ಹೆಣ್ಣುಮಕ್ಕಳ ಪಾಲಿನ ಅಕ್ಷರದವ್ವ . ಸಾವಿತ್ರಿಬಾಯಿ ಪುಲೆ. ಶಾಸಕ ಹೆಚ್ ವಿ ವೆಂಕಟೇಶ್.
ಪಾವಗಡ : ಮಹಿಳೆಯರು ಎಲ್ಲಾ ರಂಗಗಳಲ್ಲಿಯೂ ಪಾತ್ರವನ್ನು ಪೋಷಿಸಿ ಮಹಿಳೆ ಅಬಲೆ ಯಲ್ಲ ಸಬಲೆ ಎಂಬುದನ್ನು ನಿರೂಪಿಸಿದ್ದಾರೆಂದು ಶಾಸಕ ಹೆಚ್ ವಿ ವೆಂಕಟೇಶ್ ತಿಳಿಸಿರು
ಪಟ್ಟಣದ ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಸಾವಿತ್ರಿಬಾಯಿ ಪುಲೆ ಅವರ ಜನ್ಮದಿನಾಚರಣೆ ಹಾಗೂ ಶೈಕ್ಷಣಿಕ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾವಿತ್ರಿಬಾಯಿ ಫುಲೆ ನಮ್ಮ ದೇಶದ ಪ್ರಥಮ ಶಿಕ್ಷಕಿ, ಆಕೆಯ ಆದರ್ಶಗಳನ್ನು ಎಲ್ಲಾ ಶಿಕ್ಷಕಿಯರು ಪಾಲಿಸಬೇಕೆoದರು.
ಶಿಕ್ಷಕಿಯರಿಗೆ ತನ್ನದೇ ಆದ ಗುರುತರ ಜವಾಬ್ದಾರಿ ಇರುತ್ತದೆ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ ಎಲ್ಲಾ ರಂಗಗಳಲ್ಲೂ ಹೆಣ್ಣು ಮಕ್ಕಳು ಮುಂದೆ ಬರುವಂತೆ ಪ್ರೋತ್ಸಾಹಿಸಬೇಕು ಎಂದರು.
ಹೆಣ್ಣು ಮಕ್ಕಳಿಗಾಗಿ ವಿಶೇಷ ಒತ್ತನ್ನು ನೀಡಿರುವ ಸಿದ್ದರಾಮಯ್ಯ ಸರ್ಕಾರ ಹೆಣ್ಣು ಮಕ್ಕಳ ಪಾಲಿಗೆ ಉಚಿತ ಯೋಜನೆಗಳನ್ನು ಜಾರಿಗೆಗೊಳಿಸಿ ಮಹಿಳೆಯರ ಅಭಿವೃದ್ಧಿಗೆ ಹೆಚ್ಚಿನ ಮನ್ನಣೆ ನೀಡಿದೆ ಎಂದರು.
ಎಲ್ಲಾ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯತಿಗಳಲ್ಲಿ ಸರ್ಕಾರ ಮಹಿಳೆಯರಿಗೆ ಮೀಸಲಾತಿ ಒದಗಿಸಿದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷರಾದ ಡಾ. ಲತಾ ಎಸ್ ಮಳ್ಳೂರ ಮಾತನಾಡಿ.
ರಾಜ್ಯದಾದ್ಯಂತ ಮಹಿಳಾ ಶಿಕ್ಷಕರಿಗಾಗಿ ಸಂಘ ಸ್ಥಾಪಿಸುವಾಗ ಯಾವ ಹೆಸರು ಸೂಕ್ತ ಎಂಬುದರ ಬಗ್ಗೆ ಚರ್ಚೆಯಾದಾಗ ಮಹಿಳೆಯರ ಶಿಕ್ಷಣಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿ ಜ್ಯೋತಿ ಬಾಪುಲೆ ಎಂಬುದನ್ನು ಒಮ್ಮತದಿಂದ ಅರಿತು ಸಂಘಕ್ಕೆ ಸಾವಿತ್ರಿಬಾಯಿ ಫುಲೆ ಎಂಬ ಹೆಸರಿಡಲಾಯಿತು ಎಂದರು.
ಅನಾದಿಕಾಲದಿಂದಲೂ ಹೆಣ್ಣು ಸ್ಥಿತಿ ಅದೋಗತಿಯಾಗಿದ್ದು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಹೆಚ್ಚಿನ ಶ್ರಮವಹಿಸಿದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಎಂದರು.
ಹೆಣ್ಣು ಮಕ್ಕಳೆಲ್ಲರನ್ನು ಒಂದೇ ವೇದಿಕೆಯ ಮೇಲೆ ತರಲು ಈ ಸಂಘ ಶ್ರಮಿಸಿದೆ ಎಂದರು.
ಸಾವಿತ್ರಿಬಾಯಿ ಪುಲೆ ಸಂಘಟನೆ ಎಲ್ಲಾ ಮಹಿಳೆಯರ ಒಕ್ಕೂರಲು ದ್ವನಿ ಎಂದರು.
ಸಾವಿತ್ರಿಬಾಯಿ ಫುಲೆಯ ಜನ್ಮದಿನಾಚರಣೆಯನ್ನು ಎಲ್ಲಾ ಶಾಲಾ ಕಾಲೇಜುಗಳಲ್ಲಿಯೂ ಆಚರಿಸಲು ಸರ್ಕಾರ ಗಮನಹರಿಸಬೇಕು ಎಂದರು.
ಭಾರತ ದೇಶದ ಹೆಣ್ಣು ಮಕ್ಕಳಿಗೆ ದೊರೆಯುವ ಅವಕಾಶಗಳು ಇತರ ಯಾವ ಯಾವುದೇ ದೇಶಗಳಲ್ಲಿ ದೊರೆಯುವುದಿಲ್ಲ ಎಂದರು.
ಹೆಣ್ಣು ಮಕ್ಕಳು ತಮ್ಮಗಿರುಗ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮುನ್ನುಗಬೇಕು ಎಂದರು.
ಎಲ್ಲಾ ಸಂಘ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಚಿತ್ರನಟಿ ವಿನಯ ಪ್ರಸಾದ್ ಮಾತನಾಡಿ.
ತಾನು ಪಾವಗಡಕ್ಕೆ ಮೊದಲನೇ ಬಾರಿಗೆ ಬಂದು ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದ ಆಚರಣೆ ಮತ್ತು ಶೈಕ್ಷಣಿಕ ಕಾರ್ಯಗಾರಕ್ಕೆ ಆಗಮಿಸಿರುವುದು ತನಗೆ ಸಂತೋಷ ನೀಡಿದೆ ಎಂದರು.
ತಾನು ಶಿಕ್ಷಕಿಯಾಗದಿದ್ದರೂ ಸಹ ಹಲವಾರು ಕನ್ನಡ ಚಲನಚಿತ್ರದಲ್ಲಿ ಪ್ರೊಫೆಸರ್ ಆಗಿ, ಪ್ರಾಧ್ಯಾಪಕರಾಗಿ ನಟನೆ ಮಾಡಿರುವುದು ತನಗೆ ಸಂತೋಷ ತಂದಿದೆ ಎಂದರು.
ಹೆಣ್ಣೆಂದರೆ ಶಕ್ತಿ ಸ್ವರೂಪಿಣಿ, ಅಂತಹ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನೀಡಲು ಸಾವಿತ್ರಿಬಾಯಿ ಫುಲೆ ಅವರು ಕಷ್ಟಪಟ್ಟಿರುವುದನ್ನು ನಾವು ಎಂದಿಗೂ ಸಹ ಮರೆಯಬಾರದು ಎಂದರು.
ಅಕ್ಷರ ಮತ್ತು ಬುದ್ಧಿವಂತಿಕೆ ಜೀವನದಲ್ಲಿ ಯಾವ ರೀತಿ ಬಳಕೆಯಾಗುತ್ತದೆ ಎಂಬುದನ್ನು ತಿಳಿಸಿದರು.
ನಾವು ಯಾವುದೇ ರೀತಿಯನ್ನು ಮಾಡುತ್ತಿರಬಹುದು, ಮೊದಲು ನಾವು ಮನುಷ್ಯರು ಎಂಬುದನ್ನು ಮರೆಯಬಾರದು ಎಂದರು.
ನನಗೆ ಶಿಕ್ಷಣ ನೀಡಿದ ಶಿಕ್ಷಕರನ್ನು ಇಂದಿಗೂ ಸಹ ನೆನಪಿಸಿಕೊಳ್ಳುತ್ತೇನೆ ಎಂದರು.
ಶಿಕ್ಷಣದಲ್ಲಿ ಪಠ್ಯಯೇತರ ಚಟುವಟಿಕೆಗಳ ಬಗ್ಗೆ ಶಿಕ್ಷಕರು ಹೆಚ್ಚಿನ ಗಮನ ವಹಿಸಬೇಕು ಎಂದರು.
ಇತಿಹಾಸದಲ್ಲಿ ಬರುವ ಪಠ್ಯವನು ನಾಟಕ,ಕಥೆ, ಅಭಿನಯದ ಮೂಲಕ ಹೊಸ ರೂಪದಲ್ಲಿ ವಿದ್ಯಾರ್ಥಿಗಳಿಗೆ ಕಲಿಸಿದರೆ ಜೀವನಪರ್ಯಂತ ಮರೆಯಲು ಸಾಧ್ಯವಿಲ್ಲ ಎಂದರು.
ಹೆಣ್ಣು ಕೌಟುಂಬಿಕವಾಗಿ, ಸಾಮಾಜಿಕವಾಗಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಮಹಿಳಾ ಶಿಕ್ಷಕಿಯರಿಗೆ ವಾರದಲ್ಲಿ ಒಮ್ಮೆಯಾದರೂ ನೋವನ್ನು ಮರೆಸುವ ನಗೆ ಹವ್ಯಾಸ ಕಾರ್ಯಕ್ರಮ ಸಂಘದ ವತಿಯಿಂದ ಏರ್ಪಡಿಸುವುದು ಸೂಕ್ತ ಎಂದರು.
ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಶಿಕ್ಷಕರನ್ನು ಬಡವರು ಎನ್ನಬಾರದು.
ಇಂತಹ ಶಿಕ್ಷಕರಿಂದ ಜ್ಞಾನ ಸಂಪಾದಿಸಿ ಶ್ರೀಮಂತರಾದವರೇ ಹೆಚ್ಚು ಎಂದರು.
ಶಿಕ್ಷಕರು ಹಣದಲ್ಲಿ ಬಡವರಾಗಿರಬಹುದೇ ಹೊರತು ಜ್ಞಾನದಲ್ಲಿ ಅವರು ಎಂದಿಗೂ ಶ್ರೀಮಂತರೇ ಎಂದರು.
ಮಹಿಳಾ ಶಿಕ್ಷಕಿಯರು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕೆಂದು ಹಾರೈಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಇಂದಿರಾಣಮ್ಮ ಮಾತನಾಡಿ,
ಮಹಿಳಾ ಶಿಕ್ಷಕಿಯರು ಸಾವಿತ್ರಿಬಾಯಿ ಪುಲೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಸಮಾಜದ ಮುಖ್ಯ ವಾಹಿನಿಗೆ ತರುವ ಜವಾಬ್ದಾರಿ ಮಹಿಳಾ ಶಿಕ್ಷಕಿಯರ ಮೇಲಿದೆ ಎಂದರು.
ಸಮಾಜದಲ್ಲಿ ಬಾಲ್ಯ ವಿವಾಹ ದ ತೊಡಕುಗಳ
ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸುವುದು ಅತಿ ಮುಖ್ಯವೆಂದರು
ಹೆಣ್ಣು ಮಕ್ಕಳು ಎಲ್ಲಾ ರಂಗದಲ್ಲಿಯೂ ರಾರಾಜಿಸಬೇಕು , ಯಾವುದೇ ಒಂದು ಹೆಣ್ಣು ಮಗು ಸಹ ಶಿಕ್ಷಣದಿಂದ ವಂಚಿತರಾಗಬಾರದು , ಪುಲೆ ಅವರು ನಮಗೆ ತೋರಿಸಿರುವ ಮಾರ್ಗದರ್ಶನ ನಾವು ಮುನ್ನಡೆಯಬೇಕು ಎಂದರು..
ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವೆಂಕಟೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಶಂಕರಪ್ಪ,
ತಾಲೂಕು ಸಾವಿತ್ರಿಬಾಯಿ ಪುಲೆ ಶಿಕ್ಷಕ ಸಂಘದ ತಾಲೂಕು ಅಧ್ಯಕ್ಷರಾದ ದುರ್ಗಮ್ಮ ಎ.
ಸಾವಿತ್ರಿಬಾಯಿ ಫುಲೆ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶ್ರೀ ಎ, ಸಾವಿತ್ರಿಬಾಯಿ ಫುಲೆ ಸಂಘಟನೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಅನುಸೂಯಾದೇವಿ, ಸಾವಿತ್ರಿಬಾಯಿ ಫುಲೆ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲತಾ ಮಣಿ, ಸಾವಿತ್ರಿಬಾಯಿ ಫುಲೆ ಸಂಘದ ಜಿಲ್ಲಾಧ್ಯಕ್ಷರಾದ ರಾಧಮ್ಮ
ಸಾವಿತ್ರಿಬಾಯಿ ಫುಲೆ ಚಲನಚಿತ್ರ ನಿರ್ಮಾಪಕ ಬಸವರಾಜ ಭೂತಾಳಿ, ಮುಖ್ಯ ಶಿಕ್ಷಕ ಮಾರುತೇಶ್ ತಾಲೂಕು ಸಾವಿತ್ರಿಬಾಯಿ ಸಂಘದ ಎಲ್ಲಾ ಪದಾಧಿಕಾರಿಗಳು, ಬಿ ಓ ಮತ್ತು ಬಿ ಆರ್ ಸಿ ಕಛೇರಿಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
ವರದಿ : ಶ್ರೀನಿವಾಸಲು ಎ