images 65

ಭಾರತದಲ್ಲಿ ಮೂರು ದಶಕಗಳಲ್ಲಿ ದ್ವಿಗುಣಗೊಂಡ ಕ್ಯಾನ್ಸರ್ ಪ್ರಕರಣಗಳು….!

BUSINESS Genaral STATE

ಭಾರತದಲ್ಲಿ ಮೂರು ದಶಕಗಳಲ್ಲಿ ದ್ವಿಗುಣಗೊಂಡ ಕ್ಯಾನ್ಸರ್ ಪ್ರಕರಣಗಳು

ತಂಬಾಕು ಸೇವನೆಯಿಂದ ಶ್ವಾಸಕೋಶ, ಬಾಯಿ ಮತ್ತು ಗಂಟಲು ಕ್ಯಾನ್ಸರ್ ಗಳ ಪ್ರಮಾಣ ಶೇ.40 ರಷ್ಟಿದೆ

ಬೆಂಗಳೂರು, ಫೆಬ್ರವರಿ 3, 2025: ಕಳೆದ ಕೆಲವು ದಶಕಗಳಿಂದ ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. 1990 ರಲ್ಲಿದ್ದ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಗಿಂತ 2025 ರಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣವಾಗಬಹುದೆಂದು ಅಂದಾಜಿಸಲಾಗಿತ್ತು. ಅಂದರೆ 1.57 ಮಿಲಿಯನ್ ಪ್ರಕರಣಗಳು ಎಂದು ನಿರೀಕ್ಷೆ ಮಾಡಲಾಗಿತ್ತು. ಇದರ ಪರಿಣಾಮ ಭಾರತ ವಿಶ್ವದ ಕ್ಯಾನ್ಸರ್ ರಾಜಧಾನಿಯಾಗಿ ಹೊರಹೊಮ್ಮಿದೆ ಎಂದು ಬೆಂಗಳೂರಿನ ಸಂಪ್ರದ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ನ ತಜ್ಞ ವೈದ್ಯರು ಹೇಳಿದ್ದಾರೆ.

ವಿಶ್ವ ಕ್ಯಾನ್ಸರ್ ದಿನದ ಹಿನ್ನೆಲೆಯಲ್ಲಿ ದೇಶದಲ್ಲಿ ಕ್ಯಾನ್ಸರ್ ಪ್ರಕರಣಗಳ ಬಗ್ಗೆ ಅಂಕಿಅಂಶಗಳನ್ನು ನೀಡಿರುವ ವೈದ್ಯರು, ಈ ಮಾರಕ ರೋಗದ ನಿಯಂತ್ರಣದ ಬಗ್ಗೆ ಗಮನಹರಿಸಬೇಕೆಂದು ಕರೆ ನೀಡಿದ್ದಾರೆ.
ಬೆಂಗಳೂರಿನ ಸಂಪ್ರದ ಹಾಸ್ಪಿಟಲ್ ನ ಕನ್ಸಲ್ಟೆಂಟ್ ಮೆಡಿಕಲ್ ಆಂಕಾಲಾಜಿಸ್ಟ್, ಹೆಮಟೋಲಾಜಿಸ್ಟ್ ಮತ್ತು ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಫಿಸಿಶಿಯನ್ ಡಾ.ರಾಧೇಶಾಂ ನಾಯಕ್ ಅವರು ಮಾತನಾಡಿ, “ವರ್ಷಗಳು ಕಳೆದಂತೆ ಜನಸಂಖ್ಯೆ ಹೆಚ್ಚಳ, ವಯಸ್ಸಾದವರ ಸಂಖ್ಯೆಯಲ್ಲಿನ ಹೆಚ್ಚಳ, ಸುಧಾರಿತ ಚಿಕಿತ್ಸಾ ಸೌಲಭ್ಯಗಳು ಮತ್ತು ಧೂಮಪಾನ, ಮದ್ಯಪಾನ, ಕೆಟ್ಟ ಆಹಾರ ಪದ್ಧತಿ, ಬೊಜ್ಜು, ವ್ಯಾಯಾಮದ ಕೊರತೆಯಿಂದಾಗಿ ದೇಶದಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ತಂಬಾಕಿನಿಂದ ಕ್ಯಾನ್ಸರ್ ಬರುತ್ತಿದ್ದು, ಇದರಿಂದ ಶ್ವಾಸಕೋಶ, ಬಾಯಿ ಮತ್ತು ಗಂಟಲು ಕ್ಯಾನ್ಸರ್ ಬರುತ್ತಿದೆ. ಭಾರತದಲ್ಲಿ ಇಂತಹ ಕ್ಯಾನ್ಸರ್ ರೋಗಿಗಳ ಪ್ರಮಾಣ ಶೇ.40 ರಷ್ಟಿದೆ. ಮಹಿಳೆಯರಲ್ಲಿ ಹೆಚ್ಚಾಗಿ ಕ್ಯಾನ್ಸರ್ ರೋಗಗಳು ಕಂಡುಬರುತ್ತಿವೆ. ಅಂದರೆ, ಪ್ರತಿ 1,00,000 ಜನರಲ್ಲಿ 105 ಜನರಿಗೆ ಈ ಮಾರಕರೋಗ ಬರುತ್ತಿದೆ. ಅದೇ ಪುರುಷರಲ್ಲಿ ಪ್ರತಿ 1,00,000 ಜನರಲ್ಲಿ 95 ಜನರಿಗೆ ರೋಗ ಕಾಣಿಸಿಕೊಳ್ಳುತ್ತಿದೆ’’ ಎಂದು ಆತಂಕ ವ್ಯಕ್ತಪಡಿಸಿದರು.IMG 20250203 WA0002

ಸಂಪ್ರದ ಹಾಸ್ಪಿಟಲ್ ನ ಪ್ರಿವೆಂಟಿವ್ ಆಂಕಾಲಾಜಿಸ್ಟ್ ಡಾ.ವಿನೋದ್ ಅವರು ಮಾತನಾಡಿ, “ಭಾರತದಲ್ಲಿ ಕ್ಯಾನ್ಸರ್ ಚಿಕಿತ್ಸೆ ಹಲವಾರು ಸವಾಲುಗಳಿಂದ ಕೂಡಿದೆ. ರೋಗಿಗಳಲ್ಲಿ ಈ ರೋಗ ಪತ್ತೆ ವಿಳಂಬವಾಗುತ್ತಿರುವುದು, ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯಗಳಲ್ಲಿ ಕೊರತೆ ಕಂಡುಬರುತ್ತಿರುವುದು, ಕ್ಯಾನ್ಸರ್ ಪತ್ತೆ ಬಗ್ಗೆ ಜಾಗೃತಿ ಮತ್ತು ಅರಿವಿನ ಕೊರತೆ, ಕ್ಯಾನ್ಸರ್ ಆರೈಕೆಯಲ್ಲಿ ಆಗುತ್ತಿರುವ ಕಷ್ಟಗಳು, ದುಬಾರಿ ಚಿಕಿತ್ಸಾ ವೆಚ್ಚ, ಅಸಮರ್ಪಕ ವಿಮೆ ವ್ಯವಸ್ಥೆ ಮತ್ತು ಚಿಕಿತ್ಸಾ ಶಿಷ್ಟಾಚಾರದಲ್ಲಿ ಅನಿಶ್ಚಿತತೆಗಳಂತಹ ಕಾರಣಗಳು ಕ್ಯಾನ್ಸರ್ ರೋಗ ನಿವಾರಣೆ ಮತ್ತು ನಿಯಂತ್ರಣಕ್ಕೆ ಬಹುದೊಡ್ಡ ಸವಾಲುಗಳಾಗಿವೆ’’ ಎಂದರು.

“ಕ್ಯಾನ್ಸರ್ ಪ್ರಕರಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಅನುಸರಿಸಬಹುದಾಗಿದೆ. ಇದರಲ್ಲಿ ಪ್ರಮುಖವಾಗಿ ಜೀವನ ಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು. ತಂಬಾಕು ಮತ್ತು ಆಲ್ಕೋಹಾಲ್ ಸೇವನೆಯನ್ನು ತ್ಯಜಿಸುವುದು ಮತ್ತು ಬೊಜ್ಜನ್ನು ಕರಗಿಸುವುದರಿಂದ ಕ್ಯಾನ್ಸರ್ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಉಂಟಾಗುತ್ತದೆ. ಎಚ್ ಪಿವಿ ಮತ್ತು ಹೆಪಟೈಟಿಸ್ ಬಿ ಲಸಿಕೆಗಳನ್ನು ಹಾಕಿಸಿಕೊಳ್ಳುವುದರಿಂದಲೂ ಕ್ಯಾನ್ಸರ್ ಪ್ರಕರಣಗಳನ್ನು ಕಡಿಮೆ ಮಾಡಬಹುದಾಗಿದೆ. ಇವೂ ಸಹ ಪ್ರಮುಖ ಪಾತ್ರ ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಜನರು ದೈಹಿಕ ಚಟುವಟಿಕೆಗಳನ್ನು ಹೆಚ್ಚು ಮಾಡಬೇಕು ಮತ್ತು ಹೆಚ್ಚು ಹೆಚ್ಚು ಹಣ್ಣು, ತರಕಾರಿ ಮತ್ತು ಫೈಬರ್ ಅಂಶಗಳಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು. ಅದೇ ರೀತಿ ಸಂಸ್ಕರಿತ ಆಹಾರ, ಮಾಂಸ ಮತ್ತು ಸಕ್ಕರೆಯುಕ್ತ ಪದಾರ್ಥಗಳನ್ನು ಸೇವನೆ ಮಾಡುವುದನ್ನು ಕಡಿಮೆ ಮಾಡಬೇಕು’’ ಎಂದು ಅವರು ಸಲಹೆ ನೀಡಿದರು.

ಡಾ.ರಾಧೇಶಾಂ ನಾಯಕ್ ಅವರು ಮಾತನಾಡಿ, “ಭಾರತದಲ್ಲಿ ಕ್ಯಾನ್ಸರ್ ಪೀಡಿತರ ಜೀವಿತಾವಧಿ ಪ್ರಮಾಣದಲ್ಲಿ ಸುಧಾರಣೆ ಕಂಡುಬರುತ್ತಿದೆ. ಇದರಲ್ಲಿ ಪ್ರಮುಖವಾಗಿ ಸ್ತನ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಗರ್ಭಕಂಠ ಕ್ಯಾನ್ಸರ್, ಲಿಂಫೋಮಾ ಮತ್ತು ಲ್ಯುಕ್ಯುಮಿಯಾದಂತಹ ಕ್ಯಾನ್ಸರ್ ರೋಗಗಳಿಂದ ಗುಣಮುಖರಾಗುತ್ತಿ

Leave a Reply

Your email address will not be published. Required fields are marked *