IMG 20240822 WA0000

ಪಾವಗಡ: ತಾಲ್ಲೂಕು ಮಟ್ಟದ ಕ್ರಿಡಾಕೂಟಕ್ಕೆ ಶಾಲೆಗಳ ಆಯ್ಕೆ

DISTRICT NEWS ತುಮಕೂರು

ಕ್ರೀಡಾಕೂಟ: ತಾಲ್ಲೂಕು ಮಟ್ಟಕ್ಕೆ ಶಾಲೆಗಳ ಆಯ್ಕೆ

ಪಾವಗಡ : ಪಟ್ಟಣದ ಗುರುಭವನದ ಮೈದಾನದ ಬಳಿ ಬುಧವಾರ ಹಿರಿಯ ಪ್ರಾರ್ಥಮಿಕ ಶಾಲೆಗಳ ಕಸಬಾ ಗ್ರಾಮಾಂತರ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಯಿತು.

ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಬಾಲಕ ಮತ್ತು ಬಾಲಕಿಯರ ಕೋಕೋ ಕ್ರೀಡೆಯಲ್ಲಿ ಎಚ್‌.ಪಿ.ಎಸ್ ವಿರ್ಲಗೊಂದಿ ಶಾಲೆ, ಬಾಲಕರ ಕಬಡಿಯಲ್ಲಿ ಎಚ್ ಪಿ ಎಸ್ ಬಾಲಮ್ಮನಹಳ್ಳಿ ಶಾಲೆ, ಬಾಲಕಿಯರ ಕಬಡಿಯಲ್ಲಿ ಕ್ರೀಡಾಕೂಟದಲ್ಲಿ ಎಚ್‌ಪಿಎಸ್ ರೋಪ್ಪ ಶಾಲೆ,
ಥ್ರೊಬಲ್ ಕ್ರೀಡೆಯಲ್ಲಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಎಚ್ ಪಿ ಎಸ್ ಕೊಡಮೋಡಗು ಶಾಲೆ,
ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಬಾಲಕರ ಮತ್ತು ಬಾಲಕರ ವಿಭಾಗದಲ್ಲಿ ಎಚ್‌ಪಿಎಸ್ ಶ್ರೀ ಸಾಯಿಲಲಿತ ವಿದ್ಯಾ ಕೇಂದ್ರ ಶಾಲೆ, ಶಟಲ್ ಕ್ರೀಡೆಯಲ್ಲಿ ಬಾಲಕರ ವಿಭಾಗದಲ್ಲಿ ಹೆಚ್ ಪಿ ಎಸ್ ಸಾಯಿಲತಾ ವಿದ್ಯಾ ಕೇಂದ್ರ ಶಾಲೆ, ಶಟಲ್ ಕ್ರೀಡೆಯಲ್ಲಿ ಬಾಲಕಿಯರ ವಿಭಾಗದಲ್ಲಿ ಎಚ್ ಪಿ ಎಸ್ ರೋಪ್ಪ ಶಾಲೆಗಳು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಜಯಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಪಿಇ ಒ ಬಸವರಾಜ್, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ಕೆಂಚಪ್ಪ, ಕರ್ನಾಟಕ ರಾಜ್ಯ ಪ್ರಾರ್ಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ನಾಗೇಂದ್ರ, ಕೃಷ್ಣಪ್ಪ, ಮಾಲತೀಸ್, ಮಾಲತಿ, ಲಕ್ಷ್ಮೀನಾರಾಯಣ ಮುಂತಾದವರು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆ ತಿಳಿಸಿದರು.

ವರದಿ. ಶ್ರೀನಿವಾಸಲು. A