ಸಿದ್ದಾಪುರ ಗ್ರಾಮಪಂಚಾಯತಿ ವ್ಯಾಪ್ತಿಯ ಜಾಲೋಡುನಲ್ಲಿ ಘಟನೆ….
ರಸ್ತೆ ಮೇಲೆ ಹರಿದ ಚರಂಡಿ ನೀರು. ಗ್ರಾಮಸ್ಥರ ಹಿಡಿ ಶಾಪ.
ಪಾವಗಡ: ಚರಂಡಿ ಬ್ಲಾಕ್ ಆಗಿ ಚರಂಡಿಯ ನೀರು ರಸ್ತೆಗೆ ಹರಿದಿರುವ ಘಟನೆ ತಾಲ್ಲೂಕಿನ ವೈ. ಎನ್ ಹೊಸಕೋಟೆ ಹೋಬಳಿಯ ಸಿದ್ದಾಪುರ ಗ್ರಾಮಪಂಚಾಯತಿ ವ್ಯಾಪ್ತಿಯ ಚಿಕ್ಕಜಾಲೊಡು ಗ್ರಾಮದಲ್ಲಿ ನಡೆದಿದೆ.
ಚರಂಡಿಯ ನೀರು ರಸ್ತೆ ಮೇಲೆ ನಿಂತಿದ್ದರಿಂದ ದುರ್ನಾತ ಬೀರುತ್ತಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ ಎಂದು ಚಿಕ್ಕಜಾಲೊಡು ಗ್ರಾಮಸ್ಥರು ತಿಳಿಸಿದ್ದಾರೆ.
ಚರಂಡಿ ಬ್ಲಾಕ್ ಆಗಿ ತಿಂಗಳುಗಳು ಕಳೆದರೂ ಪಂಚಾಯತಿ ಅಧಿಕಾರಿಗಳು ಗಮನಹರಿಸದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮದಲ್ಲಿ ಸುಮಾರು 2500 ಸಾವಿರ ಜನಸಂಖ್ಯೆ ಇದ್ದು ದಿನ ನಿತ್ಯ ಈ ರಸ್ತೆಯಲ್ಲೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಂದಿದ್ದಾರೆ ಗ್ರಾಮಸ್ಥರು.
ತಾಲೂಕು ಕಾರ್ಯನಿರ್ವಹಣಾಧಿಕಾರಿ ಜಾನಕಿರಾಮ್ ಚಿಕ್ಕಜಾಲೊಡು ಗ್ರಾಮಕ್ಕೆ ಭೇಟಿ ನೀಡಿ ಚರಂಡಿಯ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ವರದಿ : ಶ್ರೀನಿವಾಸಲು ಎ