ಬೆಂಗಳೂರು : ಪಾವಗಡ ತಾಲ್ಲೂಕು ಜನತಾದಳ ನಾಯಕರು ಮತ್ತು ಜೆಡಿ ಎಸ್ ಅಭ್ಯರ್ಥಿ ತಿಮ್ಮರಾಯಪ್ಪ ಅವರ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಜೆಡಿ (ಎಸ್) ನ ಹಿರಿಯ ನಾಯಕ ವಳ್ಳೂರಿನ ಚನ್ನಕೇಶವರೆಡ್ಡಿ ಯವರು ಇತ್ತೀಚೆಗೆ ಜನಾರ್ಧನ ರೆಡ್ಡಿಯವರ ಪಕ್ಷ ಸೇರಿದ್ದರು. ನೇರಳ ಕುಂಟೆ ನಾಗೇಂದ್ರ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಇಂದು ನೆಡೆದ ರಾಜಕೀಯ ಬೆಳವಣಿಗೆಯಲ್ಲಿ ಅವರು ಮಾತೃ ಪಕ್ಷ ವಾದ ಜೆಡಿ ಎಸ್ ಗೆ ವಾಪಸ್ಸು ಬಂದಿರುವುದಾಗಿ ಸಪ್ತಸ್ವರ ಕ್ಕೆ ತಿಳಿಸಿದ್ದಾರೆ.
ಜೆಡಿ ಎಸ್ ನ ಮಾಜಿ ಸಂಸದರಾದ ಕುಪೇದ್ರರೆಡ್ಡಿ ಮತ್ತು ಕುಮಾರಸ್ವಾಮಿ ಯವರು ಚನ್ನಕೇಶವ ರೆಡ್ಡಿ ಯವರನ್ನು ಬೆಂಗಳೂರಿನ ಕುಪೇಂದ್ರ ರೆಡ್ಡಿ ಯವರ ನಿವಾಸದಲ್ಲಿ ಕರೆಸಿಕೊಂಡು ಮಾತುಕತೆ ನಡೆಸಿದ ನಂತರ ಇವರು ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ.
ಪಾವಗಡ ತಾಲ್ಲೂಕಿನಲ್ಲಿ ಜೆಡಿ ಎಸ್ ಪಕ್ಷದಲ್ಲಿನ ಆಂತರಿಕ ವಿಷಯಗಳನ್ನು ಹಿರಿಯರ ಗಮನಕ್ಜೆ ತಂದಿದ್ದೇನೆ. ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಮಾಜಿ ಶಾಸಕ ಪ್ರಸ್ತುತ ಅಭ್ಯರ್ಥಿ ತಿಮ್ಮರಾಯಪ್ಪ ಅವರನ್ನು ಕರೆದು ಮಾತನಾಡುತ್ತೇವೆ ಮತ್ತು ಪಕ್ಷದಲ್ಲಿನ ಆಂತರಿಕ ಸಮಸ್ಯೆ ಗಳನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ.
ಮಾಜಿ ಸಂಸದ ಕುಪೇಂದ್ರರೆಡ್ಡಿ ಪಾವಗಡ ವಿಧಾನ ಕ್ಷೇತ್ರ ದ ಜವಾಬ್ದಾರಿ ಯನ್ನು ವಹಿಸಿಕೊಳ್ಲಲಿದ್ದಾರೆ ಎಂದು ಚನ್ನಕೇಶವ ರೆಡ್ಡಿ ಯವರು ತಿಳಿಸಿದ್ದಾರೆ.