IMG 20230817 WA0001

ಮಧುಗಿರಿ : ಸಮಸ್ಯೆಗಳ ಆಗರ ಪುರಸಭೆ….!

DISTRICT NEWS ತುಮಕೂರು

*ಅಧಿಕಾರಿಗಳ ಬೇಜಾಬ್ದಾರಿತನದಿಂದ ಸಮಸ್ಯೆಗಳ ಸುಳಿಯಲ್ಲಿ ಪುರಸಭೆ

* ಸಮಸ್ಯೆ ಗಳ ಆಗರ ಪುರಸಭೆ….

ಮಧುಗಿರಿ. ಪುರಸಭಾ ಇಲಾಖೆಯಲ್ಲಿ ಸಹಕಾರ ಸಚಿವರಾದ ಕೆ .ಎನ್ .ರಾಜಣ್ಣನವರು ಪುರಸಭಾ ಇಲಾಖೆಯಲ್ಲಿನ ಕೆಲಸ ಕಾಮಗಾರಿಗಳು ಆಮೆ ಗತಿಯಲ್ಲಿ ಸಾಗುತ್ತಿರುವುದರಿಂದ ತುಂಬಾ ಬೇಸರ ವ್ಯಕ್ತಪಡಿಸಿ.ಬಹುಮುಖ್ಯವಾಗಿ ಯುಜಿಡಿಕಾಮಗಾರಿ ತುಂಬಾ ಕಳಪೆ ಮಟ್ಟದಲ್ಲಿ ನಡೆದಿರುವುದರಿಂದ ಮುಖ್ಯ ಅಧಿಕಾರಿಯವರು ಕೂಡಲೇ ಪುರಸಭಾ ಸದಸ್ಯರ ಗಳ ಸಭೆ ಕರೆದು ತಮ್ಮ ತಮ್ಮ ವಾರ್ಡುಗಳಲ್ಲಿ ಯುಜಿಡಿ ಕಾಮಗಾರಿಗಳ ಕೆಲಸ ಉತ್ತಮ ಗುಣಮಟ್ಟದಲ್ಲಿ ಮಾಡಿದ್ದಾರೆಯೇ ಎಂಬುದನ್ನು ಆ ವಾರ್ಡಿಗೆ ಸಂಬಂಧಿಸಿದ ಸದಸ್ಯರು ಸೂಚಿಸಿದಲ್ಲಿ ಮಾತ್ರ ಯುಜಿಡಿಯ ಏಜೆನ್ಸಿ ಅವರಿಗೆ ತಾವುಗಳು ಬಿಲ್ ಮಾಡಬೇಕೆಂದು ಸಭೆಯಲ್ಲಿ ತಾಕೀ ತ್ತು ಮಾಡಿದರು. ಮುಂದಿನ ದಿನಗಳಲ್ಲಿ ಎಲ್ಲಾ ವಾರ್ಡುಗಳಲ್ಲಿ ಸಹ ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು ಹಾಗೂ ಮೈನ್ ವಾಲುಗಳಿಂದ ನೀರು ಹೊರಗಡೆ ಬರದಂತೆ ತುಂಬಾ ಎಚ್ಚರಿಕೆ ವಹಿಸಬೇಕೆಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಿದರು.

ಪುರಸಭಾ ಕಾರ್ಯಾಲಯದ ವ್ಯವಸ್ಥಾಪಕರಾದ ಗುರುಪ್ರಸಾದ್ ಪುರಸಭಾ ಸದಸ್ಯರು ವಾರ್ಡಿನ ಸಮಸ್ಯೆಯನ್ನು ಹೇಳಲು ಹಾಗೂ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಳ್ಳಲು ಫೋನ್ ಕರೆ ಮಾಡಿದರೆ ಅವರು ಸ್ಪೀಕರಿಸುವುದಿಲ್ಲ ಮತ್ತು ಇಲ್ಲಿಯವರೆಗೂ ಕೆಟ್ಟಿ ನಿಂತಿರುವ ಈ ಬಯೋಮೆಟ್ರಿಕ್ ಎರಡು ವರ್ಷಗಳಾದರೂ ಸರಿಪಡಿಸಿರುವುದಿಲ್ಲ ಎಂದು ಸಚಿವರ ಗಮನಕ್ಕೆ ತಂದಾಗ ಸಚಿವರು ಕೂಡಲೇ ಯಾವ ಏಜೆನ್ಸಿ ಅವರಿಗೆ ನೀಡಿದ್ದೀರಾ ಅದು ಎಲ್ಲಿ ರಿಪೇರಿ ಮಾಡಲು ಕೊಟ್ಟಿದ್ದೀರಾ ಎಂಬುವುದಾದರೂ ತಿಳಿಸಿ ನಾನು ಈ ಕೂಡಲೇ ಅವರಿಗೆ ಫೋನ್ ಕರೆ ಮಾಡಿ ಬೇಗನೆ ರಿಪೇರಿ ಮಾಡಿ ಕೊಡಿಸುತ್ತೇನೆಎಂದು ತಿಳಿಸಿದರು.

ಪುರಸಭಾ ಮುಖ್ಯ ಅಧಿಕಾರಿ ಈಗಾಗಲೇ ನಿರ್ಮಾಣಗೊಂಡಿರು ಲೇಔಟುಗಳ ಖಾತೆ ಮಾಡಲು ಸಂಬಂಧಿಸಿದ ದಾಖಲಾತಿಗಳನ್ನು ಪಡೆದು ಖಾತೆ ಮಾಡಿ ಎಂದು. ಪುರಸಭಾ ಸದಸ್ಯರು ಸಾರ್ವಜನಿಕರು ಗೋಗರೆದರು ಸಹ ಮುಖ್ಯ ಅಧಿಕಾರಿಯವರು ತುಂಬಾ ಉದಾಸೀನ ಮತ್ತು ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಸದಸ್ಯರುಸಭೆಯಲ್ಲಿ ಸಚಿವರ ಗಮನಕ್ಕೆ ತಂದರು. ಇದನ್ನು ಗಮನಿಸಿದ ಸಚಿವರು ಕೂಡಲೇ ನೀವು ಸಂಬಂಧಪಟ್ಟ ದಾಖಲಾತಿಗಳನ್ನು ಪಡೆದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಈ ಖಾತೆ ಮಾಡಿಕೊಡಬೇಕೆಂದು ಪುರಸಭಾ ಮುಖ್ಯ ಅಧಿಕಾರಿಗೆ ಆದೇಶಿಸಿದರು.

ಪುರಸಭಾ ಆವರಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ದಲ್ಲಿ ನೀರುಹಿಡಿದುಕೊಳ್ಳಲು ಸಾರ್ವಜನಿಕರಿಂದ ತುಂಬಾ ಹಣ ವಸೂಲಿ ಮಾಡುತ್ತಾರೆಂದು ಸಚಿವರ ಗಮನಕ್ಕೆ ತಂದಾಗ ತಕ್ಷಣ ಆ ಸಂಬಂಧಪಟ್ಟಿ ಏಜೆನ್ಸಿ ಅವರನ್ನು ರದ್ದುಪಡಿಸಿ ಜನತೆಗೆ ನೀರು ಕುಡಿಯಲು ಅವಕಾಶ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.IMG 20230817 WA0000

ಪುರಸಭಾ ಇಲಾಖೆಯಲ್ಲಿ ಅಧಿಕಾರಿಗಳು ತುಂಬ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ ಹಾಗೂ ಸಮಯಕ್ಕೆ ಸರಿಯಾಗಿ ಕಚೇರಿಯಲ್ಲಿ ಹಾಜರಿರುವುದಿಲ್ಲ ಸಾರ್ವಜನಿಕರಿಗೆ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ ಇದನ್ನು ಸರಿಪಡಿಸಿಕೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ತಮ್ಮ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮತ್ತು ಪ್ರತಿ ತಿಂಗಳು ಪುರಸಭಾ ಮುಖ್ಯ ಅಧಿಕಾರಿ ನಜ್ಮಾ ಆಡಳಿತ ಅಧಿಕಾರಿ ರಿಷಿ ಆನಂದ್ ಪುರಸಭಾ ಅಧಿಕಾರಿಗಳು ಪ್ರತಿ ವಾರ್ಡ್ ಗೆ ಭೇಟಿ ಕೊಟ್ಟು ಕುಡಿಯುವ ನೀರಿನ ಸಮಸ್ಯೆ ಸ್ವಚ್ಛತೆ ಚರಂಡಿ ಇವುಗಳ ಕಡೆ ಹೆಚ್ಚಿನ ಗಮನ ಹರಿಸಬೇಕೆಂದು ತಿಳಿಸಿದರು.

ಪಟ್ಟಣದಲ್ಲಿ ಸಂಚಾರ ದುಪ್ಪಟ್ಟವಾಗುತ್ತಿರುವುದರಿಂದ ಒಂದೊಂದು ದಿನ ಒಂದೊಂದು ಕಡೆ ವಾಹನಗಳು ನಿಲುಗಡೆ ಮಾಡಲು ಪಾರ್ಕಿಂಗ್ ವ್ಯವಸ್ಥೆಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಸೂಚಿಸಿದರು .

ನಗರದ ಕೆಲವು ಕಡೆ ಮುಖ್ಯವಾದ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಆದೇಶಿಸಿದರು. ಪುರಸಭಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ತುಂಬಾ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ ಇದು ಆಗಬಾರದೆಂದು ಹೇಳಿದರು.

ಸಭೆಯಲ್ಲಿ ಸಹಕಾರಿ ಸಚಿವರಾದ ಕೆ .ಎನ್. ರಾಜಣ್ಣನವರು.ವಿಧಾನಪರಿಷತ್ ಸದಸ್ಯರಾದ ಆರ್ ರಾಜೇಂದ್ರ. ಪುರಸಭಾ ಆಡಳಿತ ಅಧಿಕಾರಿ ಹಾಗೂ ಎ.ಸಿ ರಿಷಿ ಆನಂದ.
ಪುರಸಭಾ ಮುಖ್ಯ ಅಧಿಕಾರಿಯ ನಜ್ಮಾ ಹಾಗೂ ಪುರಸಭಾ ಸದಸ್ಯರುಗಳು ನೌಕರರು ಹಾಜರಿದ್ದರು.

ವರದಿ ಲಕ್ಷ್ಮಿಪತಿ ದೊಡ್ಡ ಯಲ್ಕೂರು.