ಮಧುಗಿರಿ ತಾಲ್ಲೂಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟು ಹಬ್ಬದ ಅಮೃತೋತ್ಸವ ಹಾಗೂ ಸ್ವಾತಂತ್ರೋತ್ಸವ ನಡಿಗೆ ಕಾರ್ಯಕ್ರಮ ದ ಪೂರ್ವಭಾವಿ ಸಭೆ
ಮಧುಗಿರಿ ಪಟ್ಟಣದ ಎಂ ಎನ್ ಕೆ ಸಮುದಾಯ ಭವನದಲ್ಲಿ ದಿನಾಂಕ 24 7.2022 ರಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ 75ನೇ ಹುಟ್ಟು ಹಬ್ಬದ ಅಮೃತೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ ನಡಿಗೆ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕರು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಕೆ ಎನ್ ರಾಜಣ್ಣನವರು ಕಾರ್ಯಕ್ರಮದ ಉದ್ಘಾಟನೆಯನ್ನುಮಾಡಿದರು
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿ ಜೆ. ರಾಜಣ್ಣನವರು ರಾಜ್ಯದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗ ಮಧುಗಿರಿ ತಾಲೂಕಿನಲ್ಲಿ ಕೆ ಎನ್ ರಾಜಣ್ಣನವರು ಕೂಡ ಶಾಸಕರಾಗಿದ ಸಂದರ್ಭದಲ್ಲಿ ಅತ್ಯಂತ ಹಿಂದುಳಿದ ವರ್ಗದವರಿಗೆ ಹಾಗೂ ಬಡ ಕುಟುಂಬದವರಿಗೆ ದೀನ ದಲಿತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಮಾಡಬೇಕು ಎಂದು ಕೇಳಿದಾಗ ಅವರು ಇವರು ಕೇಳಿದಂತಹ ಎಲ್ಲಾ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಇಂತಹ ಧೀಮಂತ ನಾಯಕನ ಹುಟ್ಟು ಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ತುಮಕೂರು ಜಿಲ್ಲೆಯ ಧೀಮಂತ ನಾಯಕರಾದ ಕೆಎನ್ ರಾಜಣ್ಣನವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವುದು ನಮಗೆ ತುಂಬಾ ಖುಷಿ ತಂದಿದೆ
ಈ ಕಾರ್ಯಕ್ರಮಕ್ಕೆ ನಮ್ಮ ತಾಲೂಕಿನಿಂದ ಅತಿಹೆಚ್ಚಿನ ಜನರು ಕಾರ್ಯಕ್ರಮಕ್ಕೆ ಆಗಮಿಸುವುದು ಯಶಸ್ವಿಗೊಳಿಸಿ ಬೇಕೆಂದು ಮನವಿ ಮಾಡಿದರು
ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ ಬಡವನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷಣಿಯಾದ ಜಯಲಕ್ಷ್ಮಮ್ಮ ಮಾತನಾಡುತ್ತಾ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಹುಟ್ಟುಹಬ್ಬ ಕಾರ್ಯಕ್ರಮ ಸಿದ್ದರಾಮೋತ್ಸವ ಆಗಬೇಕು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಕೆಎನ್ ರಾಜಣ್ಣನವರನ್ನು ನಂಬಿದವರು ಯಾರೂ ಕೂಡ ಕೆಟ್ಟಿಲ್ಲ ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಇವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಜಯಶೀಲರನ್ನಾಗಿ ಮಾಡಬೇಕೆಂದು ತಮ್ಮಲ್ಲಿ ಕೋರುತ್ತೇನೆ
ಜಿಲ್ಲಾ ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ನಾಗೇಶ್ ಬಾಬು ಅವರು ಮಾತನಾಡುತ್ತಾ ಈ ರಾಜ್ಯದಲ್ಲಿ 40 ವರ್ಷಗಳ ಕಾಲ ಕಾಂಗ್ರೆಸ್ ಆಳ್ವಿಕೆಯ ಸಂದರ್ಭದಲ್ಲಿ ಅಚ್ಚು ಹಸಿರಾಗಿ ಉಳಿದಿತ್ತು ದಾವಣಗೆರೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮ ನಮ್ಮ ಮಧುಗಿರಿಯಲ್ಲೂ ಕೆ ಎನ್ ರಾಜಣ್ಣನವರು ಮಾಡಿರುವ ಸಾಧನೆಗಳ ಕುರಿತು ನಾವು ಬೃಹತ್ ಚಿಂತನ ಮಂಥನ ಕಾರ್ಯಕ್ರಮ ಮಾಡಿ ಜನರಿಗೆ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೆಎನ್ ರಾಜಣ್ಣನವರು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ರೈತರಿಗೆ ಸಾಲ ಮನ್ನಾ ಮಾಡಿದರು ಮುಂದಿನ ದಿನಗಳಲ್ಲಿಯೂ ಕೂಡ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ನಾವು ಖಂಡಿತವಾಗಿ ಸಾಲ ಮನ್ನಾ ಮಾಡೇ ತೀರುತ್ತೇವೆ ಎಂದರು ಮತ್ತು ಈಗಾಗಲೇ ಜಿಲ್ಲಾ ಬ್ಯಾಂಕಿನ ಅಧ್ಯಕ್ಷರಾಗಿ ನಾನು ಸುಮಾರು 125 ಜನರಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟಿದ್ದೇನೆ
ಕಾಂಗ್ರೆಸ್ ಪಕ್ಷ ಈ ರಾಜ್ಯದಲ್ಲಿ ಈ ದೇಶದಲ್ಲಿ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಿಮ್ಮಿಂದ ಮಾತ್ರ ಸಾಧ್ಯ ಯಾರೋ ಉಪಕಾರವನ್ನು ಸ್ಮರಿಸಲ್ಲ ಅಂತವರು ಯಾವತ್ತೂ ಕೂಡ ಉದ್ದಾರವಾಗುವುದಿಲ್ಲ ಮೊನ್ನೆ ನಡೆದಂತಹ ವಿಧಾನ ಪರಿಷತ್ ಚುನಾವಣೆಯಲ್ಲಿ ಎಲ್ಲಾ ತಾಲೂಕುಗಳ ಪ್ರಮುಖ ಮುಖಂಡರುಗಳು ಕಾರ್ಯಕರ್ತರು ಶ್ರಮವಹಿಸಿ ಆರ್ ರಾಜೇಂದ್ರ ರವರ ಪರವಾಗಿ ಮತಯಾಚನೆ ಮಾಡಿ ಅವರನ್ನು ಗೆಲ್ಲಿಸಲು ಕಾರಣಿಭೂತರಾಗಿರುತ್ತಾರೆ ನಾನು ಅವರೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ
ಅಮೃತ ಮಹೋತ್ಸವ ಕಾರ್ಯಕ್ರಮ ಮುಗಿದ ನಂತರ ಪಂಚಾಯಿತಿಗಳಿಂದ ಹೋಬಳಿ ಕೇಂದ್ರಕ್ಕೆ ಕಾಲು ನಡಿಗೆಯಲ್ಲಿ ನಡೆದು ಅಲ್ಲಿ ಎಲ್ಲಾ ಬೂತ್ ಕಮಿಟಿಗಳ ಅಧ್ಯಕ್ಷರುಗಳನ್ನು ಪದಾಧಿಕಾರಿಗಳನ್ನು ಮಾತನಾಡಿಸಿಕೊಂಡು ಬರುವುದು ಇನ್ನೇನು ಕೆಲವೇ ದಿನಗಳಲ್ಲಿ ಯಾವಾಗ ಬೇಕಾದರೂ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿಗಳ ಚುನಾವಣೆ ಬರಬಹುದು ಅದಕ್ಕೂ ಕೂಡ ನಾವು ಸಿದ್ಧರಿರಬೇಕು ರಾಜಕೀಯ ಶಕ್ತಿಯ ಮುಂದೆ ಯಾವ ಶಕ್ತಿಯು ಕೂಡ ಸಮವಲ್ಲ ರಾಜಕೀಯ ಸಂಘರ್ಷಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರಬೇಕು ಎಂದರು
ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಎಸ್ ಮಲ್ಲಿಕಾರ್ಜುನಯ್ಯ ಪ್ರಾರ್ಥನೆ ಮಹಿಳಾ ಸದಸ್ಯರಿಂದ ನಿರೂಪಣೆ ಪುರಸಭಾ ಸದಸ್ಯರಾದ ಚಂದ್ರಶೇಖರ್ ರವರಿಂದ ಕಾರ್ಯಕ್ರಮದಲ್ಲಿ ಹಾಜರಿದ್ದ ಜಿಲ್ಲಾ ಬ್ಯಾಂಕಿನ ಉಪಾಧ್ಯಕ್ಷರಾದ ಜಿ ಜೆ ರಾಜಣ್ಣನವರು ಪಿ ಎಲ್ ಡಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಚಿಕ್ಕರಂಗಪ್ಪ ನಿವೃತ್ತ ಕೆ ಎ ಎಸ್ ಎನ್ ಗೋಪಾಲಯ್ಯಅಧಿಕಾರಿಯಾದ ಮಾಜಿ ಪುರಸಭಾ ಅಧ್ಯಕ್ಷರಾದ ಎಂ ಕೆ ನಂಜುಂಡಯ್ಯ ಸಹಕಾರ ಮಂಡಲದ ಮಾಜಿ ಅಧ್ಯಕ್ಷರಾದ ಗಂಗಾಣಿ ಮಾಜಿ ಜಿಲ್ಲಾ ಪಂಚಾಯತಿಯ ಸದಸ್ಯರಾದ ಆದಿ ನಾರಾಯಣ ರೆಡ್ಡಿ ಚಿನ್ನಪ್ಪ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಚ್ ಡಿ ಕೃಷ್ಣಪ್ಪ ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಕೆಂಚಣ್ಣ ಕೊರಟಗೆರೆ ತಾಲೂಕಿನ ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹನುಮಾನ್ ಜಿಲ್ಲಾ ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ ಬಿ ಎನ್ ನಾಗೇಶ್ ಬಾಬು ಕುರುಬ ಸಮಾಜದ ಅಧ್ಯಕ್ಷರಾದ ಶಿವಣ್ಣ ಜಯಣ್ಣ ಕೆ ಪ್ರಕಾಶ್ ರಂಗಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜ್ಯೋತಿ ಕೆ ಕೆಪಿಸಿಸಿ ಘಟಕದ ಸದಸ್ಯರಾದ ಅನುಸೂಯಮ್ಮ ಶನಿವಾರಮರೆಡ್ಡಿ ಪಿಟಿ ಗೋವಿಂದಯ್ಯ ಜೆಡಿ ವೆಂಕಟೇಶ್ ಸಿದ್ದಲಿಂಗಪ್ಪ ಎಚ್ಎಂಟಿ ನರಸಿಯಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷರಾದ ವೀರಣ್ಣ ರಾಮಣ್ಣ ಸಂಜೀವ ಗೌಡ ಪ್ರಸನ್ನ ಕುಮಾರ್ ಎಂ ಜಿ ಶ್ರೀನಿವಾಸ್ ಮೂರ್ತಿ ಮಹಾಲಿಂಗಪ್ಪಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು
ವರದಿ ಲಕ್ಷ್ಮಿಪತಿ ಎಲ್ಕೂರ್