IMG 20220225 WA0057

ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಶೈಕ್ಷಣಿಕವಾಗಿ ಮುಂದುವರಿಯಬೇಕು

DISTRICT NEWS ತುಮಕೂರು

ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಶೈಕ್ಷಣಿಕವಾಗಿ ಮುಂದುವರಿಯಬೇಕು ಶಾಸಕ   ವೆಂಕಟರಮಣಪ್ಪ ಕರೆ.                                                            ಪಾವಗಡ.   ಇಂದು  ತಾಲ್ಲೂಕಿನ ತುಮಕೂರು ರಸ್ತೆಯಲ್ಲಿ  ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ವೆಂಕಟರಮಣಪ್ಪ ಮಾತನಾಡುತ್ತಾ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ1.90 ಕೋಟಿ ರೂ ವೆಚ್ಚದಲ್ಲಿ ವಸತಿ ನಿಲಯ ಕಟ್ಟಡ ನಿರ್ಮಾಣವಾಗಿದೆ.  ಇದರಿಂದ ಗ್ರಾಮೀಣ ಭಾಗದ ಅಲ್ಪ ಸಂಖ್ಯಾತ ಬಾಲಕಿಯರಿಗೆ ಹೆಚ್ಚಿನ ಅನುಕೂಲವಾಗಲಿದೆ, ಪಾವಗಡ ಟೌನಿನಿಂದ  ವಸತಿ ನಿಲಯ ದೂರವಿದ್ದು, ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರಲು ಸಮಸ್ಯೆ ಉಂಟಾಗುತ್ತದೆ, ಹೀಗಾಗಿ ಬಸ್ ವ್ಯವಸ್ಥೆ ಮಾಡಲು 5 ಲಕ್ಷ ರೂ ಅನುದಾನ ನೀಡಲಾಗುವುದು. ಉಳಿಕೆ ಹಣವನ್ನು ಅಲ್ಪಸಂಖ್ಯಾತ ಸಮುದಾಯದ ಮುಖಂಡರು ದೇಣಿಗೆ ನೀಡಿ ವ್ಯವಸ್ಥೆ ಮಾಡಬೇಕು ಎಂದರು.ವಸತಿ ನಿಲಯಕ್ಕೆ ನೀರಿನ ಅವಶ್ಯಕತೆ ಇದ್ದು ಕೊಳವೆ ಬಾವಿ ಕೊರೆಸಿ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.  ಮುಖ್ಯರಸ್ತೆಯಿಂದ  ವಸತಿ ನಿಲಯ ಇರುವ ಜಾಗಕ್ಕೆ  ಸಮರ್ಪಕ ರಸ್ತೆಯ ಸೌಕರ್ಯ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಶಬ್ಬೀರ್ ಅಹಮದ್ ಮಾತನಾಡುತ್ತಾ, ಇದುವರೆಗೂ ವಸತಿ ವಿದ್ಯಾರ್ಥಿ ನಿಲಯವು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿತ್ತು ಇದೀಗ ನೂತನ ಕಟ್ಟಡ ಆರಂಭವಾಗಿರುವುದರಿಂದ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದೆ ಎಂದರು. ವಿದ್ಯಾರ್ಥಿನಿಯರು ಸರ್ಕಾರದ ಈ  ಸೌಲಭ್ಯಗಳನ್ನು ಬಳಸಿಕೊಂಡು  ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿ ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
  ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ಜಾಹ್ನವಿ, ಸದಸ್ಯ ರಾಜೇಶ್, ರವಿ, ಸುದೇಶ್ ಬಾಬು, ವೇಲು, ವೆಂಕಟರಮಣಪ್ಪ, ಮುಖಂಡ ಪ್ರಮೋದ್ ಕುಮಾರ್, ಎಂ.ಎಸ್.ವಿಶ್ವನಾಥ್, ಷಾ ಬಾಬು, ರಿಜ್ವಾನ್,  ನಿಸಾರ್, ಅನ್ವರ್ ಬಾಷ, ಇತರರು  ಉಪಸ್ಥಿತರಿದ್ದರು.

ವರದಿ: ಶ್ರೀನಿವಾಸುಲು ಎ