ನ್ಯಾಕ್ ಕಮಿಟಿ ಭೇಟಿ.
ಪಾವಗಡ: ಪಟ್ಟಣದ ವೈ ಇ ಆರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಸಮಿತಿ “ಬಿ” ಗ್ರೇಡ್ ನೀಡಿರುವುದಾಗಿ ಪ್ರಾಂಶುಪಾಲ ಡಾ. ಎನ್ ಶ್ರೀಧರ್ ತಿಳಿಸಿದ್ದಾರೆ.ಸಮಿತಿ ಮುಖ್ಯಸ್ಥ ಪ್ರೊ. ಮೊಹಮದ್ ಇಕ್ಬಾಲ್ ಅಲಿ, ಸದಸ್ಯ ಸಂಚಾಲಕರಾದ ಪ್ರೊ ಮನೀಶ್ ಬಳ್ಳ, ಸದಸ್ಯ ಡಾ. ಝೇವಿಯರ್ ವೇದಂ ಎಸ್.ಜೆ ರವರು ಫೆ-18, 19 ಶುಕ್ರವಾರ, ಶನಿವಾರದಂದು ಕಾಲೇಜಿನ ವಿವಿಧ ವಿಭಾಗಗಳು, ಪ್ರಯೋಗಾಲಯಗಳು, ಕ್ರೀಡಾ ಸೌಲಭ್ಯ, ದಾಖಲಾತಿಗಳು, ಕಾಲೇಜಿನ ಸಂಕೀರ್ಣ, ಎನ್.ಎಸ್.ಎಸ್., ಎನ್.ಸಿ.ಸಿ., ರೆಡ್ ಕ್ರಾಸ್, ಸ್ಕೌಟ್ಸ್, ಗೈಡ್ಸ್ ಘಟಕಗಳನ್ನು ಪರಿಶೀಲನೆ ನಡೆಸಿದ್ದರು.ಕಾಲೇಜಿಗೆ ಹಳೆಯ ವಿದ್ಯಾರ್ಥಿಗಳು ನೀಡಿರುವ ಕೊಡುಗೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿರುವ ಸಮಿತಿಯು ಸಂಶೋಧನಾ ಕಾರ್ಯಗಳಿಗೆ ಹೆಚ್ಚು ಒತ್ತು ನೀಡುವಂತೆ ಸಲಹೆ ನೀಡಿತು. ಕಳೆದ ಬಾರಿಯೂ ಕಾಲೇಜಿಗೆ “ಬಿ” ಗ್ರೇಡ್ ನೀಡಲಾಗಿತ್ತು. ಪ್ರಸ್ತುತ ಅದೇ ಶ್ರೇಣಿಯನ್ನು ಕಾಲೇಜಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.ವೈ ಇ ಆರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿದ್ದ ನ್ಯಾಕ್ ಸಮಿತಿ ಪದಾಧಿಕಾರಿಗಳು ಶನಿವಾರ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಶ್ರೀಧರ್ ಅವರಿಗೆ ಸಭಾ ನಿರ್ಗಮನಾ ವರದಿ ನೀಡಿದರು. ಸಮಿತಿ ಮುಖ್ಯಸ್ಥ ಪ್ರೊ. ಮೊಹಮದ್ ಇಕ್ಬಾಲ್ ಅಲಿ, ಸದಸ್ಯ ಸಂಚಾಲಕರಾದ ಪ್ರೊ ಮನೀಶ್ ಬಳ್ಳ, ಸದಸ್ಯ ಡಾ. ಝೇವಿಯರ್ ವೇದಂ ಎಸ್.ಜೆ, ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ಡಾ. ಕೆ.ರಾಜಶೇಖರರೆಡ್ಡಿ, ಹಳೆಯ ವಿದ್ಯಾರ್ಥಿ ಸಂಘದ ಸಂಚಾಲಕ ಎಂ.ಬಿ.ಧನಂಜಯ, ಕಿಟ್ಟಪ್ಪ, ಶಶಿಕಿರಣ್, ಡಾ.ಸಿದ್ದರಾಮು, ವೆಂಕಟರವಣ, ಕೃಷ್ಣ, ಪ್ರಸನ್ನಕುಮಾರ್, ಸತೀಶ್ ಕುಮಾರ್, ಮೋಹನ್ ಕುಮಾರ್, ದೀಪಕ್, ಸುಮುಖ್, ಖಾದರ್ ಪಾಷ ಖಾದ್ರಿ, ಭವ್ಯ ಉಪಸ್ಥಿತರಿದ್ದರು.
ವರದಿ: ಶ್ರೀನಿವಾಸುಲು ಎ