ಅಕ್ಷರ ದಾಸೋಹ ಸಿಬ್ಬಂದಿಗೆ ದಿನಸಿ ಕಿಟ್
ವೈ.ಎನ್.ಹೊಸಕೋಟೆ: ಕೋವಿಡ್ ಸಂಕಷ್ಟದಲ್ಲಿರುವ ತಾಲ್ಲೂಕಿನ ಜನತೆಗೆ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮ ಮತ್ತು ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿಬಾಬಾ ಅನ್ನಪೂರ್ಣೇಶ್ವರಿ ಟ್ರಸ್ಟ್ ಗಳು ಮಾಡುತ್ತಿರುವ ನಿಸ್ವಾರ್ಥ ಸೇವೆ ಮೆಚ್ಚುವಂತಹದ್ದು ಎಂದು ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ ತಿಳಿಸಿದ್ದಾರೆ.
ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶುಕ್ರವಾರದಂದು ಶ್ರೀ ರಾಮಕೃಷ್ಣ ಸೇವಾಶ್ರಮ ಮತ್ತು ಶ್ರೀ ಸತ್ಯಸಾಯಿಬಾಬಾ ಶ್ರಿ ಅನ್ನಪೂರ್ಣ ಟ್ರಸ್ಟ್ ನ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವೈ.ಎನ್.ಹೊಸಕೋಟೆ, ದೊಡ್ಡಹಳ್ಳಿ,ಮರಿದಾಸನಹಳ್ಳಿ ಕ್ಲಸ್ಟರ್ ಶಾಲೆಗಳ ಅಕ್ಷರ ದಾಸೋಹ ಅಡಿಗೆ ಸಿಬ್ಬಂದಿಯವರಿಗೆ ದಿನಸಿ ಕಿಟ್ ವಿತರಿಸಿ
ಮಾತನಾಡಿ, ಸಂಕಷ್ಟ ಕಾಲದಲ್ಲಿ ಸಹಾಯ ಮಾಡಲು ಬರುವವರು ದೈವಿ ಸ್ವರೂಪಿ ಗಳಿದ್ದಂತೆ, ಅಡಿಗೆ ಸಿಬ್ಬಂದಿಯ ಸಂಕಷ್ಟವನ್ನು ಗುರುತಿಸಿ ತಾಲೂಕಿನ ಎಲ್ಲಾ ಅಡಿಗೆ ಸಿಬ್ಬಂದಿಗೆ ದಿನಸಿ ಕಿಟ್ ನೀಡಿದ್ದಾರೆ.
ಶ್ರೀ ಸತ್ಯಸಾಯಿಬಾಬಾ ಅನ್ನಪೂರ್ಣ ಟ್ರಸ್ಟ್ ರವರು ಮುಂದಿನ ತಿಂಗಳಿನಿಂದ ಶಾಲಾ ಮಕ್ಕಳಲ್ಲಿ ಪೌಷ್ಠಿಕತೆ ಬೆಳೆಸಿಲು ಹಾರ್ಲಿಕ್ಸ್ ಮಾದರಿಯ ಪೌಡರ್ ನೀಡುತ್ತಾರೆ. ಇಂತಹ ಅವರ ಕಾರ್ಯ ಜಗಮೆಚ್ಚುವಂತಹದ್ದು. ಕೋವಿಡ್ ನಿಂದ ಮುಕ್ತಿ ಪಡೆಯಲು ಪ್ರತಿಯೊಬ್ಬ ಅಡುಗೆ ಸಿಬ್ಬಂದಿಯೂ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಒಟ್ಟು 93 ಅಡುಗೆ ಸಿಬ್ಬಂದಿಗೆ ದಿನಸಿ ಕಿಟ್ ನೀಡಲಾಯಿತು.
ಮುಖ್ಯ ಶಿಕ್ಷಕ ಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಬಸವರಾಜ, ಸಿಆರ್ ಪಿ ಗಳಾದ ಬಂಗಾರಲಿಂಗ, ಚಂದ್ರಶೇಖರ್, ರಂಗಪ್ಪ, ಟ್ರಸ್ಟ್ ನೋಡಲ್ ಅಧಿಕಾರಿ ರಮೇಶ್, ಆಶ್ರಮದ ಸ್ವಯಂಸೇವಕ ಲೋಕೇಶ್ ದೇವರಾಜ್, ಶಿಕ್ಷಕರಾದ ಚೆನ್ನಮಲ್ಲಿಕಾರ್ಜುನ, ಚಂದ್ರಶೇಖರ್ ಮುದ್ರಾಡಿ, ರಾಮಲಿಂಗಪ್ಪ, ನಾಗರಾಜು, ಪ್ರಾಥಮಿಕ ಶಾಲೆಗಳ ಅಕ್ಷರ ದಾಸೋಹ ಸಂಘದ ಅಧ್ಯಕ್ಷ ರತ್ನಮ್ಮ ಹಾಜರಿದ್ದರು.
ವರದಿ: ಸತೀಶ್