IMG 20230606 WA0061

JD(S) :ನಮಗೆ ದೇವೇಗೌಡರು ಸ್ಪೂರ್ತಿಯಾಗಿದ್ದಾರೆ….!

POLATICAL STATE

ನಮಗೆ ದೇವೇಗೌಡರು ಸ್ಪೂರ್ತಿಯಾಗಿದ್ದಾರೆ: ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್

ಬೀದರ್ (ಜೂ.06): ನಮಗೆ ದೇವೇಗೌಡರು ಸ್ಪೂರ್ತಿಯಾಗಿದ್ದಾರೆ. ಅವರ 91ನೇ ವಯಸ್ಸಿನಲ್ಲೂ ಕೂಡ ನೀವು ಯಾರು ಎದರಬೇಡಿ ಎಂದು ನಮಗೆ ಧೈರ್ಯ ಹೇಳಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ಮಂಗಳವಾರ ಜೆಡಿಎಸ್ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು, ಬಂಡೆಪ್ಪರವರದ್ದು ರಾಜಕೀಯ ಮುಗಿತು ಎಂದುಕೊಳ್ಳಬೇಡಿ. ಈಗ ಹೊಸ ಅಧ್ಯಾಯ ಆರಂಭವಾಗಿದೆ ಎಂದರು.
ಜನರಿಗೊಸ್ಕರ ನಾವು ಕೆಲಸ ಮಾಡುತ್ತೇವೆ. ರಾಜಕೀಯ ಉಲ್ಟಾ ಪಲ್ಟಾ ಆಗುತ್ತಿರುತ್ತದೆ. ನಾವೆಲ್ಲರೂ ಸೇರಿ ಜನರಿಗಾಗಿ ಕೆಲಸ ಮಾಡೋಣ. ನಮ್ಮದು ರಾಜಕೀಯ ಹಿನ್ನೆಲೆಯ ಕುಟುಂಬವಲ್ಲ. ನಮ್ಮ ತಂದೆಯವರ ಕಾಲದಿಂದಲೂ ದಾನ ಧರ್ಮ ಮಾಡಿಕೊಂಡು ಬಂದಿರುವ ಕುಟುಂಬವಾಗಿದೆ. ಅಂದಿನಿಂದ ಇಲ್ಲಿಯವರೆಗೂ ದಾನ ಧರ್ಮ ಮಾಡಿಕೊಂಡು ಸಾಗುತ್ತಿದ್ದೇವೆ.

IMG 20230606 WA0063


ಚುನಾವಣೆಗೆ ನಿಲ್ಲಬೇಕು, ಶಾಸಕ ಆಗಬೇಕು ಎಂಬ ಆಸೆಯಂತೂ ಅಂದು ನನಗೆ ಇರಲಿಲ್ಲ. ಜನರ ಪ್ರೀತಿ ವಿಶ್ವಾಸದಿಂದಾಗಿ ರಾಜಕೀಯಕ್ಕೆ ಬಂದಿದ್ದೇನೆ. ಜನರಿಗೆ ಒಳಿತು ಮಾಡುವ ಉದ್ದೇಶದಿಂದ ರಾಜಕೀಯದಲ್ಲಿ ಇದ್ದೇನೆ. ನಾನು ಸೋಲು ಗೆಲುವು ಎರಡನ್ನೂ ಕಂಡಿದ್ದೀನಿ. ರಾಜಕೀಯ ನದಿ ಇದ್ದಂತೆ ಹರಿದುಕೊಂಡು ಸಾಗುತ್ತಿರುತ್ತದೆ. ನನ್ನ ಐದು ಚುನಾವಣೆಗಿಂತ ಹೆಚ್ಚಿನ ಬೆಂಬಲ ಈ ಚುನಾವಣೆಯಲ್ಲಿ ನನಗೆ ಸಿಕ್ಕಿತ್ತು, ಆದ್ರು ಸೋಲಾಗಿದೆ.
ಈಗ ಚುನಾವಣೆ ಮುಗಿದಿದೆ. ನಾನು ಅಧಿಕಾರದಲ್ಲಿ ಇಲ್ಲದಿದ್ದಾಗಲೂ ಜನರ ಸೇವೆ ಮಾಡಿದ್ದೇನೆ. ಅಧಿಕಾರದಲ್ಲಿ ಇದ್ದಾಗಲೂ ಜನಪರ ಕೆಲಸ ಮಾಡಿದ್ದೇನೆ. ಪಕ್ಷ ಬದಲಾವಣೆ ಮಾಡುವುದಿಲ್ಲ. ಈ ಹಿಂದೆ ಸೋತ ಸಂದರ್ಭದಲ್ಲಿ ಕೂಡ ತಾಲೂಕ ಪಂಚಾಯತಿ ಜಿಲ್ಲಾ ಪಂಚಾಯತಿ, ಮುನಿಸಿಪಾರ್ಟಿ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಿದ್ದೇನೆ, ಈಗಲೂ ಮಾಡುತ್ತೇನೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಸ್ಥಳೀಯ ಚುನಾವಣೆಗಳಿಗೆ ಸಿದ್ದರಾಗೋಣ:
ಕೆಲವೇ ತಿಂಗಳಲ್ಲಿ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಚುನಾವಣೆಗಳು ನಡೆಯಲಿವೆ. ನಾವೆಲ್ಲರೂ ಸೇರಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕಾಗಿದೆ. ತಳಮಟ್ಟದಿಂದ ಪಕ್ಷ ಸಂಘಟಿಸುವ ಕೆಲಸ ಪಕ್ಷದ ಮುಖಂಡರು, ಕಾರ್ಯಕರ್ತರು ಮಾಡಬೇಕಾಗಿದೆ. ಎಲ್ಲರೂ ಸೇರಿ ಪಕ್ಷ ಸಂಘಟನೆ, ಬಲವರ್ಧನೆ ಮಾಡೋಣವೆಂದು ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಪ್ರಮುಖರಾದ ಮಾರುತಿ ಖಾಶೆಂಪುರ್, ಸಂಜುರೆಡ್ಡಿ ನಿರ್ಣಾ, ವಿಜಯಕುಮಾರ್ ಖಾಶೆಂಪುರ್, ಶಾಂತಲಿಂಗ ಸಾವಳಗಿ, ದೇವೇಂದ್ರ ಸೋನಿ, ರಾಜು ಕಡ್ಯಾಳ, ಸಂತೋಷ ರಾಸೂರು, ಶಿವರಾಜ್ ಹುಲಿ, ಸಜ್ಜದ್ ಸಾಹೇಬ್, ಇಸ್ಮಾಯಿಲ್ ಕಮಠಾಣಾ, ರಾಜಶೇಖರ ಜವಳೆ, ಮನು ನಾಯ್ಕ್, ಪುಂಡಲೀಕ ಸೇರಿದಂತೆ ಅನೇಕರಿದ್ದರು.