ಮಳೆಯ ಅಬ್ಬರ ಮನೆಗಳಿಗೆ ನುಗ್ಗಿದ ನೀರು. ಸ್ಥಳಕ್ಕೆ ಆಗಮಿಸದ ರಾಪ್ಟೆ ಪಂಚಾಯಿತಿಯ ಪಿಡಿಒ ಹನುಮಂತರಾಜು. ಪಾವಗಡ.. ಶನಿವಾರ ಸಂಜೆಯಿಂದ ರಾತ್ರಿಯವರೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ತಾಲೂಕಿನ ಹುಸೇನ್ ಪುರ ಗ್ರಾಮದ ಕೆರೆ ನೀರು ಉಕ್ಕಿ ಹರಿದಿದ್ದರ ಪರಿಣಾಮ ಕೆರೆಯ ಪಕ್ಕದ ಮನೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಮನೆಯಲ್ಲಿರುವ ಅಗತ್ಯ ವಸ್ತುಗಳು, ಪೀಠೋಪಕರಣಗಳು, ಎಲೆಕ್ಟ್ರಾನಿಕ್ ವಸ್ತುಗಳು ಸಂಪೂರ್ಣವಾಗಿ ಹಾಳಾಗಿದ್ದು, ದಿಕ್ಕು ತೋಚದಂತಾಗಿದೆ ಎಂದು ಗ್ರಾಮಸ್ಥರು ಅಳಲನ್ನು ತೋಡಿಕೊಂಡಿದ್ದಾರೆ,
ಪ್ರತಿ ಬಾರಿ ಮಳೆ ಬಂದಾಗ ಇದೇ ಸಮಸ್ಯೆಯನ್ನು ಅನುಭವಿಸಬೇಕಾಗಿದೆ ಎಂದು ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದರು. ಇಂತಹ ಸಂದರ್ಭದಲ್ಲಿ ರಾಪ್ಟೆ ಪಂಚಾಯಿತಿಯ ಪಿಡಿಒ ಗೈರು ಹಾಜರಿದ್ದು, ಪಿಡಿಒ ಹನುಮಂತರಾಜು ರವರಿಗೆ ಎಷ್ಟು ಬಾರಿ ದೂರವಾಣಿ ಕರೆ ಮಾಡಿದರೂ ಪ್ರಯೋಜನವಾಗಿಲ್ಲವೆಂದು, ಅವರು ಮೊಬೈಲನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ, ಮೊದಲ ಸಲ ಮಳೆ ಬಂದಾಗ ಇದೇ ರೀತಿ ಮಾಡಿದ್ದಾರೆಂದು, ಇಂತಹ ಪಿಡಿಓ ತಮ್ಮ ಪಂಚಾಯಿತಿಗೆ ಬೇಡವೆಂದು ರಾಪ್ಟೆ ಗ್ರಾಮ ಪಂಚಾಯಿತಿಯ ಸದಸ್ಯನಾಗರಾಜು ತಿಳಿಸಿರು.
ಸ್ಥಳಕ್ಕೆ ತಹಶೀಲ್ದಾರ್ ವರದರಾಜು ಬೇಟಿ. ಹುಸೇನ್ ರ ಗ್ರಾಮಕ್ಕೆ ನೀರು ನುಗ್ಗಿದ ವಿಷಯ ತಿಳಿದು, ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ವರದರಾಜು, ಮಳೆಯಿಂದಾಗಿ ಮೂರು ಮನೆಗಳು ಸಂಪೂರ್ಣವಾಗಿ ಬಿದ್ದು ಹೋಗಿದ್ದನ್ನು ಪರಿಶೀಲಿಸಿ, ನೀರು ನುಗ್ಗಿದ ಮನೆಗಳಿಗೆ ಭೇಟಿ ನೀಡಿ ಜನರಿಗೆ ಆಗಿರುವ ಸಮಸ್ಯೆಯನ್ನು ಕೇಳಿ ತಿಳಿದು ತಕ್ಷಣ ಪರಿಹಾರ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು. ಮನೆ ಬಿದ್ದು ಹೋಗಿರುವ ಹಾಗೂ ನೀರಿನಿಂದ ಆವೃತಗೊಂಡ ಮನೆಗಳ ಸದಸ್ಯರಿಗೆ ಹುಸೇನ್ ಪುರದ ವೆಂಕಾವಧೂತ ದೇವಸ್ಥಾನ ದಲ್ಲಿ ಪುನರ್ವಸತಿ ಕಲ್ಪಿಸಲಾಗಿದ್ದು, ಸ್ಥಳದಲ್ಲಿ ತಕ್ಷಣ ಪರಿಹಾರ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸ್ಥಳಕ್ಕೆ ತಾಲೂಕು ಪಂಚಾಯಿತಿಯ ಪ್ರಥಮ ದರ್ಜೆ ಸಹಾಯಕ ಗಂಗಾಧರ, ಆರ್ ಐ ರವಿಕುಮಾರ್, ಬಿಲ್ ಕಲೆಕ್ಟರ್ ಶ್ರೀ ರಾಮ್, ,ಗ್ರಾಮ ಪಂಚಾಯತಿಯ ಸದಸ್ಯ ನಾಗರಾಜು ಇತರರು ಹಾಜರಿದ್ದರು .