IMG 20221014 WA0041

ಪಾವಗಡ:ಸಮಸ್ಯೆಗಳ ಆಗರವಾದ  ರೆಡ್ಡಿ ಕಾಲೋನಿ…!

DISTRICT NEWS ತುಮಕೂರು

ಸಮಸ್ಯೆಗಳ ಆಗರವಾದ  ರೆಡ್ಡಿ ಕಾಲೋನಿ.         

ಪಾವಗಡ:  ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ  ಪಟ್ಟಣದ ಪ್ರಮುಖ ಬಡಾವಣೆಗಳು ಹಲವಾರು ಸಮಸ್ಯೆಗಳ ಆಗರವಾಗಿದೆ.                                ಪುರಸಭೆಯ ಅಧ್ಯಕ್ಷರಾದ ವೇಲು ರಾಜು ಅವರು ಪ್ರತಿನಿಧಿಸುವ  ವಾರ್ಡ್ ನಂಬರ್ 2 ರ ರೆಡ್ಡಿ ಕಾಲೋನಿ ಹಲವಾರು ಸಮಸ್ಯೆಗಳ ಆಗರವಾಗಿದೆ.

 ಕೊಳಚೆ ನೀರಿನಿಂದಾಗಿ ಸೊಳ್ಳೆ, ಹಂದಿಗಳ ಕಾಟ ಹೆಚ್ಚಾಗಿದೆ. ಹೆಚ್ಚಿದ ಸೊಳ್ಳೆಗಳ ಕಾಟದಿಂದಾಗಿ ಕುಟುಂಬ ಸದಸ್ಯರು ಅನಾರೋಗ್ಯಕ್ಕೆ ಈಡಾಗಬೇಕುತ್ತದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.       

ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಬಡಾವಣೇ ನಿವಾಸಿಗಳಿದ್ದಾರೆ. ಹೆಚ್ಚಿನ ಮಳೆಯಿಂದಾಗಿ ಮನೆಗಳ ಪಕ್ಕದ ಖಾಲಿ ಜಾಗದಲ್ಲಿ ಮುಗಿಲೆತ್ತರಕ್ಕೆ ಗಿಡಗಳು ಬೆಳೆದು ಹಂದಿಗಳ ವಾಸಸ್ಥಾನವಾಗಿದೆ .ರಾತ್ರಿ ಪಾಳಿಯಲ್ಲಿ ಕಳ್ಳರು ಬಂದು ಸೇರಿಕೊಂಡರು ಗೊತ್ತಾಗುವುದಿಲ್ಲವೆಂದು.  ರೆಡಿ ಕಾಲೋನಿವಾಸಿಗಳು ದೂರಿದರು.                   

 ತಮ್ಮ ಬಡಾವಣೆಯ ಪ್ರತಿನಿಧಿ ಹಾಗೂ ಪುರಸಭೆಯ ಅಧ್ಯಕ್ಷರು  ಶೀಘ್ರವೇ ವಾರ್ಡ್ ನಂಬರ್ 2ಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದರು.

ವರದಿ: ಶ್ರೀನಿವಾಸಲು ಎ