ಪಾವಗಡ:- ಇಷ್ಟು ದಿನಗಳ ಕಾಲ ಪಾವಗಡ ತಾಲ್ಲೂಕಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿದ್ದ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಗದ್ದುಗೇರೊ ಸ್ಥಾನದ ಮೀಸಲಾತಿಗಾಗಿ ಕಾದು ಕೂತಿದ್ದರು.
ಆ ಹಿನ್ನೆಲೆ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ರವರು ನಿಗದಿ ಮಾಡಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿಯನ್ನು ಇಂದು ಪಟ ಎಸ್ ಎಸ್.ಕೆ ಸಮುದಾಯ ಭವನದಲ್ಲಿ ಎಲ್ಲಾ ಸದಸ್ಯರ ಸಮ್ಮುಖದಲ್ಲೇ ಅನಾವರಣಗೊಳಿಸಲಾಯಿತು.
ಕಳೆದ ಡಿ.22 ಕ್ಕೆ ನಡೆದಿದ್ದ ತಾಲ್ಲೂಕಿನ 33 ಗ್ರಾಮ ಪಂಚಾಯಿತಿ ಲೋಕಲ್ ಚುನಾವಣೆ ನಡೆದಿತ್ತು.
ಅಧ್ಯಕ್ಷ, ಉಪಾಧ್ಯಕ್ಷರ ಕುರ್ಚಿಗೆ ಮಾತ್ರ ಗ್ರೀನ್ ಸಿಗ್ನಲ್ ಸಿಗದೆ ಕ್ಯೂರಿಯಾಸಿಟಿಯಿಂದ ಕಾದಿದ್ದ ಸದಸ್ಯರಿಗೆ ಮೀಸಲಾತಿ ಹೊರಬಿದ್ದ ಹಿನ್ನೆಲೆ ಕೆಲ ಸದಸ್ಯರಿಗೆ ನಿರಾಸೆ ಮೂಡಿತ್ತು.ಇನ್ನು ಕೆಲ ಸದಸ್ಯರಿಗೆ ಸಂತಸ ಮನೆ ಮಾಡಿತ್ತು.
ತಾಲ್ಲೂಕಿನ 34 ಗ್ರಾಂ. ಪಂಚಾಯಿತಿಯ ಮೀಸಲಾತಿಯನ್ನ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ರವರು ಈ ಹಿಂದೆ ನಿಗದಿಯಾಗಿದ್ದ ಮೀಸಲಾತಿಯನ್ನು ಆಧರಿಸಿ ಮರುಕಳಿಸದಂತೆ ತಂತ್ರಜ್ಞಾನದ ಸಹಕಾರದೊಂದಿಗೆ ಮೀಸಲಾತಿಯನ್ನ ಅನಾವರಣಗೊಳಿಸಿದರು.
ಅಧ್ಯಕ್ಷ ಸ್ಥಾನ ಮತ್ತು ಉಪಾಧ್ಯಕ್ಷ ಸಾಮಾನ್ಯ ಮೀಸಲಾತಿ 17 ಗ್ರಾ.ಪಂ ಗಳಲ್ಲಿ 8 ಮಹಿಳೆಯರು,9 ಪುರುಷರು ಆಯ್ಕೆಯಾಗಿ ಮಹಿಳಾ ಅಧ್ಯಕ್ಷ ಕ್ಷೇತ್ರವಾಗಿದೆ. ಇನ್ನು ಉಳಿದಂತೆ ಹದಿನೇಳು ಎಸ್ ಸಿ ,ಎಸ್ ಟಿ, ಸಾಮಾನ್ಯ ಮೀಸಲಾತಿ ಕ್ಷೇತ್ರಗಳಲ್ಲಿ ಮುಕ್ತವಾಗಿ ಯಾರು ಬೇಕಾದರೂ ಆಯ್ಕೆಯ ಸ್ಪರ್ದೆ ನಡೆಸಬಹುದಾಗಿದೆ ಎನ್ನಲಾಗಿದೆ. ಅರಸೀಕರೆ ಪಂಚಾಯಿತಿ 2ಎ ಮೀಸಲಾತಿ ಕ್ಷೇತ್ರವಾಗಿ ಆಯ್ಕೆಯಾಗಿದೆ.
ವೈ ಎನ್ ಹೊಸಕೋಟೆ ಪಂಚಾಯತಿ: ಮಹಿಳೆಯರ ಕಾರು- ಬಾರು….
ವೈ ಎನ್ ಹೊಸಕೋಟೆ ಅಧ್ಯಕ್ಷ ಪರಿಶಿಷ್ಟ ಪಂಗಡ ಮಹಿಳೆ,ಉಪಾಧ್ಯಕ್ಷ ಹುದ್ದೆ ಬಿಸಿಎಂ ಎ ಮಹಿಳೆ ಗೆ ನಿಗದಿಯಾಗಿದೆ
ಬೆಳಿಗ್ಗೆ ಆರಂಭವಾದ ಮೀಸಲಾತಿ ಪ್ರಕಟಣೆ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿ ಆತಂಕಗಳು ಮೂಡದಿರಲಿ ಎಂದು ಡಿ.ವೈ ಎಸ್ಪಿ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಮಾಡಲಾಗಿತ್ತು.
ಒಟ್ಟಾರೆ ಕಾದು ಕೂತಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಆಸೆ ಹೊತ್ತು ಕನಸು ಕಂಡಿದ್ದ ಆಕಾಂಕ್ಷಿಗಳಿಗೆ ಕ್ಯಾಟಗೆರಿ ಕೈ ತಪ್ಪಿ ನಿರಾಸೆ ಮೂಡಿಸಿತ್ತು.ಮತ್ತೆ ಕೆಲವರಿಗೆ ಮೀಸಲಾತಿ ಸಿಕ್ಕಿದ ಕೂಡಲೆ ಮನಗಳಲ್ಲಿ ಹರ್ಷ ಮನೆಮಾಡಿತ್ತು.
ಏನೇ ಇರ್ಲಿ ಯಾರೇ ಗ್ರಾಮ ಪಂಚಾಯಿತಿ ಗದ್ದುಗೆಯ ಅಧಿಕಾರದ ಚುಕ್ಕಾಣಿ ಹಿಡಿಯಲಿ..ಆದರೆ ಸ್ವಾರ್ಥಕ್ಕಾಗಿ ಆಡಳಿತ ನಡೆಸದೆ ಜನಸಾಮಾನ್ಯರ ಆರ್ತನಾದ ಅರಿತು ಜನ ಸೇವೆ ಮಾಡಿ ಋಣ ತೀರಿಸಿ ಅನ್ನೋದು ನಮ್ಮ ಆಶಯ.
ವರದಿ: ನವೀನ್ ಕಿಲಾರ್ಲಹಳ್ಳಿ