IMG 20240515 WA0001

ಪಾವಗಡ : ಹಸಿರೆಲೆ ಗೊಬ್ಬರ ಬಳಸಿ ಮಣ್ಣಿನ ಫಲವತ್ತತೆ ಹೆಚ್ಚಿಸಿ….!

DISTRICT NEWS ತುಮಕೂರು

ಹಸಿರೆಲೆ ಗೊಬ್ಬರ ಬಳಸಿ ಮಣ್ಣಿನ ಫಲವತ್ತತೆ ಹೆಚ್ಚಿಸಿ.

ಪಾವಗಡ : ಹಸಿರೆಲೆ ಗೊಬ್ಬರವನ್ನು ಬಳಸುವುದರಿಂದ ಮಣ್ಣಿನ ಸಾರ ಮತ್ತು ಫಲವತ್ತತೆ ಹೆಚ್ಚಿಸಬಹುದೆಂದು ಕಸಬಾ ಕೃಷಿ ಅಧಿಕಾರಿ ವೇಣುಗೋಪಾಲ್ ರೈತರಿಗೆ ಮಹಿತಿ ನೀಡಿದ್ದಾರೆ
ವಿವಿಧ ಬೆಳೆಗಳ ಇಳುವರಿ ಹಾಗೂ ಪೋಷಕಾಂಶ ಹೆಚ್ಚಿಸಲು ಹಸಿರೆಲೆ ಗೊಬ್ಬರವು ಗ್ರಾಮೀಣ ಪ್ರದೇಶದ ರೈತರಿಗೆ ಬಹಳ ಸಹಕಾರಿಯಾಗಿದೆ’ ಎಂದು,

ಕೃಷಿಯಲ್ಲಿ ಹಸಿರೆಲೆ ಗೊಬ್ಬರಗಳ ಬಳಕೆ ನೂರಾರು ವರ್ಷಗಳಷ್ಟು ಹಿಂದಿನಿಂದಲೂ ಬಂದ ಪದ್ಧತಿ. ಇದು ಮಣ್ಣಿನ ಫಲವತ್ತತೆ ಮತ್ತು ಬೌತಿಕ ಗುಣಧರ್ಮಗಳನ್ನು ಕಾಪಾಡುವಲ್ಲಿ ಬಹಳ ಪರಿಣಾಮಕಾರಿಯಾದ ಪದ್ಧತಿ ಎಂದಿದ್ದಾರೆ.

ಆಧುನಿಕ ಬೇಸಾಯ ಪದ್ಧತಿಯಲ್ಲಿ ಹೆಚ್ಚಿನ ಇಳುವರಿಗಾಗಿ ರಾಸಾಯನಿಕ ಗೊಬ್ಬರಗಳನ್ನು ಕ್ರಿಮಿನಾಶಕಗಳನ್ನು ಹೆಚ್ಚು ಹೆಚ್ಚು ಬಳಸಿದಂತೆ ಮಾನವನ ಆರೋಗ್ಯದ ಮೇಲೆ ಗಂಭೀರವಾದ ಸಮಸ್ಯೆ ಉಂಟಾಗುತ್ತದೆ, ಹಾಗೂ ಮಣ್ಣಿನ ಫಲವತ್ತತೆಯಲ್ಲಿ ಏರಿಳಿತಗಳಾಗುತ್ತವೆ ಎಂದರು.

ಸಸ್ಯಗಳ ಎಲೆ, ಎಲೆಯ ಕಾಂಡ, ಪೋಷಕಾಂಶಗಳ ಅಗತ್ಯಕ್ಕಾಗಿ ಮಣ್ಣಿಗೆ ಸೇರಿಸುವುದು ಅಗತ್ಯವಾಗಿರುತ್ತದೆ,
ಹಸಿರೆಲೆ ಗೊಬ್ಬರದಲ್ಲಿ ಎರಡು ವಿಧಾನಗಳಿದ್ದು,
ಮೊದಲನೆಯದಾಗಿ ಹೊಲದಲ್ಲಿ ಬೆಳೆದು ಮಣ್ಣಿಗೆ ಸೇರಿಸುವುದು, ಹೊರಗಿನಿಂದ ತಂದು ಮಣ್ಣಿಗೆ ಸೇರಿಸುವುದು,
ಹೊಂಗೆ, ಸೆಣಬು, ಗ್ಲರಿ ಸಿಡಿಯ, ದೆಹಂಚ, ಆಪ್ ಸೆಣಬು, ಹಲಸಂದಿ, ಹುರಳಿ ಮುಂತಾದ ಬೀಜಗಳನ್ನು
ಬಿತ್ತನೆ ಮಾಡಿ ಗಿಡ ಬೆಳೆದ ನಂತರ 40 -45 ದಿನ ಒಳಗೆ ಗಿಡಗಳು ಹೂ ಬಿಡುವ ಹಂತದಲ್ಲಿದ್ದಾಗ ರೋಟೋವೇಟರ್ ನಿಂದಾಗಿ ಗಿಡಗಳನ್ನು ಉಳಿಮೆ ಮಾಡಿ ಮಣ್ಣಿಗೆ ಸೇರಿಸಬೇಕು ಎಂದರು.

ಹಸಿರೆಲೆ ಗೊಬ್ಬರದ ಮಹತ್ವ:

ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳ ಅನುಕೂಲಕರವಾದ ಬದಲಾವಣೆಗೆ ಸಹಕಾರಿಯಾಗುವುದು.
ಮಣ್ಣಿನಲ್ಲಿ ಸಾವಯವ ಅಂಶವನ್ನು ಕಾಪಾಡಿಕೊಂಡು ಬರುವುದು.
ಮಣ್ಣಿನಲ್ಲಿರುವ ಜೈವಿಕ ಸೂಕ್ಷ್ಮಾಣುಗಳ ಚಟುವಟಿಕೆ ಹಾಗೂ ಅಭಿವೃದ್ಧಿಗೆ ನೆರವಾಗುವುದು. ಇದರಿಂದ ಸಾವಯವ ವಸ್ತುಗಳು ಕೊಳೆತು ಅವುಗಳಲ್ಲಿರುವ ಪೋಷಕಾಂಶಗಳು ಬೆಳೆಗೆ ಲಭ್ಯವಾಗುವುದು.
ಮಣ್ಣಿನ ಕೆಳ ಪದರಗಳಲ್ಲಿರುವ ಪೋಷಕಾಂಶಗಳನ್ನು ಬೇರುಗಳು ಹೀರಿಕೊಳ್ಳುವುದರಿಂದ ಈ ಗಿಡಗಳನ್ನು ಕಿತ್ತು ಮತ್ತೆ ಮಣ್ಣಿನಲ್ಲಿ ಸೇರಿಸುವ ಮೂಲಕ ಆಳದಲ್ಲಿರುವ ಸಸ್ಯ ಪೋಷಕಾಂಶಗಳನ್ನು ಮೇಲ್ಪದರಕ್ಕೆ ತರುವ ಕ್ರಿಯೆ ಉಂಟಾಗುವುದು.
ಹಸಿರೆಲೆ ಗೊಬ್ಬರದ ಸಸ್ಯಗಳು ಮಣ್ಣಿನ ಮೇಲೆ ಹೊದಿಕೆಯಾಗಿರುವುದರಿಂದ ಮಳೆಯ ನೀರು ಹೆಚ್ಚಾಗಿ ಇಂಗಿ ಮಣ್ಣು ಕೊಚ್ಚಿಹೋಗುವುದು ಕಡಿಮೆಯಾಗುವುದಲ್ಲದೆ ಮಣ್ಣಿನಲ್ಲಿ ತಾಪ ಕಡಿಮೆಯಾಗಿರುವುದು.
ವಾತಾವರಣವಲ್ಲಿರುವ ಸಾರಜನಕದ ಸ್ಥಿರೀಕರಣ ಕ್ರಿಯೆಯಲ್ಲಿ ನೆರವಾಗುವುದು.
ಸಸ್ಯಗಳ ಕೊಳೆಯುವಿಕೆಯಾಗುವಾಗ ಹೊರಬರುವ ಆಮ್ಲಗಳಿಂದ ಪೋಷಕಾಂಶ ಲಭ್ಯತೆ ಹೆಚ್ಚುವುದು.
ಕ್ಷಾರ ಮಣ್ಣಿನ ಸುಧಾರಣೆಯಲ್ಲಿ ನೆರವಾಗುವುದು.
ಜಂತು ಹುಳುವಿನ ಬಾಧೆಯ ನಿಯಂತ್ರಣದಲ್ಲೂ ನೆರವಾಗುವುದು.ಎಂದು ತಿಳಿಸಿದರು.

ಹಸಿರೆಲೆ ಗೊಬ್ಬರಕ್ಕೆ ಬೇಕಾದ ಬೀಜಗಳಾದ
, ದೆಹಂಚ, ಆಪ್ ಸೆಣಬು, ಹಲಸಂದಿ, ಹುರಳಿ, ಸೆಣಬು, ಮುಂತಾದ ಬೀಜಗಳು ತಾಲ್ಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರದಲ್ಲಿ ಪಡೆದುಕೊಳ್ಳುವಂತೆ ಕಸಬಾ ಹೋಬಳಿಯ ಕೃಷಿ ಅಧಿಕಾರಿ ವೇಣುಗೋಪಾಲ್ ತಿಳಿಸಿದರು.

ವರದಿ. ಶ್ರೀನಿವಾಸಲು. A