ಪಾವಗಡ ತಾಲ್ಲೂಕಿನಲ್ಲಿ ಸರ್ಕಾರಿ ಕಛೇರಿ ಗಳಲ್ಲಿ ಕೆಲಸ ಆಗಬೇಕು ಅಂದರೆ ಅಧಿಕಾರ ಗಳ ಜೇಬಿಗೆ ಹಣ ಬಿದ್ದರೆ ಮಾತ್ರ ಕೆಲಸ ಆಗುತ್ತೆ,
ಸರ್ಕಾರ ದ ಉದ್ಯೋಗ ಖಾತ್ರಿ ಯೊಜನೆ ರೈತರು, ಕಾರ್ಮಿಕರ ಅನುಕೂಲಕ್ಕಿಂತ, ಅಧಿಕಾರಿಗಳು, ಗ್ರಾಮಪಂಚಾಯತಿ ಆಸಾಮಿಗಳಿಗೆ ಹಣ ಲೂಟಿ ಮಾಡಲು ಅನಕೂಲವಾಗಿದೆ. ಇನ್ನು ಹಿರಿಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೊ ಇಲ್ಲಾ ಅವರಿಗೂ ಸಂಭಾವನೆ ಸಲ್ಲಿಕೆ ಯಾಗುತ್ತಿದೆಯ….?
ಇದಕ್ಕೆ ಒಂದು ಚಿಕ್ಕ ಉದಾಹರಣೆ ಕೃಷಿ ಇಲಾಖೆಯ ನಡೆದ ಈ ಘಟನೆ…. ಉದ್ಯೋಗ ಖಾತ್ರಿ ಯೊಜನೆಯ ಪ್ರತಿ ಇಲಾಖೆಯಲ್ಲೂ ಇದೇ ಪರಿಸ್ಥಿತಿ ಎನ್ನುತ್ತಾರೆ ಜನ….
ಕೃಷಿ ಇಲಾಖೆ ಕರ್ಮಕಾಂಡ
ಪಾವಗಡದ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ಸೇರಿದಂತೆ ಕೃಷಿ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಮತ್ತು ಲಂಚವಿಲ್ಲದೆ ಕೆಲಸ ಮಾಡಲ್ಲ ಎಂದು ಆರೋಪಿಸಿ ನೊಂದ ಪಲಾನುಭವಿಗಳು ಹಾಗೂ ರೈತರು ಸಹಾಯಕ ಕೃಷಿ ನಿರ್ದೇಶಕಿ ವಿಜಯಮೂರ್ತಿ ಅವರ ವಿರುದ್ದ ಕಿಡಿಕಾರಿದ ಘಟನೆ ಇಂದು ಕೃಷಿ ಇಲಾಖಾ ಆವರಣದಲ್ಲಿ ನಡೆಯಿತು.
ಹೌದು ಪಾವಗಡ ತಾಲ್ಲೂಕಿನ ಕೃಷಿ ಇಲಾಖೆಯ ಅಧಿಕಾರಿಗಳು ಲಂಚದ ಹಣ ಪಡೆದು ಕಡತಗಳಿಗೆ ಸಹಿ ಹಾಕುತ್ತಿರುವ ಘಟನೆಯನ್ನ ನೊಂದ ರೈತ ಫಲಾನುಭವಿಗಳು ಹೊರ ಹಾಕಿದ ಆರೋಪ ಕೇಳಿ ಬಂದಿದೆ. ಮೊದಲೆ ಪಾವಗಡ ಬರಪೀಡಿತ ಪ್ರದೇಶ ನಡುವೆ ಕೃಷಿ ಇಲಾಖಾಧಿಕಾರಿಗಳು ರೈತರು ಹಾಗೂ ಜನ ಸಾಮಾನ್ಯರಿಂದ ಲಂಚ ಪಡೆಯೋ ಪದ್ದತಿ ಮೈಗೂಡಿಸಿಕೊಂಡಿದ್ದಾರೆ ಜೊತೆಗೆ ನಿಡಗಲ್,ಕಸಬಾ ಹೋಬಳಿಯ ಕೃಷಿ ಯೋಜನೆಯ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಇನ್ನು ಕೃಷಿ ಹೊಂಡದ ಕಡತಗಳನ್ನು ಭದ್ರತೆಯಿಲ್ಲದೆ ಎಲ್ಲಂದರಲ್ಲೇ ಹಾಕಿ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವ ಸಾಲು ಸಾಲು ಆರೋಪಗಳನ್ನು ರೈತ ಫಲಾನುಭವಿಗಳು ಹೊರ ಹಾಕಿದರು.
ಅಷ್ಟೇ ಅಲ್ಲದೆ ಎನ್ ಎಮ್ ಆರ್ ಪಡೆಯಲು ಲಂಚ ನೀಡ್ಬೇಕಂತೆ ಇನ್ನು ಜಿಲ್ಲಾ ಪಂಚಾಯಿತಿ ಯಡಿಯಲ್ಲಿ ನೇಮಕವಾಗಿರೋ ಹನುಮಂತರಾಯಪ್ಪನಿಗೂ
ಜಿ ಪಿ ಎಸ್ ಮಾಡಿಕೊಡಲು ಲಂಚ ಕೊಟ್ರೆ ಮಾತ್ರ ಜಿಪಿಎಸ್ ಮಾಡ್ತಾರೆ. ಇಲ್ಲಾಂದ್ರೆ ಎಡಿ ಮೇಡಮ್ ತಂಬಿಡಲ್ಲ ಎಂದು ಅತ್ತ ತಿರುಗಿ ಸಹ ನೋಡಲ್ಲ ಅನ್ನೋದು ಒಂದೆಡೆಯಾದ್ರೆ. ಹಣ ಕಿಸೆಗೆ ತಳ್ಳಿದ್ರೆ ಕೃಷಿ ಹೊಂಡದ ಪೈಲ್ಗಳಲ್ಲಿ ವಿಳಾಸದ ಶ್ರಮಿಕರ ಸಹಿಗಳನ್ನೆ ಪೋರ್ಜರಿ ಮಾಡಿ ಪೈಲ್ ಮೂವ್ ಮಾಡುವ ಪದ್ದತಿ ಪಾವಗಡ ಕೃಷಿ ಇಲಾಖೆಯಲ್ಲಿ ಚಾಲ್ತಿಯಲ್ಲಿದೆ ಅನ್ನುವ ರೈತರ ಅಹವಾಲಿನ ವಿಚಾರಕ್ಕೆ ಸಂಬಂಧಿಸಿದಂತೆ ಸಹಾಯಕ ಕೃಷಿ ನಿರ್ದೇಶಕಿ ವಿಜಯ ಮೂರ್ತಿ ಅವರನ್ನ ಕೇಳಿದ್ರೆ ನನಗೆ ಗೊತ್ತಿಲ್ಲ ಎನ್ನುತ್ತಾರೆ,
ಇಷ್ಟಕ್ಕೂ ಕೃಷಿ ಇಲಾಖೆಯ ಉನ್ನತ ಅಧಿಕಾರಿಯಾಗಿರೊ ಮೇಡಮ್ನವರು ಕಡತಗಳನ್ನು ಚೆಕ್ ಮಾಡದೆ ಅದ್ಹೇಗೆ ಸಹಿ ಹಾಕಿಕೊಟ್ಟರು ಅನ್ನೋ ಪ್ರಶ್ನೆಗೆ ಉನ್ನತಾಧಿಕಾರಿಗಳು ಉತ್ತರ ಹುಡುಕಬೇಕಿದೆ.
ಇದೆಲ್ಲ ಹೈಡ್ರಾಮ ನಡೆದ ಬೆನ್ನೆಲ್ಲೆ ಎಡಿ ಮೇಡಮ್ ನವರು ಅಚಾನಕ್ಕಾಗಿ ನಡೆದುಹೋಯ್ತು ಎಂದು ನುಸುಳಿಕೊಳ್ಳುವ ಕ್ಷಮೆಯಾಚಿಸೋ ಮಾತುಗಳನ್ನಾಡಿದ್ದಾರೆ.
ಪಾವಗಡದ ಕೃಷಿ ಇಲಾಖೆ ಒಂದು ರೀತಿ ಲಂಚದ ಗುಂಡಿಯಂತೆ ಮಾರ್ಪಟ್ಟಿದೆ. ಇನ್ನು ಕಡತಗಳಿಗೆ ಸಹಿ ಮಾಡುವಲ್ಲಿ ವಿಳಂಭವಹಿಸಿ ಅಧಿಕಾರಿಗಳು ಬಂದಿಲ್ಲ , ನಾಳೆ ಬರ್ತಾರೆ ನಾಡಿದ್ದು ಬರ್ತಾರೆ ಎಂದು ರೈತರನ್ನ
ತಿಂಗಳುಗಳ ಕಾಲ ಕೃಷಿ ಇಲಾಖೆಯ ಕಡೆ ನಾಯಿ ಸುತ್ತಿದಂತೆ ಸುತ್ತಿಸಿಕೊಳ್ಳುತ್ತಾರೆ ಎಂದು ನೊಂದ ನಿಡಗಲ್ ಹೋಬಳಿಯ ಜನರು ಗುಡುಗಿದ್ದು ಹೀಗೆ.
ಏನೇ ಇರ್ಲಿ ಜನಸಾಮಾನ್ಯರೇ ಲಂಚ ಪಡೆಯೋದು ಎಷ್ಟು ತಪ್ಪೊ ಲಂಚ ಕೊಡೋದು ಕೂಡ ಅಷ್ಟೇ ತಪ್ಪು ಅನ್ನೋದನ್ನ ಮರೆಯಬಾರದು.
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಇಂತಹ ಅಧಿಕಾರಿಗಳ ಕಾರ್ಯ ವೈಖರಿಯನ್ನ ಪರಿಶೀಲಿಸಿ ಬಡಜನರಿಗೆ ನ್ಯಾಯ ಒದಗಿಸ ಬೇಕು ಜೊತೆಗ. ಭ್ರಷ್ಟಾಚಾರ ದ ವಿರುಧ್ದ ಜನ ಧ್ವನಿ ಎತ್ತಬೇಕು….
ವರದಿ : ನವೀನ್ ಕಿಲಾರ್ಲಹಳ್ಳಿ