4 8 20 Sanitization 8

ಪಾವಗಡ: ಕೊರೋನಾ ಸೋಂಕು ತಡೆಗೆ ಸ್ಯಾನಿಟೈಸೇಷನ್ ಸಿಂಪಡಣೆ.

DISTRICT NEWS ತುಮಕೂರು
ಪಾವಗಡ: ಕೊರೋನಾ ಸೋಂಕು ತಡೆಗೆ ಸ್ಯಾನಿಟೈಸೇಷನ್ ಸಿಂಪಡಣೆ
ಪಾವಗಡ :  ಕೋವಿಡ್19 ಯೋಜನೆಯಡಿಯಲ್ಲಿ ಇಂದು ಪ್ರತೀವಾರ ನಡೆಸುವ ಸ್ಯಾನಿಟೈಸೇಷನ್ ಕಾರ್ಯ ಪಾವಗಡದ ಸಾರ್ವಜನಿಕ ಬಸ್‍ನಿಲ್ದಾಣದಲ್ಲಿ ನಡೆಯಿತು. ಮುಂಜಾನೆಯೇ ಬಸ್‍ನಿಲ್ದಾಣದ ಪ್ರತಿಯೊಂದು ಸ್ಥಳಗಳಲ್ಲಿಯೂ ಸ್ಯಾನಿಟೈಸರ್ ಸಿಂಪಡಿಸುವ ಮೂಲಕ ಎಲ್ಲ ಅಂಗಡಿ ಮಾಲೀಕರುಗಳಿಗೆ ಹಾಗೂ ಹೋಟೆಲ್ ಮಾಲೀಕರುಗಳಿಗೆ ಜಾಗೃತಿ ಮೂಡಿಸಲಾಯಿತು. ಇದರೊಂದಿಗೆ ಬೀದಿ ವ್ಯಾಪಾರವನ್ನು ಮಾಡುತ್ತಿದ್ದ ನೂರಾರು ಕೈಗಾಡಿ ವ್ಯಾಪಾರಿಗಳಿಗೆ, ಚಿಕ್ಕ ಚಿಕ್ಕ ಅಂಗಡಿಯ ವ್ಯಾಪಾರಿಗಳಿಗೆ ಕೋವಿಡ್ ಬಗ್ಗೆ ಅರಿವನ್ನು ಮೂಡಿಸಿದ್ದಲ್ಲದೆ ಪ್ರತಿಯೊಬ್ಬ ಅಂಗಡಿಗಳಲ್ಲಿ ಕ್ರಿಮಿನಾಶಕವನ್ನು ಸಿಂಪಡಿಸಲಾಯಿತು. ಇದೇ ಸಂದರ್ಭದಲ್ಲಿ ಟ್ಯಾಕ್ಶಿ ಸ್ಟ್ಯಾಂಡ್, ಆಟೋ ನಿಲ್ದಾಣ ಹಾಗೂ ವಿವಿಧ ರೀತಿಯ ಅಂಗಡಿ ಮಳಿಗೆಗಳಿಗೆ ಕ್ರಿಮಿನಾಶಕವನ್ನು ಸಿಂಪಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಮಂಜುನಾಥ್, ಸಹಾಯಕ ಸರ್ಕಾರಿ ಅಭಿಯೋಜಕರು, ಶ್ರೀ ನವೀನ ಚಂದ್ರ, ಮುಖ್ಯಾಧಿಕಾರಿ, ಪುರಸಭೆ ಹಾಗೂ ಸ್ವಾಮಿ ವಿವೇಕಾನಂದ ತಂಡ ಕಾರ್ಯೋನ್ಮುಖರಾಗಿದ್ದರು. ಬಸ್ ನಿಲ್ದಾಣದ ಹಮಾಲಿ ಸಂಘದ ಅಧ್ಯಕ್ಷರು, ಆಟೋರಿಕ್ಷಾ ಸಂಘದ ಅಧ್ಯಕ್ಷರು ಸಹಕಾರ ನೀಡಿದರು.
4 8 20 Sanitization 17
ಇದೇ ಸಂದರ್ಭದಲ್ಲಿ ಪಾವಗಡದ ಎಲ್.ಐ.ಸಿ. ಕಛೇರಿಯ ಆಡಳಿತ ಮಂಡಲಿಯ ವಿನಂತಿಯ ಮೇರೆಗೆ ಎಲ್.ಐ.ಸಿ. ಕಛೇರಿಯನ್ನು ಸಂಪೂರ್ಣವಾಗಿ ಕ್ರಿಮಿನಾಶಕ ಸಿಂಪಡಿಸುವ ಕಾರ್ಯ ನಡೆಸಲಾಯಿತು. ಈ ಸಂದರ್ಭದಲ್ಲಿ ಎಲ್.ಐ.ಸಿ. ಕಛೇರಿಯ ಮುಖ್ಯ ವ್ಯವಸ್ಥಾಪಕರು ಹಾಗೂ ಅಧಿಕಾರಿ ವರ್ಗದವರು ಶ್ರೀರಾಮಕೃಷ್ಣ ಸೇವಾಶ್ರಮದ ಪೂಜ್ಯ ಸ್ವಾಮಿ ಜಪಾನಂದಜೀ ರವರಿಗೆ ಹೃತ್ಪೂರ್ವಕವಾದ ಧನ್ಯವಾದವನ್ನು ಅರ್ಪಿಸಿದರು. ಈ ಮಾನವೀಯತೆಯ ಕಾರ್ಯಕ್ರಮವನ್ನು ವಾರಕ್ಕೊಮ್ಮೆಯಾದರೂ ಎಲ್.ಐ.ಸಿ. ಕಛೇರಿಗೆ ಬರುವ ನೂರಾರು ಮಂದಿಗೆ ಸಹಾಯವಾಗುವಂತೆ ಸಹಕಾರ ನೀಡಬೇಕೆಂದು ಕೋರಿಕೊಂಡರು.
4 8 20 Sanitization 5
ಪೂಜ್ಯ ಸ್ವಾಮೀಜಿಯವರು ಭಾರತ ರಾಷ್ಟ್ರದ ಒಬ್ಬ ಜವಾಬ್ಧಾರಿಯುತ ಪ್ರಜೆಯಾಗಿ ಶ್ರೀರಾಮಕೃಷ್ಣ ಸೇವಾಶ್ರಮದ ಹಾಗೂ ಇನ್ಫೋಸಿಸ್ ಫೌಂಡೇಷನ್ ಪರವಾಗಿ ಈ ಜನಪರ ಕಾರ್ಯಕ್ರಮಗಳನ್ನು ಕೋವಿಡ್19 ಯೋಜನೆಯಡಿ ಕೈಗೆತ್ತಿಕೊಂಡಿರುವುದರಿಂದ ಖಂಡಿತವಾಗಿ ಜೀವವಿಮೆ ಕಾರ್ಯಾಲಯವನ್ನು ಪ್ರತೀವಾರ ಔಷಧಿಯನ್ನು ಸಿಂಪಡಿಸುವ ಯೋಜನೆಯಡಿಯಲ್ಲಿ ತರುತ್ತೇವೆಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಹನುಮಂತರಾಯಪ್ಪ, ಕಾಳಿದಾಸ ಸಂಘದ ಪದಾಧಿಕಾರಿಗಳಾದ ಶ್ರೀ ಮನುಮಹೇಶ್ ರವರು ಹಾಗೂ ಅನೇಕ ಜೀವ ವಿಮಾ ಏಜೆಂಟ್‍ಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.