ತಾಲ್ಲೂಕು ಆಡಳಿತ ಮಂಡಳಿ ಮತ್ತು ವಿವಿಧ ಕನ್ನಡ ಪರ ಸಂಘಟನೆಗಳ. ವತಿಯಿಂದ 67ನೇ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು……
ಮಧುಗಿರಿ ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಕಾರ್ಯಕ್ರಮವನ್ನು ಧ್ವಜಾರೋಹಣ ಮಾಡಿ.ಮಾತನಾಡಿದ ಉಪ ವಿಭಾಗಾಧಿಕಾರಿಗಳಾದ ಸೋಮಪ್ಪ ಕಡಕೋಳರವರು.
ಅರಂಕುಶ ವಿಟ್ಟೊಡೆ.ನೆನವುದೆನ್ನ ಮನಂ ಬನವಾಸಿ ದೇಶ ಮಂ. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು. ಬದುಕು ಬಲುಹೀನ ನಿಧಿಯ ಸದಾಭಿಮಾನದ ಗೂಡು.
ಎಲ್ಲಾದರೂ ಇರು. ಎಂತಾದರು ಇರು. ಎಂದೆಂದೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ. ಕನ್ನಡವೇ ನಿತ್ಯ. ಕನ್ನಡ ಗೋವಿನ ಓ ಮುದ್ದಿನ ಕರು. ಕನ್ನಡತನ ಒಂದಿದ್ದರೆ ನೀ ನಮಗೆ ಕಲ್ಪವೃಕ್ಷ.
ಕಟ್ಟುವೆವು ನಾವು ಹೊಸ ನಾಡೊಂದನ್ನ. ರಸದ ಬೀಡೊಂದನ್ನು.
ಹಚ್ಚೇವು ಕನ್ನಡದ ದೀಪ. ಕರುನಾಡ ದೀಪ. ಸಿರಿ ನುಡಿಯ ದೀಪ. ಒಲವತ್ತಿ ತೋರುವ ದೀಪ. ಎಂದು ಕನ್ನಡ ರಾಜ್ಯೋತ್ಸವದ ಸಂದೇಶವನ್ನು ಸಾರಿದರು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಪ್ರಧಾನ ಭಾಷಣಕಾರರಾಗಿ ಡಾಕ್ಟರ್ ಅಮರಾವತಿ ದ್ರೇಹಾಚಾರ್ ಮಾತನಾಡಿ ಕನ್ನಡ ನಾಡು ಬೆಳೆದು ಬಂದ ಬಗ್ಗೆ ಹಲವಾರು ಸಂಸ್ಕೃತಿಗಳೊಂದಿಗೆ ನೆರೆದಿದ್ದ ಕನ್ನಡಿಗರಿಗೆ ವಿಚಾರ ಮುಟ್ಟಿಸಿ. ಇಂದಿನ ಗತ ವೈಭವಗಳ ಬಗ್ಗೆ ಮೆಲಕುಹಾಕಿ. ಕನ್ನಡ ನಾಡು ಕನ್ನಡಿಗರು ಕನ್ನಡ ಭಾಷೆ ಬಗ್ಗೆ ಅಭಿಮಾನ ಹೇಗೆ ಹೊಂದಿರಬೇಕೆಂಬುದು ಕೆಲವು ಕನ್ನಡ ನುಡಿಗಟ್ಟುಗಳು ಮೂಲಕ ಜಾಗೃತಿಗೊಳಿಸುತ್ತಾ. ಕನ್ನಡ ನಲ್ಲ ಜಲದ ಬಗ್ಗೆ ಅರಿವು ಮೂಡಿಸಿದರು.
ನರಕಕ್ಕೆ ಇಳಿಸಿ ನಾಲಿಗೆ ಸೀಳಿಸಿದರುಮೂಗಿನಲ್ಲಿ ಕನ್ನಡ ಪದ ಹಾಡೀತಿನಿ. ಎಂಬುದನ್ನು ಕುವೆಂಪುರವರು ಬರೆದಿದ್ದಾರೆ.ಸಂವಿಧಾನ ರಚನೆಯಾಗಿ ತೀರ್ಮಾನವಾಗಿರುವ ಪ್ರಮುಖ ಭಾಷೆಗಳಲ್ಲಿ ಕನ್ನಡ ಭಾಷೆ ನಾಲ್ಕನೇ ಭಾಷೆಯಾಗಿದೆ. ಕನ್ನಡ ಭಾಷೆಗೆ. ರಾಷ್ಟ್ರೀಯ ಸ್ಥಾನಮಾನ ಸಿಕ್ಕಿರುತ್ತದೆ . ಇಷ್ಟೆಲ್ಲಾ ಗ್ರಂಥಗಳನ್ನು ರಚನೆ ಮಾಡಲು ಕುವೆಂಪು ಅವರು ಅ .ಇಂದ.ಳ .ಅಕ್ಷರದವರೆಗೂ ಇರುವ ಪದಗಳು ಅವರ ಎದೆ ಬಡಿಯುವಂತಿರುತ್ತದೆ ಎಲ್ಲಾ ಪದಗಳು ಕನ್ನಡದಲ್ಲಿ ಬಳಸಲು ಸಾಧ್ಯವಿಲ್ಲ.
ಭಾಷಾ ತಜ್ಞರು ಹೇಳುತ್ತಾರೆ ಬಸ್ ಸ್ಟ್ಯಾಂಡ್ ಎಂಬುವುದು ಇಂಗ್ಲಿಷ್ ಪದ ಅಚ್ಚ ಕನ್ನಡದಲ್ಲಿ ಶಷ್ಟ ಚಕ್ರವಾಹನ ಆಗಮನ ನಿಲ್ದಾಣ ಎಂದು ಹೇಳಬೇಕು .ಆದರೆ ಇಷ್ಟೊಂದು ಉದ್ದದ ಸಾಲು ಹೇಳುವಷ್ಟರಲ್ಲಿ ರೈತನಿಗೆ ಬಸ್ ಸಿಗುವುದಿಲ್ಲ ನಿಲ್ದಾಣದಿಂದ ಹೊರಟು ಹೋಗಿರುತ್ತದೆ ಎಂದರು.
ನಾವು ಯಾರಿಗೆ ಕಡಿಮೆ ಇಲ್ಲ ಕನ್ನಡಿಗರು ನಮ್ಮ ನೆಲ ಜಲ ಕಸಿಯುವುದಕ್ಕೆ ಬಂದರೆ ನಮ್ಮ ಮನಸ್ಸುಗಳನ್ನು ಕದಡುವುದಕ್ಕೆಬಂದರೆ ನಾವು ಒಗ್ಗಟ್ಟುಆಗಬೇಕಾಗುತ್ತದೆ. ಮತ್ತೆ ನಾವು ನವಂಬರ್ ಕನ್ನಡಿಗರ ಆಗಬಾರದು. ನವೆಂಬರ್ ಎಂಬುದು ಕನ್ನಡ ಪದವಲ್ಲ ಅಚ್ಚ ಕನ್ನಡದಲ್ಲಿ ಹೇಳಬೇಕೆಂದರೆ ನವೆಂಬರ್ ಎಂಬುದು ಕನ್ನಡದಲ್ಲಿ ನಿಚ್ಚಳ ಎಂಬ ಕನ್ನಡ ಪದಬಳಸಬೇಕೆಂದರು..
67ನೇ ಕನ್ನಡ ರಾಜ್ಯೋತ್ಸವ ವಿಜೃಂಭಣೆ ಹಾಗೂ ವ್ಯವಸ್ಥಿತವಾಗಿ ನಡೆದ ಸಮಾರಂಭದಲ್ಲಿ ಎಲ್ಲಾ ಇಲಾಖೆ ಮುಖ್ಯಸ್ಥರು ಅಧಿಕಾರಿಗಳು ಪತ್ರಕರ್ತರು ಶಾಲಾ ಮಕ್ಕಳು ವಿವಿಧ ಕನ್ನಡಪರಸಂಘಟನೆಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ನೆರೆದಿರುವಜನಸ್ತೋಮದ ಸಮಾರಂಭದಲ್ಲಿ. ವಿವಿಧ ಕ್ಷೇತ್ರಗಳ ಸೇವೆಗಳ ಸಾಧನೆ ಮೆರೆದ ಹಾಗೂ ಸಮಾಜಕ್ಕೆ ವಿವಿಧ ಕೊಡುಗೆ ನೀಡಿದ ರೈತ ಸಮುದಾಯ ಸಮಾಜ ಸೇವೆಗೆ ಹಗಲಿರುಳು ಪತ್ರಿಕೋದ್ಯಮದಲ್ಲಿ ಶ್ರಮಿಸಿರುವ ತಾಲೂಕು ವರದಿಗಾರರುಗಳಾದ ಮಂಜುನಾಥ್ ಮಧುಗಿರಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು ಜಲಾಲ್ ಭಾಷಾ ಐಡಿ ಹಳ್ಳಿ. ವಿವಿಧ ಸೇವೆಗಳಲ್ಲಿ ಸಮಾಜಕ್ಕೆ 33 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಮಧುಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ವಿ .ವೀರಭದ್ರಯ್ಯ. ಉಪ ವಿಭಾಗ ಅಧಿಕಾರಿಗಳಾದ ಸೋಮಪ್ಪ ಕಡಕೋಳ. ತಾಲೂಕು ದಂಡಾಧಿಕಾರಿಗಳು ನಾಡ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರಾದ ಟಿ. ಜಿ .ಸುರೇಶ ಚಾರ್. ನಾಡ ಹಬ್ಬಗಳ ಆಚರಣೆಯ ಆಯ್ಕೆಸಮಿತಿ ಅಧ್ಯಕ್ಷರು ಕಾರ್ಯನಿರ್ವಹಣಾಧಿಕಾರಿ ಬಿ.ಎಸ್. ಲಕ್ಷ್ಮಣ್. ಪುರಸಭಾ ಅಧ್ಯಕ್ಷರಾದ ತಿಮ್ಮರಾಜು ಪುರಸಭಾ ಸದಸ್ಯರಾದ ಎಮ್ .ಆರ್ .ಜಗನ್ನಾಥ್ ಸದಸ್ಯರಾದ ಎಂಎಲ್ ಗಂಗರಾಜು ಚಂದ್ರಶೇಖರ್. ಧಾರ್ಮಿಕ ಮುಖಂಡರಾದ ಎಂ. ಜಿ. ಶ್ರೀನಿವಾಸ್ ಮೂರ್ತಿ
ಡಿಡಿಪಿಐ. ಕೆಜಿ ರಂಗಯ್ಯ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಯಶಸ್ವಿಯಾಗಿ ನೆರವೇರಿಸಲಾಯಿತು.7
ಕಾರ್ಯಕ್ರಮದ ಅಧ್ಯಕ್ಷತೆಯ ನುವಹಿಸಿಕೊಂಡು.ಮಾಡಿದ ಶಾಸಕರಾದ ಎಂ
ವಿ .ವೀರಭದ್ರಯ್ಯ ಕನ್ನಡ ರಾಜ್ಯೋತ್ಸವ ನಡೆದು ಬಂದ ಬಗ್ಗೆ ಮಾತನಾಡಿ ಕನ್ನಡ ನಲ ಜಲ ಸಂಸ್ಕೃತಿಯ ಬಗ್ಗೆ ಭೇದಭಾವ ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು.
ನಮ್ಮ ರಾಜಧಾನಿಯಾದ ಬೆಂಗಳೂರಿನಲ್ಲಿ ಕನ್ನಡಿಗರು ಅಲ್ಪಸಂಖ್ಯಾ ಮಟ್ಟಕ್ಕೆ ಬಂದಿದ್ದಾರೆ ಇದರಿಂದ ನಮಗೆ ತುಂಬಾ ಬೇಸರವಾಗುತ್ತಿದೆ ಏಕೆಂದರೆ ನಾವು ದೇಶಪ್ರೇಮ ಬಂದಾಗ ನಾವೆಲ್ಲರೂ ಭಾರತೀಯರಾಗಿದ್ದು ಉದ್ಯೋಗ ಅಭಿವೃದ್ಧಿ ವಿಚಾರದಲ್ಲಿ ರಾಜಧಾನಿಯಲ್ಲಿ ಬೆರಳು ಎಣಿಕೆಯಷ್ಟು ಕನ್ನಡಿಗರನ್ನು ಕಾಣುತ್ತಿರುವುದು ಶೋಚನೀಯಸಂಗತಿ .ಮುಂದಿನ ದಿನಮಾನಗಳಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದು ಜಲ ನೆಲ ಉದ್ಯೋಗ ವಿಚಾರದಲ್ಲಿ ಬಹುಪಾಲು ಕನ್ನಡಿಗರು ಪಡೆದು ಅಭಿವೃದ್ಧಿ ಹೊಂದಬೇಕುಎಂದರು.
ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಜೂಪಿಟರಶಾಲೆಯ ವಿದ್ಯಾರ್ಥಿಗಳು ಹಾಡಿದರು ಸ್ವಾಗತ ಭಾಷಣವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತಿಮ್ಮರಾಜುರವರು ಮಾಡಿದರು ಮತ್ತು ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಾಯಿತು ಕಾರ್ಯಕ್ರಮದ ವಂದನಾರ್ಪಣೆಯನ್ನು ಬಿ
ಆರ್. ಸಿ ಆದ ಡಿ.ಎಸ್
ಹನುಮಂತರಾಯಪ್ಪನವರು ನಡೆಸಿಕೊಟ್ಟರು ಕಾರ್ಯಕ್ರಮದ ನಿರೂಪಣೆಯನ್ನು ನೇತ್ರಾವತಿಯವರು ನಡೆಸಿಕೊಟ್ಟರು.
ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು