ಕರ್ನಾಟಕ ದರ್ಶನ ಪ್ರವಾಸಕ್ಕೆ ಚಾಲನೆನೀಡಿದ
ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ.
ಪಾವಗಡ : ಪಟ್ಟದ ಗುರುಭವನ ಮೈದಾನದಲ್ಲಿ 2024-25ನೇ ಸಾಲಿನ ಕರ್ನಾಟಕ ದರ್ಶನ ವಿದ್ಯಾರ್ಥಿಗಳ ಪ್ರವಾಸಕ್ಕೆ ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಐತಿಹಾಸಿಕ ಸ್ಥಳಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಈ ಪ್ರವಾಸ ಅತ್ಯಂತ ಅನುಕೂಲವೆಂದರು.
ಮೂರು ದಿನದ ಪ್ರವಾಸದಲ್ಲಿ ಐತಿಹಾಸಿಕ ಸ್ಥಳಗಳಾದ ಚಿತ್ರದುರ್ಗ, ಟಿ ಬಿ ಡ್ಯಾಮ್, ಐಹೊಳೆ, ಪಟ್ಟದಕಲ್ಲು, ಬಾದಾಮಿ, ಬಿಜಾಪುರ, ಕೂಡಲಸಂಗಮ, ಹಂಪಿ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡುವರೆಂದರು.
ವಿದ್ಯಾರ್ಥಿಗಳು ಪ್ರವಾಸಕ್ಕೆ ಹೋಗುವ ಸ್ಥಳಗಳ ಕುರಿತು ಸಮಗ್ರ ಮಾಹಿತಿ ಪಡೆದು ಇತರರಿಗೆ ತಿಳಿಸುವಂತಾಗಬೇಕು’ ಎಂದರು.
ಪ್ರವಾಸಕ್ಕೆ ತೆರಳುವ ಎಲ್ಲಾ ವಿದ್ಯಾರ್ಥಿಗಳಿಗೂ ಇನ್ಶೂರೆನ್ಸ್ ಮಾಡಿಸಲಾಗಿದ್ದು, ಈ ಮಕ್ಕಳ ಜವಾಬ್ದಾರಿಗೆ ನಾಲ್ಕು ಜನ ಶಿಕ್ಷಕರನ್ನು ಕಳಿಸುತ್ತಿದ್ದೇವೆ ಎಂದರು.
ತಾಲ್ಲೂಕಿನ ಎಂಟನೇ ತರಗತಿ ಮತ್ತು 9ನೇ ತರಗತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಟ್ಟು96 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.ಇದರಲ್ಲಿ ಪರಿಶಿಷ್ಟ ಜಾತಿ 54 ವಿದ್ಯಾರ್ಥಿಗಳು ಪರಿಶಿಷ್ಟ ಪಂಗಡ 42 ವಿದ್ಯಾರ್ಥಿಗಳು ಇದ್ದು ಈ ವಿದ್ಯಾರ್ಥಿಗಳ ಜವಾಬ್ದಾರಿಯನ್ನು ನಾಲ್ಕು ಜನ ಶಿಕ್ಷಕರು ನೋಡಿಕೋಳ್ಳಲಿದ್ದಾರೆ. ಎಂದರು.
ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ರೀತಿಯ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಮೂರು ದಿನದ ಪ್ರವಾಸ ಮಗಿದ ನಂತರ ಮತ್ತೆ ಗುರು ಭವನ ಪಕ್ಕದ ಮೈದಾನದೊಳಕ್ಕೆ ಪೋಷಕರನ್ನು ಕರೆಯಿಸಿ ಅವರ ಜವಾಬ್ದಾರಿಗೆ ಮಕ್ಕಳನ್ನು ಒಪ್ಪಿಸುತ್ತೇವೆ ಎಂದು ತಿಳಿಸಿದರು,
ಬಿ ಆರ್ ಸಿ ವೆಂಕಟೇಶ್ ಮಾತನಾಡಿ.
ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸರ್ಕಾರ ಪ್ರವಾಸಕ್ಕೆ ಅಗತ್ಯವಾದ ಬ್ಯಾಗು ಮತ್ತು ಟೀ ಶರ್ಟ್ ಗಳನ್ನು ನೀಡಿದೆ ಎಂದರು.
ಹಣ ವ್ಯಯಿಸಿ ಮಕ್ಕಳನ್ನು ಪ್ರವಾಸಕ್ಕೆ ಕಳುಹಿಸಲು ಸಾಧ್ಯವಾಗದ ಪೋಷಕರಿಗೆ ಸರ್ಕಾರದ ಈ ಕಾರ್ಯಕ್ರಮದ ವಿದ್ಯಾರ್ಥಿಗಳಿಗೆ ಉಚಿತ ಪ್ರವಾಸ ಭಾಗ್ಯ ಒದಗಿಸಿದೆ ಎಂದರು.
ಈ ಸಂದರ್ಭದಲ್ಲಿ ಇ ಸಿ ಓ ಗಳಾದ ಖಾಜಾ ಹುಸೇನ್,ಚಂದ್ರಶೇಖರ್, ವೇಣುಗೋಪಾಲ ರೆಡ್ಡಿ, ನಟರಾಜ್, ಶಿಕ್ಷಕ ಯತಿ ಕುಮಾರ್ ಹಾಜರಿದ್ದರು.
ವರದಿ : ಶ್ರೀನಿವಾಸಲು .ಎ