IMG 20230821 WA0010

ಮಧುಗಿರಿ : ಹಿಂದುಳಿದ ವರ್ಗಗಳ ಜನರಿಗೆ ಶೀಘ್ರ ವೇ ಜಮೀನು ಹಂಚಿಕೆ….!

DISTRICT NEWS ತುಮಕೂರು

*ಡಿ ದೇವರಾಜ ಅರಸು ರವರ ಒಬ್ಬ ಕಟ್ಟಾ ಅಭಿಮಾನಿಯಾಗಿ ಕೆಲಸ ಮಾಡಿದಂತವನು ಎಂದ.ಸಹಕಾರಿ ಸಚಿವ ಕೆ ಎನ್ ರಾಜಣ್ಣ.*

ಮಧುಗಿರಿ. ತಾಲೂಕ್ ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಡಿ ದೇವರಾಜ ಅರಸು ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಹಕಾರಿ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ .ಎನ್. ರಾಜಣ್ಣನವರು ಡಿ. ದೇವರಾಜಅರಸುರವರು 50 ವರ್ಷಕ್ಕೂ ಹೆಚ್ಚು ಪರಿಚಯ ನಾನು ಅವರ ಕಟ್ಟಾಅಭಿಮಾನಿ ಯಾಗಿದ್ದವನು 1970ರಲ್ಲಿ ಆರು ತಿಂಗಳು ಮಾತ್ರ ನಮಗೂ ಅವರಿಗೂ ಬೇರೆ ಬೇರೆ ರಾಜಕೀಯ ಕಾರಣಗಳಿಂದ ದೂರ ಇದ್ದವು ಮೊದಲಿನಿಂದಲೂ ಕೂಡ ಅವರ ತತ್ವ ಸಿದ್ಧಾಂತ ಸಮಾಜದಲ್ಲಿ ಧ್ವನಿ ಇಲ್ಲದವರಿಗೆ ಧ್ವನಿಯನ್ನು ಕೊಡತಕ್ಕಂತಹ ಮಹಾನ್ ವ್ಯಕ್ತಿ ಡಿ ದೇವರಾಜ ಅರಸುರವರು. ಇವರನ್ನು ನನ್ನ ಜೀವಮಾನಕ್ಕೂ ಕೂಡ ಮರೆಯುವ ಹಾಗಿಲ್ಲ ಬಹಳ ಜನಕ್ಕೆ ಗೊತ್ತಿದೆಯೋ ಗೊತ್ತಿಲ್ಲ ನಾನು ಪ್ರತಿ ವಿಧಾನಸಭೆ ಹಾಗೂ ಬೇರೆ ಬೇರೆ ಚುನಾವಣೆಗಳಲ್ಲಿ ಅರ್ಜಿ ಹಾಕುವಾಗ ಅವರ ಊರಿಗೆ ಹೋಗಿ ಅವರ ಸಮಾಧಿಯ ಹತ್ತಿರ ಹೋಗಿ ಸಮಾಧಿಗೆ ಹೂವಿನ ಹಾರ ಹಾಕಿನಮ್ಮಂತವರಿಗೆ ಅರ್ಜಿ ಹಾಕುವ ಧೈರ್ಯ ತಂದು ಕೊಟ್ಟಿದ್ದು ನೀವು ಎಂದು ಹೇಳಿ ನಾನು ಎಲ್ಲಾ ಚುನಾವಣೆಗಳಲ್ಲಿ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದರು.

ನಾನು ಅವರ ಹೇಳಿದಾಗೆ ಕೇಳಿದ್ದರೆ ಇವತ್ತು ನಾನು ಇನ್ನೂ ಚೆನ್ನಾಗಿರುತ್ತಿದ್ದೆ 1974ರಲ್ಲಿ ಶಾಲಾ ಕಾಲೇಜುಗಳನ್ನು ಪ್ರಾರಂಭ ಮಾಡು, ಅದಕ್ಕೆ ಬೇಕಾಗುವ ಹಣವನ್ನು ನಾನು ಕೊಡುತ್ತೇನೆ ಮತ್ತೆ ಜಮೀನನ್ನು ಕೊಡಿಸುತ್ತೇನೆ ಎಂದು ನನಗೆ ಅವತ್ತೇ ಧೈರ್ಯ ತುಂಬಿದ್ದರು ನಾನು ಅದ್ಯಾವುದನ್ನು ಮಾಡಲಿಕ್ಕೆ ಹೋಗಲಿಲ್ಲ ನೀನು ಧೈರ್ಯವಂತ ನಿನ್ನನ್ನು ಕಂಡರೆ ನನಗೆ ತುಂಬಾ ಇಷ್ಟವಾಗುತ್ತದೆ ಎಂದು ಹೇಳಿದರು.

1978 ರಲ್ಲಿ ನೀನು ಚುನಾವಣೆಗೆ ಸ್ಪರ್ಧೆ ಮಾಡು ಎಂದು ಹೇಳಿದ್ದರು ಆದರೆ ನಾನು ಚುನಾವಣೆಗೆ ನಿಂತುಕೊಂಡಿಲ್ಲ ರಾಜಕೀಯದಲ್ಲಿ ನಮಗೆಹೆಚ್ಚು ಆಸಕ್ತಿ ಮೂಡಿಸುವುದರಲ್ಲಿ ಅವರು ಕೊಡುಗೆ ಅಪಾರ ಇದೆ ಎಂದು ಸ್ಮರಿಸುತ್ತಾ. ಅವರ ಜಯಂತಿ ದಿನದಂದು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲು ಅವಕಾಶ ದೊರೆತಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ.

ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಅವರ ಊರಿನಲ್ಲಿ ಸಣ್ಣ ಎಂಚಿನ ಮನೆ ಇದೆ ಆದರೂ ಕೂಡ ಮುಂದಿನ ವರ್ಷ ಡಿ ದೇವರಾಜ ಅರಸು ಹೆಸರಿನಲ್ಲಿ ಮ್ಯೂಸಿಯಂ ಪ್ರಾರಂಭಿಸಬೇಕೆಂದು ಈಗಾಗಲೇ ಮಂತ್ರಿಮಂಡಲದಲ್ಲಿ
ಮಾತನಾಡಿದ್ದೇವೆ. ಡಿ ದೇವರಾಜ ಅರಸುರವರು ಒಂದು ಜಾತಿಗೆ ಸೀಮಿತವಾಗಿದವರೆಲ್ಲ ಎಲ್ಲಾ ಜಾತಿಯವರಿಗೂ ನ್ಯಾಯ ಒದಗಿಸಿ ಕೊಡುವವರು ಆದ್ದರಿಂದ ಈ ದಿವಸ ಸದ್ಭಾವನಾ ದಿನಾಚರಣೆಯಾಗಿ ಆಚರಣೆ ಮಾಡುತ್ತೇವೆ. ಸದ್ಭಾವನಾ ದಿವಸ ಎಂದರೆ ಯಾವುದೇ ಧರ್ಮಗಳ ಮಧ್ಯೆ ನಾವು ವ್ಯತ್ಯಾಸ ವಿಷ ಬೀಜ ಬಿತ್ತಿದೆ ಎಲ್ಲರೂ ಕೂಡ ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯ ಮುಂದಿನ ದಿನಮಾನಗಳಲ್ಲಿ ಉತ್ತಮ ಜೀವನ ಮಾಡಲು ಅವಕಾಶ ಮಾಡಿಕೊಡಲಿ ಎಂದು ಈ ಸಂದರ್ಭದಲ್ಲಿ ಶುಭ ಹಾರೈಸುತ್ತೇನೆ ಎಂದರು.
ಮತ್ತೆ ಜೊತೆ ಜೊತೆಯಾಗಿ ಡಿ ದೇವರಾಜ ಅರಸುರವರು ರಾಜ್ಯಕ್ಕೆ ಸೀಮಿತವಾಗಿದ್ದರೆ ರಾಜೀವ್ ಗಾಂಧಿಯವರು ಇಡೀ ದೇಶಕ್ಕೆ ಮಹಾನ್ ವ್ಯಕ್ತಿಯಾಗಿದ್ದವರು ಅವರ ಜಯಂತಿಯನ್ನು ಕೂಡ ಮಾಡಬೇಕಾಗಿದೆ ಅವರು ಈ ದೇಶಕ್ಕೋಸ್ಕರ ಹುತಾತ್ಮರಾಗಿದ್ದವರು. ಅವರನ್ನು ಕೂಡ ಸ್ಮರಿಸುತ್ತೇವೆ ತಮ್ಮೆಲ್ಲರಿಗೂ ಶುಭವಾಗಲಿಎಂದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಅಧ್ಯಕ್ಷರಾದ ತಹಶೀಲ್ದಾರ್ ಸಿಗಬತ್ ಉಲ್ಲಾ ರವರು ಮಾತನಾಡಿ ಇಂದು ತಾಲೂಕು ಆಡಳಿತ ವತಿಯಿಂದ ಡಿ ದೇವರಾಜ್ ಅರಸು ರವರ 108ನೇ ಜನ್ಮ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದೇವೆ ಈಮಹನೀಯರ ಬಗ್ಗೆ ಹೇಳಬೇಕಾದರೆ
ಉಳುವವನೇ ಭೂಮಿಯ ಒಡೆಯ 1971ರಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿಗೆಬಂತು. ಇದರಿಂದ ಸುಮಾರು ರೈತರಿಗೆ ಸಾಕಷ್ಟು ಅನುಕೂಲವಾಯಿತು ಆದರೂ ಈಗಲೂ ಮರಾಠಿಗರು ನಾನಾ ರೀತಿಯಲ್ಲಿ ಹೈಕೋರ್ಟು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸಿದರು ಕೂಡ ಅದು ಪ್ರಯೋಜನವಾಗಲಿಲ್ಲ. 1971ರಲ್ಲಿ ಭೂ ಸುಧಾರಣಾ ಕಾಯ್ದೆಯ ಪ್ರಕಾರವ್ಯವಸಾಯ ಮಾಡುತ್ತಿರುವ ರೈತರ ಅನುಗುಣವಾಗಿ ಅವರಿಗೊಂದು ಪಹಣಿ ಕಾಲಂ ನಂಬರ್ 12ರಲ್ಲಿ ಮತ್ತು ಕಾಲ ನಂಬರ್ 2 ಹೆಸರು ಬರುವಂತೆ ಮಾಡಿದೆ. ಈಗಾಗಲೇ ನಮ್ಮ ತಾಲೂಕಿನಲ್ಲಿ ಈ ಕಾಯ್ದೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಎರಡು ಮೂರು ಪ್ರಕರಣಗಳು ನಡೆಯುತ್ತಿರಬಹುದು. ಅಷ್ಟೇ. ಈ ಕಾರ್ಯಕ್ರಮದ ಬಗ್ಗೆ ಈಗಾಗಲೇ ಮುಖ್ಯ ಭಾಷಣಕಾರರಾದ ವೆಂಕಟರಮಣಪ್ಪ ಸಾಕಷ್ಟು ವಿಚಾರಗಳನ್ನು ಈಗಾಗಲೇ ತಮಗೆತಿಳಿಸಿಕೊಟ್ಟಿದ್ದಾರೆ .ಕೈಗಾರಿಗಳ ಸ್ಥಾಪನೆ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಒಲವು ಪೋಷಕರು ಕೊಡಬೇಕಾಗಿದೆ ಎಂದರು.

ಇನ್ನು ಪಿಟಿಸಿಎಲ್ ಕಾಯಿದೆ 1978 ರಲ್ಲಿ ಆಚರಣೆಗೆ ಬಂತು ಇದನ್ನು ಸಹ 1978 ರಲ್ಲಿ ಮಹನೀಯರ ಸದಸ್ಯರ ಪೀಠದ ಗಮನಕ್ಕೆ ತಂದು ಜಾರಿ ಮಾಡಲಾಯಿತು. ಮದುಗಿರಿ ಏಕಶಿಲಾ ಬೆಟ್ಟಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರವಾಸೋದ್ಯಮ ಇಲಾಖೆಯವರಿಂದ ಮಾತನಾಡಿ ಬೆಟ್ಟಕ್ಕೆ ಅತಿ ಶೀಘ್ರವೇ ರೂಪ್ವೇ ಕಾರಿಡಾರ ಆಗಬೇಕುಎಂದು ಹೇಳಿದ್ದೇವೆ. ಮತ್ತು ಹಿಂದುಳಿದ ವರ್ಗಗಳ ಜನರಿಗೆ 40 ರಿಂದ 50 ಎಕರೆ ಜಮೀನು ಈಗಾಗಲೇ ಗುರುತಿಸಿದ್ದೇವೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಜಮೀನು ಹಂಚಿಕೆ ಮಾಡುತ್ತೇವೆ . ಹಾಗೂ ತಾಯಿ ಮಗು ಆಸ್ಪತ್ರೆಯನ್ನು ಕೂಡ ಮಂಜೂರು ಮಾಡಿಸುತ್ತಿದ್ದೇವೆ ಮತ್ತು ಬೆಸ್ಕಾಂ ಸಬ್ ಸ್ಟೇಷನ್ ಗೆ 66 /11 ಕೆವಿ ಘಟಕ ಪ್ರಾರಂಭಿಸಲುಜಮೀನನ್ನು ಹುಡುಕಿ ಈಗಾಗಲೇ ಅದನ್ನು ಕೂಡ ಶಂಕುಸ್ಥಾಪನೆಗೆ ತಯಾರಿ ಮಾಡಿಕೊಂಡಿದ್ದೇವೆ ಇನ್ನು ಹತ್ತು ಹಲವು ಕಾರ್ಯಗಳು ಮಾಡಬೇಕಾಗಿದೆ . ಇತ್ತೀಚೆಗೆ ಪಟ್ಟಣದಲ್ಲಿನಡೆದಂತಹ ಸ್ವಚ್ಛತಾ ಕಾರ್ಯ ಅಭಿಯಾನ ತಾಲೂಕು ಮತ್ತು ರಾಜ್ಯಮಟ್ಟದಲ್ಲಿ ಹೆಸರುವಾಸಿಯಾಗಿದೆ. ಡಿ ದೇವರಾಜ ಅರಸು ಅವರ ಜನ್ಮ ದಿನಾಚರಣೆಯ ದಿನವನ್ನು ಸದ್ಭಾವನಾ ದಿನಾಚರಣೆಯ ಮಾಡಬೇಕು ಎಂದು ಪ್ರಮಾಣ ಮಾಡಿದ್ದೆವು ಇದರ ಉದ್ದೇಶಕ್ಕೆ ತಕ್ಕಂತೆ ನಮ್ಮ ಜನ್ಮ ಧನ್ಯವಾಗುತ್ತಿದೆ ನಮ್ಮ ನಡೆ-ನುಡಿ ನಮ್ಮ ಧನ್ಯ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಯಾದ ಹನುಮಂತರಾಯಪ್ಪನವರು ಮಾತನಾಡಿ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಜಯರಾಮು
ಮುಖ್ಯ ಭಾಷಣ ಕಾರರಾದ ವೆಂಕಟರಮಣಪ್ಪ ದಿನಾಚರಣೆ ಬಗ್ಗೆ ಬಹಳಸವಿಸ್ತರವಾಗಿ ತಿಳಿಸಿಕೊಟ್ಟಿದ್ದಾರೆ. ಈ ರಾಜ್ಯ ಕಂಡಂತಹ ಅತ್ಯಂತ ಕಳಕಳಿ ಉಳ್ಳವರು ಬಡವರ ಬಗ್ಗೆ ಕಾಳಜಿ ಉಳ್ಳಂತಹ ಒಬ್ಬ ಮುಖ್ಯಮಂತ್ರಿ ಅವರ ಜನುಮ ದಿನಾಚರಣೆಯ ದಿನದಂದು ನೆನಪಿಸಿಕೊಳ್ಳುತ್ತಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ದೀನ ದಲಿತರ ಬಗ್ಗೆ ಶೋಷಿತ ವರ್ಗದವರ ಬಗ್ಗೆ ಅಪಾರ ಕಾಳಜಿ ಉಳ್ಳವರಾಗಿದ್ದು ಶೈಕ್ಷಣಿಕವಾಗಿ ಆರ್ಥಿಕ ಸಬಲೀಕರಣವಾಗಬೇಕೆಂದು ಬಯಸಿ ಆ ರೀತಿಯಲ್ಲಿ ಅವರು ಈ ರಾಜ್ಯವನ್ನು ಮುನ್ನಡೆಸುವಂತಹ 0
ಕೆಲಸಗಳನ್ನು ಮಾಡಿ ಹೋಗಿದ್ದಾರೆ ಅದು ನಮ್ಮ ಎಲ್ಲರಿಗೂ ಮಾದರಿಯಾಗಿರುವ ಕೆಲಸ ಕಾರ್ಯಗಳು ಸಹ ಮಾಡಿ ಹೋಗಿದ್ದಾರೆ. ಅವರಂತೆ ಈಗಿನ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯನವರು ಕೂಡ ಅವರ ಆಶೋತ್ತರಗಳನ್ನು ಅರ್ಥಮಾಡಿಕೊಂಡು ಅವರ ಜೊತೆಯಲ್ಲಿಬೆಳೆದು ಬಂದವರು. ಡಿ.ದೇವರಾಜ್ ಅರಸುರವರು ಕನಸು ನನಸು ಮಾಡುವುದರಲ್ಲಿ ಅವರು ಕೂಡ ತೊಡಗಿದ್ದಾರೆ. ಹಾಗೆಯೇ ತಾಲೂಕಿನ ಶಾಸಕರು, ಕರ್ನಾಟಕ ಸರ್ಕಾರ ಸಹಕಾರಿ ಸಚಿವರು ಕೆ. ಎನ್. ರಾಜಣ್ಣನವರು ಪ್ರತಿ ದಿವಸವು ಸಹ ಡಿ ದೇವರಾಜ ಅರಸು ಅವರನ್ನು ನೆನಪಿಸಿಕೊಳ್ಳುತ್ತಾ ಅವರ ಆಶಯವನ್ನು ಸಮುದಾಯದಲ್ಲಿ ಇರುವಂತಹ ಕಟ್ಟೆ ಕಡೆಯ ಪ್ರಜೆಗೂ ಸಹ ಸರ್ಕಾರದ ಸೌಲಭ್ಯಗಳು ತಲುಪಿಸಬೇಕು. ನಾವು ಏನು ಸರ್ಕಾರಿ ನೌಕರಿದ್ದೇವೆ ಮತ್ತು ಪ್ರಜ್ಞಾವಂತ ಜನರಿದ್ದೇವೆ ನಾವೆಲ್ಲರೂ ಕೂಡ ಬದ್ಧತೆ ಪ್ರದರ್ಶನದ ಮುಖಾಂತರವಾಗಿ ಇವತ್ತು ಪ್ರತಿಜ್ಞೆಯನ್ನು ಮಾಡಿಕೊಂಡಿದ್ದೇವೆ ದೇಶದ ಪೌರ ನಾಗಿ ಪ್ರಜೆಯಾಗಿ ಅತ್ಯಂತ ಪ್ರಾಮಾಣಿಕವಾಗಿ ಶ್ರದ್ಧೆಯಿಂದ ನಮ್ಮ ಕೆಲಸ ನಿರ್ವಹಿಸುತ್ತೇವೆ ಎಂದು ಹೇಳುತ್ತಾ. ಯಾರು ಅನುಷ್ಠಾನ ಅಧಿಕಾರಿಗಳು ಇದ್ದೇವೆ ನಾವೆಲ್ಲರೂ ಸಹ ಸರ್ಕಾರದ ಆಶೋತ್ತರಗಳನ್ನು ಮತ್ತು ಇಲಾಖೆ ನಿಯಮಗಳನ್ನು ಪಾಲನೆ ಮಾಡಿ ಅದರಂತೆ ಅನುಷ್ಠಾನ ಮಾಡಿದ್ದೆ ಆದಲ್ಲಿ ಖಂಡಿತವಾಗಿ ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡಿಸುವ ಕೆಲಸ ಮಾಡುವುದಕ್ಕೆ ಆಗುತ್ತದೆ. ಆ ದೃಷ್ಟಿಯಲ್ಲಿ ನಾವೆಲ್ಲರೂ ಆ ರೀತಿಯ ಬದ್ಧತೆಯಿಂದ ಅತ್ಯಂತ ಪ್ರಾಮಾಣಿಕವಾಗಿ ನಮಗೆ ಕೊಟ್ಟಂತಹ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ಮಾಡಿದ್ದಲ್ಲಿ ಮಾತ್ರ ನಮ್ಮ ವೃತ್ತಿಗೆ ಸಾರ್ಥಕ ಎಂದರು. ಜೊತೆಗೆ ನಾವೆಲ್ಲರೂ ಸಮಾಜದ ಒಬ್ಬ ಜವಾಬ್ದಾರಿ ವ್ಯಕ್ತಿಗಳಾಗಿ ಅಧಿಕಾರಿಗಳಾಗಿ ಶೋಷಿತ ವರ್ಗದವರಿಗೆ ಏನು ಮುಟ್ಟಿಸಬೇಕು ಅದನ್ನು ಮುಟ್ಟಿಸಿದಂತೆ ಆಗುತ್ತದೆ ಆ ದೃಷ್ಟಿಯಲ್ಲಿ ಅತ್ಯಂತ ಸರಳ ಪ್ರಾಮಾಣಿಕರ ಜೊತೆಗೆ ಎಷ್ಟು ಉನ್ನತ ಹುದ್ದೆಯಲ್ಲಿದ್ದರೂ ಕೂಡ ಯಾವುದೇ ಆಡಂಬರತೋರ್ಪಡಿ ಸಿರುವುದಿಲ್ಲ. ಅವರು ಕೊನೆಯ ದಿನಗಳಲ್ಲಿ ನಮ್ಮ ಜಿಲ್ಲೆಯ ಸಿದ್ದರಬೆಟ್ಟದ ನಿರೀಕ್ಷಣಾ ಮಂದಿರದಲ್ಲಿ ಅನಾರೋಗ್ಯದ ಕಾರಣ ಉಳಿದುಕೊಂಡು ಸಂಜೀವಿನಿ ಗಿಡಮೂಲಿಕೆಯ ಔಷಧಿ ತೆಗೆದು ಕೊಂಡಿರುತ್ತಾರೆ. ಇದರಿಂದ ಅವರ ಸರಳ ಸಜ್ಜನಿಕೆ ನೆನಪಿಸುತ್ತದೆ .ಅವರು ಜೀವಂತವಾಗಿ ನಮ್ಮ ಜೊತೆಯಲ್ಲಿ ಇರುತ್ತಾರೆ ಯಾವಾಗಲೂ ಸಹ ಅವರಆಶಯ ಮತ್ತು ಆಕಾಂಕ್ಷಿಗಳು ಹಾಕಿಕೊಟ್ಟಂತಹ ನಡೆ-ನುಡಿ ನಮ್ಮೆಲ್ಲರ ಜೊತೆ ಇರುತ್ತದೆ ನಾವು ಅವುಗಳನ್ನು ಅಳವಡಿಸಿಕೊಂಡು ಬಾಳೋಣ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಹಕಾರಿ ಸಚಿವರಾದ ಕೆ.ಎನ್. ರಾಜಣ್ಣನವರು ತಾಲೂಕು ದಂಡಾಧಿಕಾರಿಯದ ಸಿಗಬತವುಲ್ಲ. ಡಿವೈಎಸ್ಪಿ ವೆಂಕಟೇಶ್ ನಾಯ್ಡು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತರಾಯಪ್ಪ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಜಯರಾಮು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಜಯರಾಮಯ್ಯ ರೋಟರಿ ಕ್ಲಬ್ ಅಧ್ಯಕ್ಷ ಎಂ ಶಿವಲಿಂಗಪ್ಪ ಮುಖ್ಯ ಭಾಷಣಕಾರರ ವೆಂಕಟರಮಣಪ್ಪ ಮುಖಂಡರಾದ ರಾಮದಾಸ್. ಸದಾಶಿವ ರೆಡ್ಡಿ. ಎಲ್ಲಾ ಇಲಾಖಾಧಿಕಾರಿಗಳು ಜನಪ್ರತಿನಿಧಿಗಳು ವಿದ್ಯಾರ್ಥಿಗಳು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹಾಜರಿದ್ದರು .

ವರದಿ ಲಕ್ಷ್ಮಿಪತಿ ದೊಡ್ಡ ಯ ಲ್ಕೂರು