IMG 20240121 WA0011

ಪಾವಗಡ : ʻದೇವರʼ  ಆಸ್ತಿ  ನುಂಗಿದ  ಭೂ ಕಳ್ಳರು…..!

BUSINESS DISTRICT NEWS National - ಕನ್ನಡ ತುಮಕೂರು
  • ಶಿವಪ್ಪನಿಗೂ ಸಂಕಷ್ಟ : ಕಾಣೆಯಾದ  ʻ ನೀಲಕಂಠೇಶ್ವರ – ಕೋಟೇಶ್ವರ ʼ  ಆಸ್ತಿ
  • ʻದೇವರʼ  ಆಸ್ತಿ  ನುಂಗಿದ  ಭೂ ಕಳ್ಳರು…..!
  • ಕಲಿಯುಗ : ಧರ್ಮ ಮತ್ತು ನ್ಯಾಯ ವ್ಯವಸ್ಯೆಯಲ್ಲಿ  ʻ ಧನ ʼಬಲವೇ ಪ್ರಧಾನವಾಗುವುದು
  • ಭಾಗ-1

ಪಾವಗಡ ತಾಲ್ಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಭೂಕಳ್ಳತನ ಪ್ರಕರಣಗಳು ಹೊರಬರುತ್ತಿವೆ. ಕಾನೂನು ಯಾರಿಗೂ ತಿಳಿದಿರುವುದಿಲ್ಲ ನಾವು ಹಣವಂತರು – ರಾಜಕೀಯವಾಗಿ ಬಲಾಢ್ಯರು  ನಾವು ಏನು ಮಾಡಿದರು ನಡೆಯುತ್ತದೆ ಎನ್ನುವ ಅಹಂ ನಿಂದ, ತಾಲ್ಳೂಕಿನ ಕೆಲ ಗುಂಪುಗಳು ಅಧಿಕಾರಿಗಳನ್ನು ಬುಕ್‌ ಮಾಡಿಕೊಂಡು  ಬಹಳಷ್ಟು ಸರ್ಕಾರಿ ಭೂಮಿಗಳನ್ನು ಲಪಟಾಯಿಸಿ ಹಣ- ಆಸ್ತಿಗಳನ್ನು ಸಂಪಾದನೆ ಮಾಡಿ ಕೊಂಡಿದ್ದಾರೆ. ಸ್ಥಳೀಯ ರಾಜಕೀಯ ನಾಯಕರಾಗಿ ಚಲಾವಣೆಯಾಗುತ್ತಿದ್ದಾರೆ. ನಮಗೆ ರಾಜಕೀಯ ಬಲವಿದೆ,  ತಾಲ್ಲೂಕಿನಲ್ಲಿ ನಮ್ಮುನ್ನು ಕೇಳುವವರಿಲ್ಲ ಎಂಬುದು ಇವರ ಅಹಂ ಗೆ ಕಾರಣ. ದೇವಸ್ಥಾನದ/ ಸರ್ಕಾರದ  ಆಸ್ತಿಗಳಿ ಗೆ ನಕಲಿ ದಾಖಲೆಗಳನ್ನು ಸೃಷ್ಠಿಸಿ ಆಸ್ತಿಗಳನ್ನು ಲಪಟಾಯಿಸುವುದು ಇವರ ಕಾಯಕವಾಗಿದೆ. ನಾವು  ಕಲಿಯುಗ ದಲ್ಲಿ ಇದ್ದೇವೆ ಎನ್ನುವುದಕ್ಕೆ ಇದು ಒಂದು ಸ್ಪಷ್ಠ ಉದಾಹರಣೆ ಅಲ್ಲವಾ…!

ಕಲಿಯುಗ : ಧರ್ಮ ಮತ್ತು ನ್ಯಾಯ ವ್ಯವಸ್ಯೆಯಲ್ಲಿ  ʻ ಧನ ʼಬಲವೇ ಪ್ರಧಾನವಾಗುವುದು.

ಕಲಿಯುಗ : ವೈದಿಕ ವಾಙ್ಮಯದಲ್ಲಿ ಹೇಳಲ್ಪಟ್ಟ ನಾಲ್ಕು ಯುಗಗಳಲ್ಲಿ ಕಡೆಯದು. ಉಳಿದವು ಕೃತ, ತ್ರೇತಾ, ದ್ವಾಪರ. ಇದರ ಅವಧಿ 4,32,೦೦೦ ವರ್ಷಗಳು. ಈ ಯುಗದಲ್ಲಿ ʻ ಧರ್ಮ ʼ ಒಂದೇ ಕಾಲಿನಲ್ಲಿ ನಿಂತು ಕುಂಟುತ್ತಲೂ, ಅ ಧರ್ಮ ನಾಲ್ಕು ಕಾಲುಗಳಿಂದ ನಲಿದಾಡುತ್ತಲೂ ಇರುತ್ತದೆ

Kalki1790s Copy
ಕಲ್ಕಿ ಮತ್ತು ಅವನ ಕುದರೆ

ಜನರಲ್ಲಿ ಧಾರ್ಮಿಕ ಪ್ರವೃತ್ತಿ, ಭಾವನೆಗಳು ಮಾಯವಾಗಿ ಅಧರ್ಮ ರುಚಿಯೂ ಸ್ವಾರ್ಥ ಭಾವನೆಯೂ ಹೆಚ್ಚುವವು. ಇದರ ಫಲವಾಗಿ ಅವರಿಗೆ ಸುಖ ಸಂತೋಷಗಳು ದೊರೆಯದೆ ವ್ಯಾಧಿ, ದುರ್ಭಿಕ್ಷ, ಹಸಿವು, ಬಾಯಾರಿಕೆ, ಮಿತಿಯಿಲ್ಲದ ಪ್ರಜಾವೃದ್ಧಿ ಮುಂತಾದ ದುಃಖಗಳೇ ಹೆಚ್ಚುತ್ತಾ ಬರುವವು. ಕಲಿ ಮಹಿಮೆ ಹೆಚ್ಚಿದಂತೆಲ್ಲ ಧರ್ಮ, ಸತ್ಯ, ಕ್ಷಮೆ, ದಯೆ, ಶೌಚ, ಸದಾಚಾರ ವ್ಯವಹಾರಗಳು, ಆಯುಃಪ್ರಮಾಣ, ದೈಹಿಕ ಶಕ್ತಿ, ಸ್ಮೃತಿಶಕ್ತಿ ಇವು ನಶಿಸುವವು. ಧರ್ಮ ಮತ್ತು ನ್ಯಾಯ ವ್ಯವಸ್ಯೆಯಲ್ಲಿ ಧನ ಬಲವೇ ಪ್ರಧಾನವಾಗುವುದು..

ಕಲಿಯುಗದ ಕಡೆಯಲ್ಲಿ ಭಗವಂತ ಕಲ್ಕಿಯ ಅವತಾರವನ್ನು ಎತ್ತಿ ಅಧರ್ಮಿಗಳನ್ನು ನಿಶ್ಶೇಷವಾಗಿ ಸಂಹರಿಸಿ, ಉಳಿದ ಸತ್ಪುರುಷರ ಮನಸ್ಸಿನಲ್ಲಿ ಒಳ್ಳೆಯ ಗುಣಗಳುಂಟಾಗುವಂತೆ ಪ್ರೇರೇಪಿಸುವನು. ಆಗ ಮತ್ತೆ ಕೃತಯುಗ ಹುಟ್ಟುವುದು ಕಲಿಯುಗ – ಕಲ್ಕಿಯು ಅವತಾರವೆತ್ತುವ (ತ್ತಿದ) ಯುಗ ಎಂದು ಹಿಂದೂ ಧರ್ಮದಲ್ಲಿ ಹೇಳಲಾಗುತ್ತದೆ.

ಶಿವಪ್ಪನಿಗೂ ಸಂಕಷ್ಟ : ಕಾಣೆಯಾದ  ʻ ನೀಲಕಂಠೇಶ್ವರ – ಕೋಟೇಶ್ವರ ʼ  ಆಸ್ತಿ 

ಪಾವಗಡ ಪಟ್ಟದ ನೀಲಕಂಟೇಶ್ವರ ದೇವಸ್ಥಾನ,ಪಕ್ಕದ ಜಂಗಮರ ಬಾವಿ, ಗದ್ದುಗೆ ಗಳು ಜಂಗಮರು ಪೂಜಿಸುತ್ತಿದ್ದ ಶಿವಲಿಂಗ , ವೀರಶೈವ ಪಂರಂಪರೆ ಸಾರುತ್ತಿದ್ದ ಪ್ರತೀಕಗಳನ್ನು ಮಾಯ ಮಾಡಿದ ಮಾಯಾವಿಗಳು. ಈ ಕೃತ್ಯವನ್ನು ಮುಚ್ಚಿಹಾಕಲು  ಸಾತ್‌ ನೀಡಿದ-ನೀಡುತ್ತಿರುವ ಅಧಿಕಾರಿಗಳ ವೃಂದವಿದೆ.

ಈ ಘಟನೆ ನಡೆದು ಬಹಳ ವರ್ಷಗಳು ಕಳೆದಿದೆ ಆದರೆ ಈಗ ಯಾಕೆ ಈ ವಿಷಯ ಮುನ್ನಲೆ ಗೆ ಬಂದಿದೆ. ವ್ಯಕ್ತಿಗಳ  ಹಣ ಬಲ/ ರಾಜಕೀಯ ಬಲ ಎಲ್ಲಾ ಸಮಯದಲ್ಲೂ ನಡೆಯುವುದಿಲ್ಲ ಒಂದು ದಿನ ಇಂತಹ ದುಷ್ಕೃತ್ಯಗಳಿಗೆ  ಅಂತ್ಯ ಕಾಣಲೇಬೇಕು. ಇದಕ್ಕೆಲ್ಲಾ  ಕಾಲ ಕೂಡಿಬರಬೇಕು ಅಷ್ಠೆ  ಈಗ ಆ ಕಾಲ ಕೂಡಿ ಬಂದಿದೆ ಎನ್ನುವಂತ ಚಿತ್ರಣ ಪಾವಗಡ ತಾಲ್ಲೂಕಿನ ಕಂಡು ಬರುತ್ತಿದೆ. ನೀಲಂಕಂಠೇಶ್ವರ ಆಸ್ತಿ ಉಳಿಸಲು ಕೆಲವರು ಶತಾಯ ಗತಾಯ ಕಾನೂನಾತ್ಮಕವಾಗಿ ಪ್ರಯತ್ನಿಸುತ್ತಿದ್ದಾರೆ,

ಕೋಟೇಶ್ವರ ಸ್ವಾಮಿ ಯ  ಆಸ್ತಿ ಯ ಕಥೆ…

ವೈ ಎನ್‌ ಹೊಸಕೋಟೆ ಗ್ರಾಮದ  ಭೀಮನಕುಂಟೆ ರಸ್ತೆಯಲ್ಲಿ ಕೋಟೇಶ್ವರ ಸ್ವಾಮಿ ನ ದೇವಸ್ಥಾನ ಇದೆ.  ಇದು ಚೋಳರಕಾಲದಲ್ಲಿ ನಿರ್ಮಿಸಿದ ದೇವಸ್ಥಾನ ಎನ್ನಲಾಗುತ್ತಿದೆ. ಈ ದೇವಸ್ಥಾನಕ್ಕೆ ಸೇರಿದ ಜಮೀನು ವೈ ಎನ್‌ ಹೊಸಕೋಟೆ ಯಿಂದ ಪಾವಗಡ ಕ್ಕೆ ಹೋಗುವ ರಸ್ತೆಯಲ್ಲಿ ಬರುತ್ತದೆ  ಸರ್ವೇ ನಂಬರ್ 249 ರಲ್ಲಿ ಏಳು (7) ಎಕರೆ 28 ಗುಂಟೆ ಮತ್ತು  250  0.35 ಗುಂಟೆ ಜಮೀನು ಕೋಟೇಶ್ವರ ದೇವರಿಗೆ ಸೇರಿದ್ದಾಗಿರುತ್ತದೆ.

1705643692571
ಕೋಟೆಶ್ವರ ದೇವರ ಜಮೀನು

1967:  ಮೂಲ ದಾಖಲೆಗಳ ಪ್ರಕಾರ 230 ಈ ಜಮೀನಿನ  ಮೂಲ ಸರ್ವೇ ನಂಬರ್

ವೈ ಎನ್‌ ಹೊಸಕೋಟೆಗೆ ಸೇರಿದ 230 ಮೂಲ ಸರ್ವೇ ನಂಬರ್‌ ನಲ್ಲಿ ಒಟ್ಟು 9 ಎಕರೆ 39 ಗುಂಟೆ ಇರುತ್ತೆ, ವೈ ಎನ್‌ ಹೊಸಕೋಟೆಯಿಂದ ದೊಡ್ಡಹಳ್ಳಿ ಮಾರ್ಗವಾಗಿ ಪಾವಗಡಕ್ಕೆ ಹೋಗುವ ಮುಖ್ಯ ರಸ್ತೆ ಯ ಅಭಿವೃದ್ಧಿ ಗೆ ( 1‌ ,16 ಗುಂಟೆ ) ಗೆ ಒಂದು ಎಕರೆ ಹದಿನಾರು ಗುಂಟೆ ಜಮೀನನ್ನು  ನೀಡಲಾಗುತ್ತದೆ,   ಸರ್ವೇನಂಬರ್‌  249 ರಲ್ಲಿ 7 ಎಕರೆ 28 ಗುಂಟೆ ಮತ್ತು 250 ಸರ್ವೇ ನಂಬರ್‌ ನಲ್ಲಿ ೦. 35 ಗುಂಟೆ ಜಮೀನು ಉಳಿಯುತ್ತದೆ.

1705761918672
ಕಂದಾಯ ದಾಖಲೆಯಲ್ಲಿ 249 ಸರ್ವೇ ನಂಬರ್- ಇನಾಂ ದೇವಾಲಯ ಕೋಟೇಶ್ವರ ದೇವರು ಮತ್ತು ಅಶ್ವತ್ಥ ಶಾಸ್ತ್ರಿ- ತಿಮ್ಮಪ್ಪ‌ ಎಂದು ನಮೂದಿಸಿರುತ್ತದೆ

1911 ರಿಂದ 1985-86 ವರೆಗಿನ ಕಂದಾಯ ದಾಖಲೆಗಳ ಪ್ರಕಾರ ಈ ಎರಡು ಸರ್ವೇ ನಂಬರ್‌ ಗಳು ಕೋಟೇಶ್ವರ ದೇವರು ಮತ್ತು ಅಶ್ವತ್ಥ ಶಾಸ್ತ್ರಿ, ವೈ ತಿಮ್ಮಪ್ಪ ಹೆಸರಿನ ಜಂಟಿ ಖಾತೆಯಲ್ಲಿ ಇರುತ್ತದೆ. ಈ ಜಮೀನು ದೇವಾದಾಯ ಮತ್ತು ಬ್ರಹ್ಮದಾಯ ಜಮೀನುಗಳಾಗಿ ವಿಂಗಡಣೆ ಯಾಗಿರುತ್ತದೆ ( ಇನಾಮು ಜಮೀನು)

ದೇವಾದಾಯದ ಜಮೀನು ( ಕೋಟೇಶ್ವರ ಸ್ವಾಮಿ ಗೆ ಸೇರಿದ್ದು)

1985-86 ರಲ್ಲಿ ಮೂಲ 230 ಸರ್ವೇ ನಂಬರ್‌ ನಲ್ಲಿ ಕೋಟೇಶ್ವರ ದೇವರ ಹೆಸರಿನಲ್ಲಿ ಇರುವ  4.18 ಗುಂಟೆ ಜಮೀನಿನಲ್ಲಿ ರಸ್ತೆ ಅಭಿವೃದ್ದಿಗೆ ಜಮೀನು ತೆಗೆದುಕೊಂಡ ನಂತರ, ಅಂತಿಮವಾಗಿ ಕೋಟೇಶ್ವರ ದೇವರಿನ ಹೆಸರಿನಲ್ಲಿ 249 ಸರ್ವೇ ನಂಬರ್‌ ನಲ್ಲಿ    3 ಎಕರೆ 26 ಗುಂಟೆ ಮತ್ತು 250 ಸರ್ವೇ ನಂಬರ್‌ ನಲ್ಲಿ 17 ಗುಂಟೆ ಜಮೀನು ಇರುತ್ತದೆ. ದೇವಾದಾಯ ಮತ್ತು ಬ್ರಹ್ಮದಾಯದ ಒಟ್ಟು ಜಮೀನು 249 ಸರ್ವೇ ನಂಬರ್‌ ನಲ್ಲಿ 7.28 ಗುಂಟೆ ಮತ್ತು 250 ಸರ್ವೇ ನಂಬರ್‌ ನಲ್ಲಿ 0.35 ಗುಂಟೆ ಇರುತ್ತದೆ. ಎರಡು ಸರ್ವೇ ನಂಬರ್‌ ಗಳಿಂದ  8.23 ಗುಂಟೆ( ಎಂಟು ಎಕರೆ ಇಪ್ಪತ್ತ ಮೂರು ಗುಂಟೆ ) ಜಮೀನು ದೇವಸ್ಥಾನದ್ದಾಗಿರುತ್ತದೆIMG 20240113 WA0007 1

ಬ್ರಹ್ಮದಾಯ ಜಮೀನು

  • ಬ್ರಹ್ಮದಾಯದ ಜಮೀನನ್ನು ವೆಂಕಟರಾವ್‌ ಕೋಂ ತಿಮ್ಮ ರಾವ್‌ ಅವರು ಎಚ್‌ ಪಿ ಮಾರ್ಕಂಡೇಯ ಶಾಸ್ತ್ರಿ ಯವರಿಗೆ  1952-1953 ರಲ್ಲಿ ಮಾರಾಟ ಮಾಡುತ್ತಾರೆ. ಅದರೆ ಮ್ಯಟೇಶನ್‌ ಊರ್ಜಿತವಾಗುವುದಿಲ್ಲ
  • 15-11-1966 ರಲ್ಲಿ ಮತ್ತೆ ಮಾರ್ಕಂಡೇಯ ಶಾಸ್ತ್ರಿ ಮತ್ತು ತಮ್ಮಂದಿರು ವಿಭಾಗ ಪತ್ರ ಮಾಡಿಕೊಂಡು ಮ್ಯಟೇಷನ್‌ ಹೋಗುತ್ತಾರೆ ಆಗಲೂ ತಿರಸ್ಕೃತ ಗೊಳ್ಳುತ್ತದೆ.
  • ಎಚ್‌ ಪಿ ಮಾರ್ಕಂಡೇಯ ಶಾಸ್ತ್ರಿ ಮತ್ತು ಸಹೋದರರು ಮತ್ತೊಂದು ವಿಭಾಗ ಪತ್ರ ವನ್ನು 1970-1971 ರಲ್ಲಿ ಮಾಡಿಕೊಳ್ಳುತ್ತಾರೆ ಆಗ ಮ್ಯಟೇಶನ್‌ ಪುರಸ್ಕೃತ ಗೊಳ್ಳುತ್ತದೆ.
  • ಎಚ್‌ ಪಿ ಮಾರ್ಕಂಡೇಯ ಶಾಸ್ತ್ರಿ ಯವರು 1974-1975 ರಲ್ಲಿ 249 ಸರ್ವೇ ನಂಬರ್‌ ನ 4.02 ( ನಾಲಕ್ಕು ಎಕರೆ ಎರಡು ಗುಂಟೆ) ಮತ್ತು 250 ಸರ್ವೆ ನಂಬರ್ನ 0,18 ಗುಂಟೆ ( ಹದಿನೆಂಟು ಗುಂಟೆ)  ಜಮೀನನ್ನು ಖಾರೆ ಹನುಮಂತಪ್ಪ  ಕೋಂ ಯಲ್ಲಪ್ಪ ಇವರಿಗೆ ಮಾರಾಟ ಮಾಡುತ್ತಾರೆ.
  • ಖಾರೆ ಹನುಮಂತರಾಯಪ್ಪ ಸೋದರ ನಾಗೇಂದ್ರಪ್ಪ ನವರು ಜಮೀನಿನ ಹಕ್ಕಿಗಾಗಿ ಪಾವಗಡ  ಭೂ ನ್ಯಾಯ ಮಂಡಳಿ ಮುಂದೆ ಹೋಗುತ್ತಾರೆ.ಅಲ್ಲಿ ಅವರ ಮನವಿ ತಿರಸ್ಕೃತ ಗೊಳ್ಳುತ್ತದೆ ಮತ್ತೆ  1983-84 ರಲ್ಲಿ ಮತ್ತೆ ಖಾರೆ ಹನುಮಂತರಾಯಪ್ಪ ನ್ಯಾಯಮಂಡಳಿ ಮುಂದೆ ಹೋಗುತ್ತಾರೆ ಆಗಲು ತಿರಸ್ಕೃತ ಗೊಳ್ಳುತ್ತದೆ. ಬೆಂಗಳೂರಿನ ಹೈಕೋರ್ಟ್‌ ಗೆ ಹೋದರು ಇವರಿಗೆ ಅನುಕೂಲ ವಾಗುವುದಿಲ್ಲ.

.ಕೋಟೇಶ್ವರ ದೇವರ ಆಸ್ತಿ ಉಳಿಸಲು 1990 ಹೋರಾಟ ಪ್ರಾರಂಭವಾಗುತ್ತದೆ.ಊರಿನ ಪ್ರಮುಖರಾಗಿದ್ದ  ದಿವಂಗತ ಬಿ ಎಲ್‌  ಮಲ್ಲಯ್ಯ ಮತ್ತು ಹೆಚ್‌ ಎಸ್‌ ನಾಗಭೂಷಣ್‌ ಹೋರಾಟದ ಮುನ್ನುಡಿಯನ್ನು ಬರೆಯುತ್ತಾರೆ. ಇವರಿಗೆ ಆರ್ಥಿಕ ಸಹಾಯವನ್ನು ದಿವಂಗತ‌  ಎ ಆರ್ ಶ್ರೀನಿವಾಸ ಮೂರ್ತಿ ಯವರು ಮಾಡುತ್ತಿರುತ್ತಾರೆ.

 ಮಧುಗಿರಿ ಎ ಸಿ ನ್ಯಾಯಾಲಯ :

ಮಧುಗಿರಿ ಉಪ ವಿಭಾಗಾಧಿಕಾರಿಗಳಾಗಿದ್ದ ಸಂದೀಪ್‌ ದವೆ ಅವರು ವೈ ಎನ್‌ ಹೊಸಕೋಟೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡುತ್ತಾರೆ. 249 ಮತ್ತು 250 ಸರ್ವೇನಂಬರ್‌ ನ ಕೋಟೇಶ್ವರ ದೇವರ  ಜಮೀನಿಗೆ ಸಂಬಂದಿಸಿದ ಭೂಮಿ ಪರಭಾರೆ ಬಗ್ಗೆ  26-6-1991 ರಂದು ತೀರ್ಪು ನೀಡಿರುತ್ತಾರೆ..

190630064835416
ಸಂದೀಪ್‌ ದವೆ – A.C ಮಧುಗಿರಿ

ತೀರ್ಪಿನ ಪ್ರಮುಖ ಅಂಶಗಳು

ಹೆಚ್‌ ಪಿ ಮಾರ್ಕಂಡೇಯ ಶಾಸ್ತ್ರಿ, ಖಾರೆ ಹನುಮಂತರಾಯಪ್ಪ ಮತ್ತು ಎನ್‌ ಆರ್‌ ಅಶ್ವತ್ಥ್‌ ಕುಮಾರ್‌ ತಂಡ ಜೊತೆ ನೆಡೆದ ಭೂಮಿ ಪರ ಭಾರೆಯ  (ಎಂ ಆರ್‌ ನಂಬರ್‌ ಮ್ಯೂಟಿ ಏಷನ್ ) ಗಳನ್ನು ರದ್ದು ಪಡಿಸಿದ್ದಾರೆ. ಎಲ್ಲಾ ಭೂ ದಾಖಲೆ ಗಳನ್ನು ಶ್ರೀ ಕೋಟೇಶ್ವರ ದೇವರ ಹೆಸರಿಗೆ ಸರಿಪಡಿಸಲು ಆದೇಶ ದಲ್ಲಿ ತಿಳಿಸಿರುತ್ತಾರೆ.

ಪಾವಗಡ ತಹಸಿಲ್ದಾರ್‌ ಅವರಿಗೆ ಆದೇಶ –    ತಕ್ಷಣ ಎರಡು ಸರ್ವೇ ನಂಬರ್‌ ಜಮೀನುಗಳ ದುರಸ್ತಿಯನ್ನು ಮಧುಗಿರಿ ಏಡಿಎಲ್‌ ಆರ್‌ ರೊಂದಿಗೆ  ಸೇರಿ ಮಾಡಬೇಕು ಎಲ್ಲಾ ಕಂದಾಯ ದಾಖಲೆಗಳನ್ನು ಕೊಟೇಶ್ವರ ದೇವರ ಹೆಸರಿಗೆ ಬದಲಿಸಬೇಕು ಮತ್ತು ತಾಲ್ಲೂಕಿನ ಮುಜರಾಯಿ ಅಧಿಕಾರಿಯಾದ ತಾವು ಇಂತಹ ಜಮೀನುಗಳನ್ನು ಸಂರಕ್ಷಿಸುವ ಜವಬ್ದಾರಿ ನಿಮ್ಮದು. ತಕ್ಷಣ ಈ ಜಮೀನನ್ನು ತಮ್ಮ ವಶಕ್ಕೆ ಪಡೆಯಬೇಕು ಎಂದು ತಿಳಿಸಿದ್ದಾರೆ.

ಈ ಆದೇಶ ಪಾಲನೆ ಆಗಿದೆಯಾ/ ಇಲ್ಲವಾ  ಎಂಬುದರ ಬಗ್ಗೆ ಮುಂದಿನ ಸಂಚಿಕೆಯಲ್ಲಿ ತಿಳುಸುತ್ತೆವೆ

ನಕಲಿ ಆಟ (  Forgery) :

  • ಖಾರೆ ಹನುಮಂತರಾಯಪ್ಪ ಮತ್ತು ಈತನ ಸಹೋದರ ಇಬ್ಬರು ಸೇರಿ ಕೋಟೇಶ್ವರ ದೇವರಿನ ಹೆಸರಿನಲ್ಲಿರುವ ದೇವಾದಾಯ  ಮತ್ತು ಬ್ರಹ್ಮದಾಯ ಜಮೀನಿನ ಭೂಮಿ ಹಕ್ಕಿ ಗಾಗಿ ಪಾವಗಡ ಭೂ ನ್ಯಾಯಾಲದ ಮುಂದೆ  ಅರ್ಜಿ ಸಲ್ಲಿಸುತ್ತಾರೆ ಅದು ತಿರಸ್ಕೃತ ಗೊಳ್ಳುತ್ತದೆ.  ಇಲ್ಲಿರುವ ಸ್ವಾರಸ್ಯಕರ ಅಂಶ ವೇನೆಂದರ ಖಾರೆ ಹನುಮಂತರಾಯಪ್ಪ ಕೊಂಡಿರುವುದು ಬ್ರಹ್ಮದಾಯ ಜಮೀನು ಮಾತ್ರ ಆದರೆ ಅವರು ಸಹೋದರನ ಜೊತೆ ಸೇರಿ ದೇವಾದಯಾದ ಜಮೀನಿನ ಹಕ್ಕಿ ಗೂ ಅರ್ಜಿ ಸಲ್ಲಿಸುತ್ತಾರೆ.( 249 ಮತ್ತು 250)
  • 1987-1988 ರಲ್ಲಿ ಖಾರೆ ಹನುಮಂತರಾಯಪ್ಪ  ನವರು ವೈ ಎನ್‌ ಹೊಸಕೋಟೆ ವಾಸಿಗಳಾದ ಹೆಚ್‌ ವಿ ಶಂಕರರತ್ನಂ, ಟಿ ಆರ್‌ ವಿ ಪ್ರಸಾದ್‌,ಎನ್‌ ಆರ್‌ ಅಶ್ವಥ್‌ ಕುಮಾರ್‌, ಟಿ ವೆಂಕಟೇಶ್‌, ಎ ಎನ್‌ ಲಕ್ಷೀಪ್ರಸಾದ್‌ ಅವರಿಗೆ 11-05-1985 ರಂದು ಮಾರಾಟ ಮಾಡುತ್ತಾರೆ.. ರಾಜಸ್ವ ನೀರೀಕ್ಷಕರು ಮ್ಯಟೇಶನ್‌  ಅನುಮೋದಿಸುತ್ತಾರೆ.
  • ಪಾವಗಡ ಭೂ ನ್ಯಾಯಮಂಡಳಿ ಆದೇಶ ದಂತೆ ಖಾರೆ ಹನುಮಂತರಾಯಪ್ಪ ಮತ್ತು ನಾಗೇಂದ್ರಪ್ಪ ಅವರಿಗೆ 249 ಮತ್ತು 250 ರ ಭೂಮಿಯ ಹಕ್ಕುನೀಡುವುದಿಲ್ಲ. ಭೂಮಿಯ ಹಕ್ಕು ಇಲ್ಲದಿರುವ ವ್ಯಕ್ತಿಯಿಂದ  ವೈ ಎನ್‌ ಹೊಸಕೋಟೆ ಐದು ಜನ ಸಾಹುಕಾರರು ಜಮೀನನ್ನು ಕೊಂಡು ಕೊಳ್ಳುತ್ತಾರೆ.IMG 20240110 103608
  • ಇನ್ನೊಂದು ಆಸಕ್ತಿಕರ ವಿಷಯವೇನೆಂದರೆ ಈ ಎರಡು ಜಮೀನಿ ಗೆ ಸಂಬಂದಿಸಿದಂತೆ  1910-11  ರಿಂದ 1985-86 ರ ವರೆಗಿನ ಕಂದಾಯ ದಾಖಲೆಗಳಲ್ಲಿ ( ಪಹಣಿ- ಖಾತೆ)    ಕೋಟೇಶ್ವರ ದೇವರು ಮತ್ತು  ಅಶ್ವಥ ಶಾಸ್ತ್ರಿ- ತಿಮ್ಮಪ್ಪ ಹೆಸರುಗಳಲ್ಲಿ ಜಂಟಿ ಖಾತೆ ಇರುತ್ತೆ ಹೊರತು  ವೆಂಕಟರಾವ್‌ ಹೆಸರು ಇರೋದಿಲ್ಲ.
  •    ಜಮೀನಿನ ಮೇಲೆ ಯಾವುದೇ ಹಕ್ಕು ಇಲ್ಲದಿರುವ  ವೆಂಕಟರಾವ್‌ ಎಂಬ ವ್ಯಕ್ತಿಯಿಂದ  ಮಾರ್ಕಂಡೇಯ ಶಾಸ್ತ್ರಿಯವರು  ಜಮೀನು ಕೊಂಡು ಕೊಳ್ಳುತ್ತಾರೆ ನಂತರ ಇವರು ಖಾರೆ ಹನುಮಂತತಾರಪ್ಪನಿಗೆ ಮಾರಾಟ  ಮಾಡುತ್ತಾರೆ.
  • ಜಮೀನಿನ  ಹಕ್ಕು ಇಲ್ಲದಿರುವ ಖಾರೆ ಹನುಮಂತತಾರಪ್ಪ ಎಂಬ ವ್ಯಕ್ತಿಯಿಂದ  ವೈ ಎನ್‌ ಹೊಸಕೋಟೆ ಐದು ಜನ ಸಾಹುಕಾರರು ಜಮೀನು ಕೊಂಡು ಕೊಳ್ಳುತ್ತಾರೆ. ಕೆಲ ಭ್ರಷ್ಟ ಅಧಿಕಾರಿಗಳ  ಕೃಪಾಕಟಾಕ್ಷ ದಲ್ಲಿ ದಾಖಲೆಗಳು  ರೆಡಿ ಯಾಗಿರುವಂತಿದ

ಭೂಗಳ್ಳರು ಮಾಡಿರುವ ಐನಾತಿ ಕೆಲಸಗಳನ್ನು ಜನರ ಮುಂದೆ ಇಡಬೇಕಾದ ಅವಶ್ಯಕತೆ ತುಂಬಾ ಇದೆ. ಯಾರು –ಯಾರಿಗೆ ಯಾಮಾರಿಸಿದ್ದಾರೆ, ಇವರ ತಂತ್ರಗಾರಿಕೆಯ ಸಂಪೂರ್ಣ ವಿವರವನ್ನು ದಾಖಲೆಗಳ ಸಮೇತ ನಿಮ್ಮ ಮುಂದೆ ಸಪ್ತಸ್ವರ ಮಾಧ್ಯಮ  ಹಂತ- ಹಂತ ವಾಗಿ ಇಡಲಿದೆ

ಪ್ರಸ್ತುತ ಅಧಿಕಾರಿಗಳು ಎಷ್ಟೇ ಭ್ರಷ್ಟರಾದರು ಇವರಿಗೆ ರಾಜಕೀಯ ವ್ಯವಸ್ಥೆ ಬೆಂಬಲಿಸಿದರು ದೇಶ ದ ಕಾನೂನು ವ್ಯವಸ್ಥೆಯಲ್ಲಿ ಅಂತಿಮವಾಗಿ ಧರ್ಮ ಕ್ಕೆ ಜಯ ಸಿಗಲಿದೆ.

ಪ್ರಸ್ತುತ ಊರಿನ ಕೆಲವರು ದೇವಸ್ಥಾನದ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿಕೊಂಡು ದೇವಸ್ಥಾನ ದ ಜಮೀನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ನಿರೀಕ್ಷಿಸಿ : ಮುಂದಿನ ಸಂಚಿಕೆಯಲ್ಲಿ “ಸಾಹುಕಾರ ರ “ನಕಲಿ ಆಟ ” ದ ಅಸಲಿ ರೂಪ ” ನಿಮ್ಮ ಮುಂದೆ….