಾರಿಕಾ ಪಾರ್ಕ್ ನಲ್ಲಿದ್ದು 14,000 ಚದರ ಮೀಟರ್ ಉತ್ಪಾದನೆ ಮತ್ತು ಲಾಜಿಸ್ಟಿಕ್ ಪ್ರದೇಶ ಮತ್ತು 3,000 ಚದರ ಮೀಟರ್ ಕಛೇರಿ ಪ್ರದೇಶ ಹೊಂದಿದೆ. ಏಪ್ರಿಲ್ 2025ರಲ್ಲಿ ಉತ್ಪಾದನೆ ಪ್ರಾರಂಭವಾಗಿದ್ದು ಈ ಸೌಲಭ್ಯವು 400 ಜನರಿಗೆ ಉದ್ಯೋಗ ನೀಡುವ ನಿರೀಕ್ಷೆ ಇದೆ ಮತ್ತು ಪವನ ಉದ್ಯಮಕ್ಕೆ ಸುಧಾರಿತ ಕನ್ವರ್ಟರ್ ಗಳು ಕಂಟ್ರೋಲ್ ಸಿಸ್ಟಂಗಳನ್ನು ಪೂರೈಸಲಿದೆ.

ಸುಸ್ಥಿರತೆಯ ವಿಶೇಷತೆಗಳಲ್ಲಿ ತಾರಸಿಯ ಸೌರ ಪ್ಯಾನೆಲ್ ಗಳು ಮತ್ತು ಇವಿ ಚಾರ್ಜಿಂಗ್ ಸ್ಟೇಷನ್ ಗಳನ್ನು ಅದರ ವಿನ್ಯಾಸದಲ್ಲಿ ಅಳವಡಿಸಲಾಗಿದೆ.
ಅಧಿಕೃತ ಉದ್ಘಾಟನಾ ಕಾರ್ಯಕ್ರಮದಲ್ಲಿ ಡ್ಯಾನಿಷ್ ಕಾನ್ಸುಲ್ ಜನರಲ್ ಎಸ್ಕೆ ಬೊ ರೊಸೆನ್ ಬರ್ಗ್ ಮತ್ತು ಕೆಕೆ ವಿಂಡ್ ನ ಜಾಗತಿಕ ನಾಯಕತ್ವ ತಂಡ ಉಪಸ್ಥಿತರಿದ್ದು ಹಸಿರು ಕಾರ್ಯತಂತ್ರೀಯ ಪಾಲುದಾರಿಕೆಯಲ್ಲಿ ಭಾರತ- ಡೆನ್ಮಾರ್ಕ್ ಸಹಕಾರದ ಪ್ರಾಮುಖ್ಯತೆಗೆ ಒತ್ತು ನೀಡಿದರು. ಈ ಕಾರ್ಖಾನೆಗೆ ಪೂರಕವಾಗಿ ಕಂಪನಿಯು ಬೆಂಗಳೂರಿನಲ್ಲಿ ಹೊಸ ನಗರ ಕಛೇರಿ ತೆರೆದಿದ್ದು ಅಲ್ಲಿ 150 ಉದ್ಯೋಗಿಗಳ ಜಾಗತಿಕ ಸೇವೆಗಳ ತಂಡ ಕಾರ್ಯ ನಿರ್ವಹಿಸುತ್ತದೆ.IMG 20250514 WA0017

“ಜಾಗತಿಕ ಪವನ ಶಕ್ತಿಯ ಮೌಲ್ಯಸರಣಿಯಲ್ಲಿ ಭಾರತವು ಪ್ರಮುಖ ಕೇಂದ್ರವಾಗುತ್ತಿದೆ ಮತ್ತು ಭಾರತದ ಬೆಂಗಳೂರು ನಮ್ಮ ವಿಸ್ತರಣೆಗೆ ಸಹಜ ಆಯ್ಕೆಯಾಗಿದೆ. ಈ ನಗರವು ಪ್ರಖ್ಯಾತ ವಿಶ್ವವಿದ್ಯಾಲಯಗಳು ಮತ್ತು ತಾಂತ್ರಿಕ ಸಂಸ್ಥೆಗಳನ್ನು ಹೊಂದಿದ್ದು ಎಂಜಿನಿಯರಿಂಗ್ ವೃತ್ತಿಪರರ ಅಪಾರ ಪ್ರತಿಭಾ ಸಮೂಹ ಹೊಂದಿದೆ” ಎಂದು ಕೆಕೆ ವಿಂಡ್ ಸಲ್ಯೂಷನ್ಸ್ ಸಿಇಒ ಮೌರಿಸಿಯೊ ಕ್ವಿಂಟಾನಾ ಹೇಳಿದರು. “ಈ ಹೊಸ ಸೌಲಭ್ಯಗಳ ಮೂಲಕ ನಮ್ಮ ಪೂರೈಕೆ ಸರಣಿಯು ಈಗ ಹೆಚ್ಚು ಜಾಗತಿಕವಾಗಿದ್ದು ನಮಗೆ ಉನ್ನತ ಗುಣಮಟ್ಟದ ಪವರ್ ಕಂಟ್ರೋಲ್ ಮತ್ತು ಕನ್ವರ್ಟರ್ ಪರಿಹಾರಗಳನ್ನು ವಿಶ್ವದಾದ್ಯಂತ ನಮ್ಮ ಗ್ರಾಹಕರಿಗೆ ಪೂರೈಸಲು ಸಾಧ್ಯವಾಗಿದೆ” ಎಂದರು. “ಡೆನ್ಮಾರ್ಕ್ ನಲ್ಲಿ ಸ್ಥಾಪನೆಯಾದ ಜಾಗತಿಕ ಕಂಪನಿಯಾಗಿ ನಾವು ಉದ್ಯೋಗ ಸೃಷ್ಟಿಸುವ, ಜ್ಞಾನ ವರ್ಗಾವಣೆ ಮಾಡುವ ಮತ್ತು ಸ್ವಚ್ಛ ಶಕ್ತಿಯ ಅಳವಡಿಕೆಯನ್ನು ಹೆಚ್ಚಿಸುವ ಈ ಸಹಯೋಗಕ್ಕೆ ಕೊಡುಗೆ ನೀಡಲು ನಾವು ಹೆಮ್ಮೆ ಪಡುತ್ತೇವೆ. ಒಟ್ಟಿಗೆ ಭಾರತದಲ್ಲಿ ನಮ್ಮ ಪಾಲುದಾರರೊಂದಿಗೆ ನಾವು ನವೀಕರಿಸಬಲ್ಲ ಭವಿಷ್ಯಕ್ಕೆ ಪರಿಹಾರಗಳನ್ನು ರೂಪಿಸುತ್ತಿದ್ದೇವೆ” ಎಂದರು.

ಕೆಕೆ ವಿಂಡ್ ಸಲ್ಯೂಷನ್ಸ್ ಬೆಂಗಳೂರಿನಲ್ಲಿ 2017ರಿಂದ ಕಾರ್ಯಾಚರಣೆ ನಡೆಸುತ್ತಿದೆ ಮತ್ತು ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿ ಮತ್ತು ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ತನ್ನ ಸ್ಥಳೀಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಕಂಪನಿಯ ಹೂಡಿಕೆಯು ಭಾರತದ ಸ್ವಚ್ಛ ಶಕ್ತಿಯ ಗುರಿಗಳಿಗೆ ತನ್ನ ದೀರ್ಘಾವಧಿ ಬದ್ಧತೆಯನ್ನು ಹಾಗೂ ಜಾಗತಿಕ ನವೀಕರಿಸಬಲ್ಲ ಪರಿವರ್ತನೆಗೆ ಬೆಂಬಲಿಸುವಲ್ಲಿ ತನ್ನ ಪಾತ್ರವನ್ನು ತೋರುತ್ತದೆ.

Leave a Reply

Your email address will not be published. Required fields are marked *