ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ ಸದಸ್ಯರಾಗಿ ಡಾಕ್ಟರ್ ಡಿ ಕೆ ಚಿತ್ತಯ್ಯ ಪೂಜಾರ್ ಆಯ್ಕೆ.
ಪಾವಗಡ : ತಾಲೂಕಿನ ದವಡಬೆಟ್ಟ ಗ್ರಾಮದ ಡಾಕ್ಟರ್ ಡಿ ಕೆ ಚಿತ್ತಯ್ಯ ಪೂಜಾರ್ ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ವಿಭಾಗದ ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಕನ್ನಡ ಸಾಹಿತ್ಯ ,ಜಾನಪದ, ಶಾಸನ ,ಸಂಸ್ಕೃತಿ, ಮೊದಲಾದ ಕ್ಷೇತ್ರಗಳಲ್ಲಿ ಸುಮಾರು 60 ಕ್ಕಿಂತಲೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ನಾಡಿನ ವಿದ್ವತ್ ವಲಯದ ಗಮನ ಸೆಳೆದಿದ್ದು,
ಬೆಂಗಳೂರು ವಿ.ವಿ.ಕನ್ನಡ ಪ್ರಾಧ್ಯಾಪಕರಾದ ಡಾ. ಡಿ ಕೆ ಚಿತ್ತಯ್ಯ ಪೂಜಾರ್ ಸೇವೆ ಸಲ್ಲಿಸಿದ್ದಾರೆ.
ದವಡಬೆಟ್ಟದ, ವ್ಯಕ್ತಿ ದೆಹಲಿಯ ರಾಷ್ಟ್ರಮಟ್ಟದ ಸಾಹಿತ್ಯ ಅಂಗಳದೊಳಗೆ ಹೆಜ್ಜೆ ಇಟ್ಟಿರುವುದು ಹೆಮ್ಮೆಯ ಸಂಗತಿ ಎಂದು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಟ್ಟಾ ನರಸಿಂಹಮೂರ್ತಿ ಹಾಗೂ ಕಾರ್ಯಕಾರಿ ಸಮಿತಿಯವರು ಅಭಿನಂದಿಸಿದ್ದಾರೆ.
ವರದಿ. ಶ್ರೀನಿವಾಸಲು.ಎ