IMG 20240822 WA0019

ಪಾವಗಡ: ವಿದ್ಯಾ ದಾನ ಮಹಾದಾನ…!

DISTRICT NEWS ತುಮಕೂರು

ವಿದ್ಯಾ ದಾನ ಮಹಾದಾನ. ನ್ಯಾಯಮೂರ್ತಿ ವಿ ಮಾದೇಶ್.

ಪಾವಗಡ : ವಿದ್ಯೆಯೆಂಬುದು ಸಾಧಕನ ಸ್ವತ್ತು, ಅದನ್ನು ಯಾರೂ ಸಹ ಕಸಿಯಲು ಸಾಧ್ಯವಿಲ್ಲವೆಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಾದೇಶ್ ವಿ ತಿಳಿಸಿದರು.

ಪಟ್ಟಣದ ಬಿ ಆರ್ ಸಿ ಕಚೇರಿಯಲ್ಲಿ ನವೋದಯ ಕಲಾ ಸಂಘ ದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭೋತ್ಸವ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಭವಿಷ್ಯತ್ತು ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಅಪಾರವೆಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಉತ್ತೇಜನ, ಪ್ರೇರಣೆ ದೊರತಾಗೆ ಮಾತ್ರ ಉನ್ನತ ಸ್ಥಾನಗಳಿಗೆ ಹೋಗಲು ಅನುಕೂಲವಾಗುತ್ತದೆ ಎಂದರು.

ಯಾವ ವಿದ್ಯಾರ್ಥಿಗಳು ತಂದೆ ತಾಯಿ ಮತ್ತು ಗುರುಗಳಿಗೆ ಗೌರವ ನೀಡಿ ಜೀವನದಲ್ಲಿ ಗುರಿ ಇರುವವರು ಮುಂದೆ ಉನ್ನತ ಹಂತಕ್ಕೆ ಹೋಗುತ್ತಾರೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ , ಕ್ಷೇತ್ರ ಶಿಕ್ಷಣಾಧಿಕಾರಿ ಇಂದಿರಾಣಮ್ಮ ಮಾತನಾಡಿ,

ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬ ನಾಣ್ನುಡಿಯಂತೆ ವಿದ್ಯಾರ್ಥಿಗಳಿಗೆ ಚಿಕ್ಕಂದಿನಿಂದಲೇ ವಿದ್ಯೆ ಜೊತೆಗೆ ಜೀವನದ ಕಷ್ಟವನ್ನು ಕಲಿಸಬೇಕಿದೆ.
ಬರಗಾಲದ ನಾಡಿನಲ್ಲಿ ಬಂಗಾರದ ಮಳೆ ಎಂಬಂತೆ ತಾಲ್ಲೂಕಿನ ಯುವಕರು ಕ್ರೀಡೆಯಲ್ಲಿ ತೋರಿದ ಸಾಧನೆ
ಗುರುತಿಸುವ ಕೆಲಸವನ್ನು ಮಾಡಿದ ಸಂಘಕ್ಕೆ ಅಭಿನಂದನೆ ತಿಳಿಸಿದರು.

ಯಾವುದೇ ವ್ಯಕ್ತಿ ಎಷ್ಟೇ ಉನ್ನತ ಸ್ಥಾನಕ್ಕೆ ಹೋದರು ಸಹ ನನಗೆ ಜನ್ಮ ನೀಡಿದ ಹುಟ್ಟೂರನ್ನ ಯಾವತ್ತೂ ಸಹ ಮರೆಯಬಾರದು ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಚಿನ್ನದ ಪದಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಿ ಆರ್ ಸಿ ವೆಂಕಟೇಶಪ್ಪ, ಈ ಸಿ ಓ ವೇಣುಗೋಪಾಲ ರೆಡ್ಡಿ, ಎಡಿಎಂಎಂ ಶಂಕರಪ್ಪ, ನವೋದಯ ಕಲಾಸಂಘದ ಪದಾಧಿಕಾರಿಗಳಾದ ಕಾರ ನಾಗಪ್ಪ, ಈರಣ್ಣ, ಆರ್ ಸಿ ರಾಮಚಂದ್ರಪ್ಪ, ಗಣೇಶ್ ನಾಯಕ, ಬೊಮ್ಮಣ್ಣ ಪಾತಣ್ಣ ಗೋವಿಂದಪ್ಪ, ಸತ್ಯನಾರಾಯಣ ದೊಡ್ಡಯ್ಯ, ಅಶೋಕ್ ಕುಮಾರ್ ನೀಲ ನಾಗರಾಜ್ ಹನುಮಂತ್ ರಾಯ, ಟಿ ಎಚ್ ಹನುಮಂತ ರಾಯ , ಗ್ರಾಮಾಂತರ ವೃತ್ತ ನಿರೀಕ್ಷಕ ಟಿ ಗಿರೀಶ್, ಶಿಕ್ಷಕರಾದ ಮಾರುತೇಶ್, ಯತಿ ಕುಮಾರ್ ಮುಂತಾದ ಶಿಕ್ಷಕ ವರ್ಗದವರು ಹಾಜರಿದ್ದರು.

ವರದಿ. ಶ್ರೀನಿವಾಸಲು. A