IMG 20250204 WA0009

ಪಾವಗಡ : ರಥಸಪ್ತಮಿ ಅಂಗವಾಗಿ ವಿಶೇಷ ಪೂಜೆ….!.

DISTRICT NEWS ತುಮಕೂರು

ರಥಸಪ್ತಮಿ ಅಂಗವಾಗಿ ವಿಶೇಷ ಪೂಜಾ ಉತ್ಸವ.

ಪಾವಗಡ : ಪಟ್ಟಣದ ಶ್ರೀ ಕ್ಷೇತ್ರ ಶ್ರೀ ಶನಿಮಹಾತ್ಮ ದೇವಸ್ಥಾನದಲ್ಲಿ ಸ್ವಸ್ತಿ ಶ್ರೀ ಕ್ರೋಧಿನಾಮ ಸಂವತ್ಸರ ಮಾಘ ಶುದ್ಧ ಸಪ್ತಮಿ ಯಂದು ಮಂಗಳವಾರ ಶ್ರೀ ಜೇಷ್ಠಾದೇವಿ ಮತ್ತು ಶನೈಶ್ಚರಸ್ವಾಮಿಯವರಿಗೆ ರಥಸಪ್ತಮಿ ಯ ಪ್ರಯುಕ್ತ ವಿಶೇಷ ಪೂಜಾದಿಗಳನ್ನು ಹಾಗೂ ಅಭಿಷೇಕವನ್ನು ಏರ್ಪಡಿಸಲಾಯಿತು.

ಬೆಳಿಗ್ಗೆ 5-00 ಗಂಟೆಗೆ ಅರುಣಪೂರ್ವಕ ಸೂರ್ಯಾರಾಧನೆ, ಅಭಿಷೇಕಗಳು ಸಹಸ್ರನಾಮಾರ್ಚನೆ, ಅಲಂಕಾರ, ಮಹಾಮಂಗಳಾರತಿ.

ಬೆಳಿಗ್ಗೆ 9-00 ಗಂಟೆಗೆ ಸಪ್ತಾಶ್ವವಾಹನೋತ್ಸವ, ಸೂರ್ಯಮಂಡಲೋತ್ಸವ. ಮಧ್ಯಾಹ್ನ 12-30 ಗಂಟೆಗೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

ಕಾರ್ಯಕ್ರಮದ ಬಗ್ಗೆ ಎಸ್ ಎಸ್ ಕೆ ಸಂಘದ ಅಧ್ಯಕ್ಷರಾದ ಸಿಎನ್ ಆನಂದರಾವ್ ಮಾತನಾಡಿ,

ರಥಸಪ್ತಮಿಯಂದು ಸೂರ್ಯನು ವೃತ್ತ ಬದಲಾಯಿಸುತ್ತಾನೆ.
ಆದರಿಂದ ವಿಶೇಷವಾಗಿ ಶ್ರೀ ಶನಿ ಮಹಾತ್ಮ ದೇವಾಲಯದಲ್ಲಿ ಸೂರ್ಯರಾದನೆ, ಆದಿತ್ಯ ಹೃದಯ, ಸೂರ್ಯ ನಮಸ್ಕಾರ, ಅರುಣಾ ಸ್ತೋತ್ರ ಪೂಜಾ ಕೈಂಕರ್ಯ ಮಾಡಲಾಗಿದೆ ಎಂದರು.

ಬೆಳಿಗ್ಗೆ 5 ಐದರಿಂದ ಎಂಟು ಗಂಟೆಯವರೆಗೂ ಸೂರ್ಯರಾದನೆಗೆ ಸಾಕಷ್ಟು ಜನ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಸೂರ್ಯ ನಮಸ್ಕಾರ ಮಾಡಿದ್ದಾರೆ ಎಂದರು.
ದೇವಾಲಯದ ಮೂಲ ಪ್ರತಿಮೆ ನವಗ್ರಹಗಳಾಗಿದ್ದು ನವಗ್ರಹಗಳಲ್ಲಿ ಒಂದಾದ ಸೂರ್ಯದೇವರು ಪ್ರಮುಖವೆಂದರು ದೇವಾಲಯದಲ್ಲಿ ಸೂರ್ಯ ಜಪ, ಸೂರ್ಯ ನಮಸ್ಕಾರ ಆದಿತ್ಯ ಪಾರಾಯಣ, ಏರ್ಪಡಿಸಲಾಗಿತ್ತು ಎಂದು ಎಲ್ಲಾ ಭಕ್ತಾದಿಗಳಿಗೂ ಒಳ್ಳೇದಾಗಲಿ ಎಂದು ಪೂಜಾ ಪುನಸ್ಕಾರಗಳನ್ನು ಹಮ್ಮಿಕೊಳ್ಳಲಾಯಿತು ಎಂದರು

ರಾತ್ರಿ 7-30 ಗಂಟೆಗೆ ಕುಂಕುಮಾರ್ಚನೆ, ಮಹಾಮಂಗಳಾರತಿ ನಡೆಯುವುದೆಂದು ಭಕ್ತಾದಿಗಳು ಭಾಗವಹಿಸಿ, ಸ್ವಾಮಿಯ ಕೃಪೆಗೆ ಪಾತ್ರರಾಗಲು ತಿಳಿಸಿದ್ದಾರೆ

ವರದಿ : ಶ್ರೀನಿವಾಸಲು ಎ

Leave a Reply

Your email address will not be published. Required fields are marked *