IMG 20231207 WA0033

ಪಾವಗಡ: ವಕೀಲರ ದಿನಾಚರಣೆ….!

DISTRICT NEWS ತುಮಕೂರು

ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಕೀಲರ ಪಾತ್ರ ಶ್ಲಾಘನೀಯ

ಪಾವಗಡ: ಸಮಾಜದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಕೀಲರ ಪಾತ್ರ ಶ್ಲಾಘನೀಯವೆಂದು
ಹಿರಿಯ ನ್ಯಾಯಾದೀಶರಾದ ಎಂ ಎಸ್ ಹರಿಣಿ ತಿಳಿಸಿದರು.
ಪಟ್ಟಣದ ವಕೀಲರ ಭವನದಲ್ಲಿ ಗುರುವಾರ ವಕೀಲರ ಸಂಘ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಕೀಲರು ತಮ್ಮ ಜ್ಞಾನವನ್ನು ಸಮರ್ಪಕವಾಗಿ ಬಳಸಿ ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದರು.

ಯುವ ವಕೀಲರು ಹೆಚ್ಚು ಹೆಚ್ಚು ಓದುವುದರ ಕಡೆಗೆ ಗಮನ ನೀಡಬೇಕು. ನ್ಯಾಯಾಲಯದ ಕಲಾಪಗಳನ್ನು ವೀಕ್ಷಿಸಬೇಕು ಮತ್ತು ಅವರಲ್ಲಿ ಕಲಿಯುವ ಹುಮ್ಮಸ್ಸು ಇರಬೇಕು ಎಂದರು.
ವಕೀಲರು ನಿಷ್ಠೆ, ಪ್ರಾಮಾಣಿಕತೆ, ಶ್ರಮ ಹಾಕುವ ಮೂಲಕ ವೃತ್ತಿಯಲ್ಲಿ ಸಾಧನೆ ಮಾಡಬಹುದು ಎಂದರು.

ಪ್ರಧಾನ ಸಿವಿಲ್ ನ್ಯಾಯಾದೀಶರಾದ ವಿಸ್ಮಿತಾ ಮೂರ್ತಿ, ಮಾತನಾಡಿ,
ವಕೀಲರು ತಮ್ಮ ವೃತ್ತಿಯನ್ನು ಆಚರಿಸಲು ಮತ್ತು ದೇಶದ ಅತ್ಯಂತ ಯಶಸ್ವಿ ವಕೀಲರಲ್ಲಿ ಒಬ್ಬರಾದ ರಾಜೇಂದ್ರ ಪ್ರಸಾದ್ ಅವರನ್ನು ಗೌರವಿಸಲು

ಮಾಜಿ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರಪ್ರಸಾದ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ವಕೀಲರ ದಿನಾಚರಣೆ ಆಚರಿಸಲಾಗುತ್ತಿದೆ ಎಂದು, ವಕೀಲರ ದಿನಾಚರಣೆ ತನ್ನದೆ ಆದ ಮಹತ್ವ ಹೊಂದಿದೆ. ವಕೀಲರುಗಳು ಸಮಾಜದ ಶಕ್ತಿಯಾಗಿದ್ದಾರೆ ಎಂದರು.ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವ ಗುರುತರ ಜವಾಬ್ದಾರಿ ವಕೀಲರ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ ಸರ್ಕಾರಿ ವಕೀಲ ಸಣ್ಣೀರಪ್ಪ,
ವಕೀಲರ ಸಂಘದ ಅಧ್ಯಕ್ಷ ಶೇಷಾನಂದನ್,
ವಕೀಲರಾದ ರಾಜಣ್ಣ, ಎಸ್ ಎಮ್ ಮುರಳೀಧರ್, ವೆಂಕಟರಾಮರೆಡ್ಡಿ, ನರಸಿಂಹರೆಡ್ಡಿ, ದಿವ್ಯ .
ವಕೀಲರ ಸಂಘದ ಕಾರ್ಯದರ್ಶಿ ಎಚ್ ಎ ಪ್ರಭಾಕರ್, ಉಪಾಧ್ಯಕ್ಷ ಹನುಮಂತರಾಯುಡು. ಖಜಾಂಚಿ, ಶಿವಕೇಶವರೆಡ್ಡಿ, ವಕೀಲರು ಉಪಸ್ಥಿತರಿದ್ದರು.

ವರದಿ. ಶ್ರೀನಿವಾಸಲು.ಎ