ಪಾವಗಡ:- ವಾಸದ ಮನೆಯ ಗುಡಿಸಲುಗಳನ್ನು ತೆರವು ಮಾಡುವಂತೆ ಕೆಲ ಭೂ ಹಿಡುವಳಿದಾರರ ಕುಟುಂಬಸ್ಥ ಒಂದು ಗುಂಪಿನವರು ದೌರ್ಜನ್ಯ ವೆಸಗುತ್ತಿದ್ದಾರೆ ಎಂದು ಪಾವಗಡ ತಾಲ್ಲೂಕಿನ ಆಲದಮರದಟ್ಟಿ ಗೊಲ್ಲ ಜನಾಂಗದ ಸುಮಾರು ಇಪ್ಪತ್ತೈದು ಕುಟುಂಬಸ್ಥರು ಅಲವತ್ತುಕೊಂಡಿದ್ದಾರೆ.
ಎಂಟು ದಶಕಗಳಿಂದೆ ನಮ್ಮ ತಾತಂದಿರ ಕಾಲದಲ್ಲಿ ಭೂ ಹಿಡುವಳಿದಾರರಿಂದ ಸಾಗುವಳಿಯಾಗಿ ಪಡೆದಿದ್ದ ಪ್ರಸ್ತುತ ವಾಸಿಸೋ ಜಮೀನಿನಲ್ಲಿ ಗುಡಿಸಲುಗಳನ್ನ ಹಾಕಿಕೊಂಡು ಜೀವಿಸುತ್ತಿದ್ದರು…ಅದು ತಮ್ಮ ವಂಶಾವಳಿ ಮುಂದುವರೆದಂತೆ ಜಾಗಕ್ಕೆ ಸಂಬಂಧಿಸಿದಂತೆ ವಾಸವಿದ್ದ ಕೆಲವರು ಖಾತೆಗಳನ್ನ ಪಡೆದುಕೊಂಡಿದ್ದೇವೆ, ವಿದ್ಯುತ್ ಸೌಲಭ್ಯದ ತೆರಿಗೆಗಳನ್ನ ಕಂದಾಯವನ್ನು ಸರ್ಕಾರಕ್ಕೆ ಕಟ್ಟುತ್ತಿದ್ದೇವೆ ನಮಗೆ ಪರ್ಯಾಯವಾಗಿ ನಿವೇಶನ ಜಾಗದ ಪರಿಹಾರ ನೀಡಿ ಎಂಬ ಮನವಿ ಗುಡಿಸಲುವಾಸಿಗಳದ್ದು.
ಆದರೆ ಎರಡು ಗುಂಪುಗಳ ನಡುವೆ ಕೆಲ ಆಂತರೀಕ ಕಲಹಗಳು ಉಲ್ಬಣಗೊಂಡು ಇದ್ದಕ್ಕಿದ್ದಂತೆ ನಿವೇಶನ ಖಾಲಿ ಮಾಡಿ ಹೋಗಿ ಇದು ನಮ್ಮ ಪೂರ್ವಜರ ಜಮೀನು ನಿಮಗೆ ಪರ್ಯಾಯವಾಗಿ ಜಾಗ ಕಲ್ಪಿಸುತ್ತೇವೆ ಎಂಬ ಮೌಖಿಕ ಪಂಚಾಯ್ತಿಗಳ ತೀರ್ಮಾನ ಸ್ವೀಕರಿಸದ ಗುಡಿಸಲು ವಾಸಿ ಕುಟುಂಬಸ್ಥರ ಮೇಲೆ ಭೂ ಹಿಡುವಳಿದಾರ ವಂಶಸ್ಥ ಗೊಲ್ಲ ಜನಾಂಗದ ಗುಂಪಿನವರು ದೌರ್ಜನ್ಯ ವೆಸಗುತ್ತಿದ್ದಾರೆ ಇಷ್ಟು ವರ್ಷಗಳಿಂದ ಜೀವಿಸುತ್ತಿದ್ದ ನಾವುಗಳು ಮನೆ ಬಿಟ್ಟು ಎಲ್ಲಿ ಹೋಗಬೇಕು ಎಂದು ತಮ್ಮ ಆತಂಕವನ್ನ ತೋಡಿಕೊಂಡಿದ್ದು ಹೀಗೆ.
ಜಾಗ ನಮ್ಮದು ಎನ್ನುವ ಗೊಂಪೊಂದು ಏಕಾಏಕಿ ಗುಡಿಸಲುಗಳನ್ನು ಧ್ವಂಸಗೊಳಿಸಲು ಮುಂದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುವ ದೃಶ್ಯ ರೆಕಾರ್ಡ್ ಆಗಿ ಸಾಮಾಜಿಕ ಜಾಲ ತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ವೊಂದು ಘಟನೆ ದಿನದಿಂದ ಪುಷ್ಟಿಗೊಂಡು ಗೊಲ್ಲ ಸಮಾಜದ ಎರಡು ಗುಂಪುಗಳ ನಡುವೆ ವೈಷಮ್ಯ ಚಿಗುರಾಕಿ ದ್ವೇಷವಾಗಿ ಬೆಳೆದು ಒಬ್ಬರ ನಡುವೆ ಒಬ್ಬರು ದೈಹಿಕವಾಗಿ ಬಲ ಪ್ರಯೋಗದ ಘರ್ಷಣೆ ಮಾಡಿಕೊಳ್ಳುವಷ್ಟರ ಮಟ್ಟಿಗೆ ಬಂತು ತಲುಪಿ ಪೊಲೀಸ್ ಮೆಟ್ಟಿಲೇರಿರೋದು ಆಲದಮರದಹಟ್ಟಿ ಗೊಲ್ಲ ಜನಾಂಗದ ಕುಟುಂಬಸ್ಥರಲ್ಲಿ ಆತಂಕ ಶುರುವಾಗಿದೆ.
ಆಗಾಗಿ ಸಂಬಂಧಿಸಿದ ತಾಲ್ಲೂಕು ಆಡಳಿತ ಅಧಿಕಾರಿಗಳು ಮತ್ತು ಗೊಲ್ಲ ಸಮಾಜದ ಮುಖಂಡರು ಮದ್ಯಪ್ರವೇಶಿಸಿ ಈ ನೊಂದವರಿಗೆ ಪರಿಹಾರ ಕಲ್ಪಿಸಿ ಜಮೀನಿನ ಹಕ್ಕುದಾರ ರಿಗೆ ಹಕ್ಕಿದೆಯೇ ಎಂದು ಪರೀಶೀಲಿಸಿ ನ್ಯಾಯ ಒದಗಿಸಿ ಮುಂದಾಗುವ ದೊಡ್ಡ ಮಟ್ಟದ ಆವಾಂತರವನ್ನು ನಿಲ್ಲಿಸಬೇಕಿದೆ.
ಈ ಸಂದರ್ಭದಲ್ಲಿ ಕರಿಯಣ್ಣ, ಚಿತ್ತಮ್ಮ,ಸಿದ್ದಗಂಗಪ್ಪ,ಲಕ್ಷ್ಮಕ್ಕ,ಸಿದ್ದಪ್ಪ ಬೋರಪ್ಪ ಹಲವರು ನಮಗೆ ಅನ್ಯಾಯವಾಗ್ತಿದೆ ನ್ಯಾಯ ಕೊಡಿ ಎಂದು ಕಾನೂನಿನ ಮೊರೆ ಹೋಗಿದ್ದಾರೆ.
ವರದಿ: ನವೀನ್ ಕಿಲಾರ್ಲಹಳ್ಳಿ