IMG 20221101 WA0130

ಪಾವಗಡ: ವಿಜೃಂಭಣೆಯಿಂದ ನಡೆದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ….!

DISTRICT NEWS ತುಮಕೂರು

ತಾಲೂಕಿನಾದ್ಯಂತ ವಿಜೃಂಭಣೆಯಿಂದ ನಡೆದ  67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ.    ಪಾವಗಡ..ಮಂಗಳವಾರ ಪಟ್ಟಣದ  ತಾಲೂಕು ಕ್ರೀಡಾಂಗಣದಲ್ಲಿ  ಕನ್ನಡ ರಾಜ್ಯೋತ್ಸವ ಸಮಿತಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.                            

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ವೆಂಕಟರವಣಪ್ಪ ಮಾತನಾಡಿ, ಪಾವಗಡ ಆಂಧ್ರಪ್ರದೇಶದ ಗಡಿಯನ್ನು ಹಂಚಿಕೊಂಡಿದ್ದು  ಇತ್ತೀಚೆಗೆ ತಾಲ್ಲೂಕು ಅಭಿವೃಧ್ಧಿಯತ್ತ ಸಾಗುತ್ತಿದೆ. ತಾಲೂಕಿನ ಅಭಿವೃದ್ಧಿಗೆ ಎತ್ತಿನಹೊಳೆ, ತುಂಗಭದ್ರಾ, ಭದ್ರಾ ಮೇಲ್ದಂಡೆ ಯೋಜನೆಗಳು ತುಂಬಾ ಸಹಾಯಕವಾಗಿವೆ  ಎಂದರು.

ತಹಶೀಲ್ದಾರ್ ಡಿ.ಎನ್. ವರದರಾಜು ಮಾತನಾಡಿ, ಕರ್ನಾಟಕ ತನ್ನದೇ ಆದ ಕಲೆ, ಸಾಹಿತ್ಯ, , ಸಂಸ್ಕೃತಿಯನ್ನು ಹೊಂದಿದ್ದು  , ಕನ್ನಡ ನಾಡಿನ ಅಭಿವೃದ್ಧಿಗೆ  ಸಾಹಿತಿಗಳು, ಕವಿಗಳು, ಕಲಾವಿದರು ಕನ್ನಡ ಭಾಷೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕನ್ನಡ ನಾಡನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾ ನರಸಿಂಹ ಮೂರ್ತಿ, ಪುರಸಭೆ ಅಧ್ಯಕ್ಷ ಡಿ. ವೇಲುರಾಜು, ಸಹಾಯಕ ಪ ಪ್ರಾಧ್ಯಾಪಕ ಎಂ.ವಂಶಿಕೃಷ್ಣ ಮಾತನಾಡಿದರು. 

    ವಿವಿಧ ಕ್ಷೇತ್ರಗಳ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿತರಿಸಿದ ತಾಲೂಕು ಆಡಳಿತ………….                 .         ಸಾಹಿತ್ಯ ಕ್ಷೇತ್ರ ದಲ್ಲಿ  —-ದೊಮ್ಮತಮರಿಯ ಡಿ.ವಿ.ಪ್ರಹ್ಲಾದ,                                        ಜನಪದಕಲೆಯಲ್ಲಿ ——-ಹನುಮಂತರಾಯ, ಆರ್ ಎನ್ ಲಿಂಗಪ್ಪ,  ಕಿಲಾರ್ಲಹಳ್ಳಿ ನವೀನ್, ನಾಗರಾಜು, ಕೆ.ನರೇಶ್.                      

ರಂಗಭೂಮಿ ಕ್ಷೇತ್ರದಲ್ಲಿ ——- ಕೆ.ಆರ್. ನಾಗರಾಜು, ಕೆ.ಜಿ.ಲಕ್ಷ್ಮಿನಾರಾಯಣ, ಎಂ.ಗೋವಿಂದಪ್ಪ, ತಿಪ್ಪೇಸ್ವಾಮಿ.      ಸಮಾಜಸೇವೆ ಕ್ಷೇತ್ರದಲ್ಲಿ     ಜಿ.ಶ್ರೀಧರಗುಪ್ತ, ವಿ.ಎಸ್.ನಾಗೇಶ್, ಬಿ.ಎಂ.ನಾಗರಾಜು. ಪೌರಕಾರ್ಮಿಕರು-ಲಕ್ಷ್ಮೀನರಸಮ್ಮ, ಓಬಳೇಶಪ್ಪ. ಪತ್ರಿಕಾ ಮಾಧ್ಯಮ ಕ್ಷೇತ್ರದಲ್ಲಿ——-. ಪೆಮ್ಮನಹಳ್ಳಿ ಪಿ. ಜಿ ಶ್ರೀನಾಥ, ಕೆ.ರಾಮಪುರಂ ನಾಗೇಶ್, ಚಂದ್ರಪ್ಪ.                                   ಗಡಿನಾಡು ಕನ್ನಡ ಸೇವೆ- ಕೆ.ಎಂ. ಶ್ರೀನಿವಾಸುಲು, ನರಸೀಪಟೇಲ್.ಪಾರಂಪರಿಕ ವೈದ್ಯ- ಗೌಡತಿಮ್ಮನಹಳ್ಳಿ ಕಾವಾಲಪ್ಪ ಅವರನ್ನು ಸನ್ಮಾನಿಸಲಾಯಿತು.

ಪುರಸಭೆ ಉಪಾಧ್ಯಕ್ಷೆ ಶಶಿಕಲಾ, ಸದಸ್ಯ ಎಂ.ಎ.ಜಿ ಇಮ್ರಾನ್, ಪೊಲೀಸ್ ಇನ್ ಸ್ಪೆಕ್ಟರ್ ಅಜಯ ಸಾರಥಿ, ತಾಲ್ಲೂಕು ಪಂಚಾಯಿತಿ ಇ.ಒ. ಶಿವರಾಜಯ್ಯ, ಮಲ್ಲಿಕಾರ್ಜುನ್, ಬಿಇಒ ಅಶ್ವಥನಾರಾಯಣ, ಐ. ಎ ನಾರಾಯಣಪ್ಪ, ಆರ್ ಟಿ ಖಾನ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ, ಪೂಜಾರಪ್ಪ, ಗ್ರಾಮ ಲೆಕ್ಕಿಗ ರಾಜೇಶ್, ಕಂದಾಯ ನಿರೀಕ್ಷಕ ರಾಜಗೋಪಾಲ್, ಮಾಕಂ ಪ್ರಭಾಕರ್, ಮುಖ್ಯ ಶಿಕ್ಷಕ ವೆಂಕಟೇಶ್ ಇತರರು ಹಾಜರಿದ್ದರು.

ವರದಿ: ಶ್ರೀನಿವಾಸಲು ಎ