IMG 20220802 WA0087

ಪಾವಗಡ:ನಿರಂತರ ಮಳೆ, ಬೆಳೆ ಹಾನಿ….!    

DISTRICT NEWS ತುಮಕೂರು

ನಿರಂತರ ಮಳೆ, ಬೆಳೆ ಹಾನಿ..                                   ಪಾವಗಡ..  ತಾಲೂಕಿನಾದ್ಯಂತ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ, ಕೆರೆಕಟ್ಟೆಗಳು ತುಂಬಿ ಹರಿದ ಪರಿಣಾಮ. ರೈತರು ಬೆಳೆದಿರುವ ಹತ್ತಿ, ಮೆಕ್ಕೆಜೋಳ, ರಾಗಿ, ಶೇಂಗಾ ಇತರೆ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು, ರೈತರು ಕಂಗಲಾಗಿದ್ದಾರೆ.   

  ತಾಲೂಕಿನ ವಿರಪ ಸಮುದ್ರ ಪಂಚಾಯಿತಿ, ದೋಮ್ಮತಮರಿ ಪಂಚಾಯಿತಿ, ವೆಂಕಟಾಪುರ ಪಂಚಾಯಿತಿ, ಕನ್ನಮೇಡಿ ಪಂಚಾಯಿತಿ, ಬ್ಯಾಡನೂರು ಪಂಚಾಯಿತಿ, ಗೌಡೇಟಿ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರು ಬೆಳೆದ  ಹತ್ತಿ, ಮೆಕ್ಕೆಜೋಳ, ಶೇಂಗಾ , ಟೊಮೊಟೊ ಇತರೆ ಬೆಳೆಗಳು ಸೇರಿ ಸುಮಾರು 25 ರಿಂದ 38 ಹೆಕ್ಕೇರ್ ಕೃಷಿ ಭೂಮಿ ಮಳೆಯಿಂದಾಗಿ ಬೆಳೆಗಳು ಸಂಪೂರ್ಣವಾಗಿ ಹಾಳಾಗಿದೆ ಎಂದು, ಸ್ಥಳಕ್ಕೆ ಭೇಟಿ ನೀಡಿ ಸ್ಥಳ  ಪರಿಶೀಲನೆ ಮಾಡಿದ ಕೃಷಿ ಅಧಿಕಾರಿ ವೇಣು ತಿಳಿಸಿದರು.                                                 ರೈತರಿಗೆ ಮಳೆಯಿಂದಾದ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು, ಶೀಘ್ರವೇ ಸರ್ಕಾರ ರೈತರಿಗೆ ಪರಿಹಾರ ನೀಡಬೇಕೆಂದರು.ವೆಂಕಟಾಪುರದ ರೈತ ಎನ್ ವಿ ಶ್ರೀಧರ್ ಒತ್ತಾಯಿಸಿದರು. 

ವರದಿ :ಶ್ರೀನಿವಾಸಲು ಎ