ನಾಗಮೋಹನ್ ದಾಸ್ ಆಯೋಗ ವರದಿ ಜಾರಿಗೊಳಿಸುವಂತೆ ಒತ್ತಾಯ……
ಪಾವಗಡ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸುವ ಉದ್ದೇಶದಿಂದ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮೀಸಲಾತಿಗಾಗಿ 130 ದಿನಗಳಿಂದ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು ರಾಜನಹಳ್ಳಿ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿಯ ಮೀಸಲಾತಿ ಹೋರಾಟವನ್ನು ಬೆಂಬಲಿಸಿ ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷರಾದ ಪಾಳೇಗಾರ್ ಲೋಕೇಶ್ ಮಾತನಾಡಿ . ರಾಜನಹಳ್ಳಿ ವಾಲ್ಮೀಕಿ ಪ್ರಸನ್ನಾಂದಪುರಿ ಸ್ವಾಮೀಜಿಯ ಮೀಸಲಾತಿ ಹೊರಟವನು ಬೆಂಬಲಿಸುವ ಉದ್ದೇಶದಿಂದ ರಾಜ್ಯದ 184 ತಾಲೂಕು ಕೇಂದ್ರಗಳಲ್ಲಿ ತಾಲೂಕು ಮೀಸಲಾತಿ ಹೋರಾಟ ಕ್ರಿಯಾ ಸಮಿತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಜಾರಿಗೊಳಿಸಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸಲು ಮನವಿ ಸಲ್ಲಿಸಿದರು ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಕ್ಕೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು
ಪತ್ರಿಕಾಗೋಷ್ಠಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಸಂಘ-ಸಂಸ್ಥೆಗಳ ಮುಖಂಡರಾದ ಡಿ.ಜೆ .ಎಸ್. ನಾರಾಯಣಪ್ಪ. ಚಲವಾದಿ ಮುಖಂಡ ಕನುಮಪ್ಪ. ಡಿ.ಎಸ್.ಎಸ್. ಜಿಲ್ಲಾ ಸಂಚಾಲಕ ಸಿ. ಕೆ. ತಿಪ್ಪೇಸ್ವಾಮಿ . ತಾಲೂಕು ಸಂಚಾಲಕ ಪೆದ್ದನ್ನ. ಗುರುಮೂರ್ತಿ ಬಣದ ಡಿ.ಎಸ್.ಎಸ್. ಸಂಚಾಲಕ ನರಸಿಂಹಪ್ಪ. ಬಿ.ಎಸ್. ಪಿ. ಅಧ್ಯಕ್ಷ ಹನುಮಂತರಾಯಪ್ಪ. ಪ್ರಧಾನ ಕಾರ್ಯದರ್ಶಿ ವೆಂಕಟರಮಣ. ನಲಿ ಗಾನ ಹಳ್ಳಿ ಮಂಜುನಾಥ್. ಲಂಬಾಣಿ ಸಮುದಾಯದ ಗೋವಿಂದ ನಾಯ್ಕ. ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಅಂಜನ್ ನಾಯಕ. ವಕೀಲರಾದ ಕೃಷ್ಣ .ರವೀಂದ್ರ. ಕರವೇ ಲಕ್ಷ್ಮೀನಾರಾಯಣ. ಬೇಕರಿ ನಾಗರಾಜ್ .ಓಂಕಾರ ನಾಯಕ. ಕನ್ನಡಿಮೇಡಿ ಸುರೇಶ್. ಮೀನುಗುಟಂನಹಳ್ಳಿ ಶಿವಪ್ಪ .ಶೈಲಾಪುರ. ಮಂಜುನಾಥ್. ಗುಜ್ಜನಡು ವೆಂಕಟೇಶ್. ಆಟೋ ಸತ್ತಿ. ಮುಂತಾದವರು ಭಾಗವಹಿಸಿದ್ದರು
ವರದಿ: ಶ್ರೀನಿವಾಸಲು ಎ