ಬಜರಂಗದಳ ಹಾಗೂ ಶ್ರೀರಾಮಸೇನೆ ಸಂಘಟನೆಗಳಿಂದ ಪ್ರತಿಭಟನೆ.
ಪಾವಗಡ. ಶಿವಮೊಗ್ಗದಲ್ಲಿ ಬಜರಂಗದಳದ ಹರ್ಷನ ಕಗ್ಗೊಲೆ ಖಂಡಿಸಿ, ಇಂದು ಪಾವಗಡದಲ್ಲಿ ತಾಲೂಕು ಬಜರಂಗದಳ ಹಾಗೂ ಶ್ರೀರಾಮಸೇನೆ ಸಂಘಟನೆಗಳಿಂದ ಶನಿಮಹಾತ್ಮ ವೃತದಿಂದ ತಾಲೂಕು ಕಚೇರಿಯವರೆಗೆ ತೆರಳಿ ಪ್ರತಿಭಟನೆ ಮಾಡಲಾಯಿತು . ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ್ ಸುಮನ್ ಮಾತನಾಡುತ್ತಾ, ಹರ್ಷ ಕೊಲೆಯ ಹಿಂದೆ SDPI ,PFI,CFI ಸಂಘಟನೆಗಳ ಕೈವಾಡವಿದೆ ಆರೋಪಿಗಳನ್ನು ಈ ಕೂಡಲೇ ಬಂಧಿಸಬೇಕು ಹಾಗೂ, ಹರ್ಷ ರವರ ಕುಟುಂಬಕ್ಕೆ ಸರ್ಕಾರ 50 ಲಕ್ಷ ರೂ ಪರಿಹಾರ ನೀಡಬೇಕೆಂದರು. ನಂತರ ಶ್ರೀರಾಮಸೇನೆಯ ಸಂಚಾಲಕ ರಾಮಾಂಜಿ ಮಾತನಾಡುತ್ತಾ, ಹಿಜಾಬ್ ವಿಚಾರ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದ್ದು, ಕೋರ್ಟ್ ಮಧ್ಯಂತರ ಆದೇಶದ ಮೇರೆಗೆ ಶಾಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಎಂಬ ನಿಯಮವಿದ್ದು, ಕೆಲವು ಮುಸ್ಲಿಂ ಸಂಘಟನೆಗಳ ಕುಮ್ಮಕ್ಕಿನಿಂದ ಮುಸ್ಲಿಂ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು. ಹರ್ಷನ ಮರಣಕ್ಕೆ ಸರ್ಕಾರ ಸರಿಯಾದ ರೀತಿಯಲ್ಲಿ ನ್ಯಾಯ ಒದಗಿಸಬೇಕು, ಎಂದರು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಸಂಚಾಲಕ ರಾಮಾಂಜಿ, ಬಜರಂಗದಳದ ತಾಲೂಕು ಸಂಚಾಲಕ ವೆಂಕಟಾಪುರದ ಸುಮನ್ , ವಿನೋದ್ ,ಶ್ರೀನಾಥ್ ,ನಾಗೇಶ್ , ಅಲಕುಂದಿರಾಜ್, ರಾಕೇಶ್, ವಿನೋದ್, ಮಂಜುನಾಥ್, ರವಿ, ಹರ್ಷ ಮುಂತಾದವರು ಹಾಜರಿದ್ದರು.
ವರದಿ:ಶ್ರೀನಿವಾಸುಲು ಎ