IMG 20241230 WA0007 scaled

ಪಾವಗಡ : ಪಾರದರ್ಶಕತೆಯ ಮೂಲಕ ಅರ್ಹರಿಗೆ ನಿವೇಶನದ ಹಕ್ಕು ಪತ್ರ…!

DISTRICT NEWS ತುಮಕೂರು

ಪಾರದರ್ಶಕತೆಯ ಮೂಲಕ ಅರ್ಹರಿಗೆ ನಿವೇಶನದ ಹಕ್ಕು ಪತ್ರ ನೀಡಲಾಗುವುದು.ಜಿಪಂ ಸಿಇಒ ಪ್ರಭು.ಜಿ

ಪಾವಗಡ : ಸಿಎಂ ಕಾರ್ಯಕ್ರಮದಲ್ಲಿ 2800 ನಿವೇಶನಗಳ ವಿತರಣೆಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ತಿಳಿಸಿದ್ದಾರೆ..

ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ‌ಮಾತನಾಡಿದ ಅವರು, ತಾಲ್ಲೂಕಿನಲ್ಲಿ
ನಿವೇಶನರಹಿತರಿಗೆ ನಿವೇಶನ ವಿತರಣೆ ಮಾಡಲು 3000 ನಿವೇಶನಗಳನ್ನು ನೀಡುವ ಗುರಿಯನ್ನುಹೊಂದಿದೆ ಎಂದರು.

ಈಗಾಗಲೇ ಕೆಲವು ಖಾಲಿ‌ನಿವೇಶನವನ್ನು ಸಮತಟ್ಟು ಮಾಡಿಸಿ ಅದನ್ನು ಸೈಟ್ ಫಾರ್ಮೇಶನ್ ಮಾಡಲಾಗಿದೆ.
ಸೈಟ್ ವಿತರಣೆಯೂ ಪಾರದರ್ಶಕತೆಯಿಂದ ಕೂಡಿರ ಬೇಕು ಆಯ್ಕೆಯ ಪ್ರಕ್ರಿಯೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿ, ತಹಶೀಲ್ದಾರ್, ಈ.ಓ ನೇತೃತ್ವದಲ್ಲಿ ನಡೆಯಲಿದೆ.
ಈ ಸಭೆಯ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಗುವುದು.ಇದರ ಮೂಲ ಗುರಿ ನಿಜವಾದ ಅರ್ಹ ಫಲಾನುಭವಿಗಳಿಗೆ ನಿವೇಶನವನ್ನು ಒದಗಿಸುವುದಾಗಿದೆ ಎಂದರು.
ತಾಲ್ಲೂಕಿನಾದ್ಯಂತ 65 ಲೊಕೇಶನ್ಗಳಲ್ಲಿ ಸುಮಾರು 125 ರಿಂದ 150 ಎಕರೆ ಅಭಿವೃದ್ಧಿಪಡಿಸಲಾಗಿದೆ ಎಂದು ಇದು ನಿರಂತರ ಪ್ರಕ್ರಿಯೆಯಾಗಿದ್ದು ಎಲ್ಲೆಲ್ಲಿ ಸರ್ಕಾರ ಜಮೀನು ಇದೆ ಎಂಬುದನ್ನು ಸರ್ವೇ ಮಾಡಿಸಲಾಗುವುದೆಂದರು.

ಈಗಾಗಲೇ ತಾಲೂಕಿನಾದ್ಯಂತ 222 ಕಾಮಗಾರಿಗಳು ಪ್ರಗತಿಯಲ್ಲಿದ್ದು ಈಗಾಗಲೇ ಶೇಕಡ 40ರಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು ಮುಂದಿನ ವಾರದೊಳಗಡೆ ಶೇಕಡ 100ರಷ್ಟು ಕಾಮಗಾರಿಗಳು ಪೂರ್ಣಗೊಳ್ಳುತ್ತವೆ ಎಂದರು.IMG 20241230 WA0009

ತಾಲ್ಲೂಕಿನ ನಡೆದಿರುವ ಜಲಜೀವನ್ ಮಿಷನ್ ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡಬೇಕು ಕಾಮಗಾರಿಗಳು ಸೂಕ್ತವಾಗಿರದಿದ್ದರೆ ಯಾವುದೇ ನಿರ್ಧಾಕ್ಷಣ್ಯ ಕ್ರಮವಹಿಸುವುದಾಗಿ ತಿಳಿಸಿದರು.
ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನದಲ್ಲಿ ಉತ್ತಮ ಕಾಮಗಾರಿಗಳನ್ನು ಮಾಡುವವರಿಗೆ ಸಕಾಲದಲ್ಲಿ ಬಿಲ್ ಗಳನ್ನು‌ ಪಾವತಿ ಮಾಡಿಸಿ ನಂತರ ಕಾಮಗರಿಗಳನ್ನು ಸೂಕ್ತ ವಾಗಿ ಅನುಷ್ಠಾನ ಮಾಡಲು ವಿಫಲರಾದರೆ ಕ್ರಮ‌ಕೈಗೊಳ್ಳುವುದಾಗಿ ಸೂಚಿಸಿದ್ದಾರೆ.

ಕೂಲಿ ಆಧಾರಿತ ಕಾಮಗಾರಿಗಳನ್ನು ಮಾಡುವಲ್ಲಿ ಜಿಲ್ಲೆಯಲ್ಲಿ ಪಾವಗಡ ತಾಲ್ಲೂಕು ಮೊದಲ ಸ್ಥಾನದಲ್ಲಿದೆ. ಇದೇ ಮಾದರಿಯನ್ನು ನಾವು ಮಧುಗಿರಿ, ಶಿರಾ, ಕೊರಟಗೆರೆ ತಾಲ್ಲೂಕುಗಳಿಗೆ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದರು.

ಈ ರೀತಿಯಲ್ಲಿ ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡುವುದರಿಂದ ಗ್ರಾಮ ಪಂಚಾಯತಿಗಳಲ್ಲಿ ಹೆಚ್ಚು ಮೂಲ ಸೌಕರ್ಯಗಳನ್ನು ಸೃಜನೆ ಮಾಡಲು ಸಾಧ್ಯವಾಗುತ್ತದೆ.
ದುಡಿವ ಕೈಗಳಿಗೆ ಕೆಲಸ ನೀಡಬೇಕು ಗೌರವಯುತವಾಗಿ ಜನರು ಜೀವನ ನಡೆಸುವಂತೆ ಮಾಡಬೇಕು ಎಂದರು.

ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು, ಮಕ್ಕಳಲ್ಲಿ ಕಲಿಕಾ ಶಕ್ತಿ ಇದ್ದು, ಅವರ ಜ್ಞಾನವನ್ನು ಹೆಚ್ಚಿಸುವ ಹೊಸ ಕಲಿಕಾ ಸಾಮಗ್ರಿ ಒದಗಿಸಲಾಗುವುದು ಎಂದರು.

ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ ಎಂದು ಅದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದರು. ಎಲ್ಲಿ ಗ್ರಂಥಾಲಯದ ವ್ಯವಸ್ಥೆ ಇಲ್ಲ, ಎಂಬುದನ್ನು ತನ್ನ ಗಮನಕ್ಕೆ ತರಬೇಕೆಂದು ತಿಳಿಸಿದರು.
ಈ ವೇಳೆ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ (ಅಭಿವೃದ್ಧಿ) ಸಂಜೀವಪ್ಪ, ಮುಖ್ಯ ಕಾರ್ಯಪಾಲಕ ಅಭಿಯಂತರರು ಕುಮಾರಸ್ವಾಮಿ , ತಾಲ್ಲೂಕು ಪಂಚಾಯತ್‌ಕಾರ್ಯನಿರ್ವಾಹಕ ಅಧಿಕಾರಿ ಜಾನಕೀರಾಮ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲ್ಲೂಕು ಸಿಬ್ಬಂದಿ ಸಭೆಯಲ್ಲಿ ಭಾಗವಹಸಿದ್ದರು.

ವರದಿ : ಶ್ರೀನಿವಾಸಲು ಎ

Leave a Reply

Your email address will not be published. Required fields are marked *