IMG 20220802 WA0065

ಮಧುಗಿರಿ:75ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆ

DISTRICT NEWS ತುಮಕೂರು

ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆ….,

ಮಧುಗಿರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ಉಪ ವಿಭಾಗ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ 15.08.2022 ರಂದು ನಡೆಯುವ75ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆಯ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಉಪ ವಿಭಾಗ ಅಧಿಕಾರಿಗಳಾದ ಸೋಮಪ್ಪ ಕಡಕೋಳ ರವರು 75ನೇ ಭಾರತ ಸ್ವತಂತ್ರೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಬೇಕು ವಿಶೇಷವಾಗಿ ಆಗಸ್ಟ್ 13 ರಿಂದ 15ರ ವರೆಗೆ ಮೂರು ದಿನಗಳ ಕಾಲ ಹರಘರಹರಫಿರಂಗ ಕಾರ್ಯಕ್ರಮವನ್ನು ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕಚೇರಿ ಕಟ್ಟಡಗಳ ಮೇಲೆ ಮನೆಗಳ ಮೇಲೆ ಗ್ರಾಮ ಪಂಚಾಯಿತಿ ಕಟ್ಟಡಗಳ ಮೇಲೆ ಬಾವುಟ ಆರಿಸುವ ಕಾರ್ಯಕ್ರಮವನ್ನು ಎಲ್ಲಾ ಗ್ರಾಮ ಪಂಚಾಯಿತಿಗಳು ಪುರಸಭಾ ಅಧಿಕಾರಿಗಳು ಮೂರು ದಿನಗಳ ಕಾಲ ಕಟ್ಟಡಗಳ ಮೇಲೆ ಬಾವುಟ ಆರಿಸಬೇಕು ಯಾವುದೇ ರೀತಿಯಲ್ಲಿ ಬಾವುಟಕ್ಕೆ ಅವಮಾನ ಆಗಬಾರದು ಯಾವುದೇ ಕಾರಣಕ್ಕೂ ಬಾವುಟ ನೆಲಕ್ಕೆ ಮುಟ್ಟಬಾರದು ಮಳೆಯಲ್ಲಿ ನೆನೆಯಬಾರದು ತುಂಬಾ ಎಚ್ಚರ ವಹಿಸಬೇಕು ಎಂದು ತಿಳಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೋವಿಡ್ ಮೊದಲನೇ ಅಲೆಎರಡನೇಅಲೆಇರುವುದರಿಂದ ಈ ಹಿಂದೆ ಸ್ವತಂತ್ರ ದಿನಾಚರಣೆ ಆಚರಣೆ ಮಾಡಲು ಆಗಿರಲಿಲ್ಲ ಆದರೆ ಈಗ ಯಾವುದೇ ಕೋವಿಡ್ ಇಲ್ಲದೆ ಇರುವ ಕಾರಣ 75ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವನ್ನು ತುಂಬಾ ವಿಜೃಂಭಣೆಯಿಂದ ಮಾಡಬೇಕೆಂದು ತಿಳಿಸಿದರು

IMG 20220802 WA0063
ಅಧಿಕಾರಿಗಳ ಸಭೆ

ತಾಲ್ಲೂಕ್ ಮಟ್ಟದಅಧಿಕಾರಿಗಳು ಕನ್ನಡಪರ ಸಂಘಟನೆಗಳವರು ಮಾಜಿ ಸೈನಿಕರು ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಈಗಾಗಲೇ ಯಾವ್ಯಾವ ಇಲಾಖೆ ಅಧಿಕಾರಿಗಳಿಗೆ ಯಾವ ಯಾವ ಜವಾಬ್ದಾರಿಗಳನ್ನು ವಹಿಸಿದ್ದೇವೆ ಅವುಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗಬೇಕು ಇಲ್ಲದೆ ಇದ್ದರೆ ಅಂತಹವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಲ್ಲರೂ ಉಮ್ಮಸ್ಸಿನಿಂದ ಕಾರ್ಯಕ್ರಮವನ್ನು ನಡೆಸಿಕೊಡಬೇಕು ಯಾರೂ ಕೂಡ ಆ ದಿನದಂದು ಬೇಜವಾಬ್ದಾರಿಯಾಗಿ ಕಾರ್ಯಕ್ರಮಕ್ಕೆ ಹಾಜರಾಗದೆ ರಜಾ ಹಾಕುವುದು ಯಾವುದು ಕೂಡ ಇರುವುದಿಲ್ಲ ಕಡ್ಡಾಯವಾಗಿ 75ನೇ ಸ್ವತಂತ್ರೋತ್ಸವ ಆಚರಣೆ ಕಾರ್ಯಕ್ರಮಕ್ಕೆ ಹಾಜರಾಗಬೇಕು ಎಂದುಆದೇಶಿಸಿದರು ಈ ಪೂರ್ವಭಾವಿ ಸಭೆಗೆ ಯಾರು ಹಾಜರಾಗಿರುವುದಿಲ್ಲ ಅಂತಹವರಿಗೆ ನೋಟಿಸ್ ನೀಡಲಾಗುವುದು ಎಂದು ಸಭೆಗೆ ತಿಳಿಸಿದರು ಪೂರ್ವಭಾವಿ ಸಭೆಯಲ್ಲಿ ತಾಲ್ಲೂಕ್ ತಹಶೀಲ್ದಾರ್ ಟಿಎಸ್ ಸುರೇಶ ಚಾರ್ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಂಜುಂಡಯ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಜರಿದ್ದರು

ವರದಿ. ಲಕ್ಷ್ಮಿಪತಿ ದೊಡ್ಡ ಎಲ್ಕೂರು