IMG 20230119 WA0118

ಮಧುಗಿರಿ:ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ…..

DISTRICT NEWS ತುಮಕೂರು

ಎಸ್. ಎಸ್. ಎಲ್ .ಸಿ. ಹಾಗೂ ಪಿ.ಯು.ಸಿ.ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ…..

ಮಧುಗಿರಿ. ಕೊಡಿಗೇನಹಳ್ಳಿ ಹೋಬಳಿಯ. ಎ .ಎನ್. ಆರ್ .ಕಲ್ಯಾಣ ಮಂಟಪದಲ್ಲಿ ಕೆ.ಏನ್.ಆರ್. ಹಾಗೂ ಆರ್. ಆರ್. ಅಭಿಮಾನಿಗಳ ಬಳಗದ ವತಿಯಿಂದ ಇಂದು ಎಸ್. ಎಸ್. ಎಲ್. ಸಿ .ಮತ್ತು ಪಿ.ಯು.ಸಿ .ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕೊಂಡು ಮಾತನಾಡಿದ ಕೆ.ಎನ್. ರಾಜಣ್ಣನವರು ವಿದ್ಯಾರ್ಥಿಗಳು ಮುಂದಿನ ಉತ್ತಮ ಭವಿಷ್ಯ ಉನ್ನತ ವಿದ್ಯಾಭ್ಯಾಸದ ಕುರಿತು ಹಲವಾರು ಮಾಹಿತಿ ಮಾರ್ಗದರ್ಶನಗಳನ್ನು ನೀಡಿದರು ವಿದ್ಯೆಯೋ ಸೋಮಾರಿಗಳ ಸ್ವತ್ತಲ್ಲ ವಿದ್ಯೆಯೆಂದು ಕಲಿತರೆ ನಾವು ಎಲ್ಲಿ ಬೇಕಾದರೂ ಜೀವನ ನಡೆಸಬಹುದು ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ತಂದೆಯಾಗಲಿ ನಮ್ಮ ತಾಯಿಯಾಗಲಿ ಯಾರೂ ಕೂಡ ವಿದ್ಯಾವಂತರ ಅಲ್ಲ ಆದರೆ ನಾನು ಅಂತಹ ಕುಟುಂಬದಲ್ಲಿ ಹುಟ್ಟಿ ಉತ್ತಮ ವಿದ್ಯಾಭ್ಯಾಸವನ್ನು ಮಾಡಿ ಕೊಂಡು ಬಂದು ಫಲವಾಗಿ ಇಂತಹ ಸ್ಥಾನಗಳನ್ನು ಅಲಂಕರಿಸಲು ನನಗೆ ಮಾರ್ಗದರ್ಶಕವಾಗಿದೆ ಎಂದು ತಿಳಿಸಿದರು ನಿಮ್ಮ ವಿದ್ಯಾಭ್ಯಾಸದ ಭವಿಷ್ಯಉತ್ತಮವಾಗಿರಲಿ ಎಂದು. ಶುಭ ಹಾರೈಸಿದರು.

IMG 20230119 WA0117

ಮಾರ್ಗದರ್ಶನ ಹಾಗೂ ಪ್ರತಿಭಾ ಪುರಸ್ಕಾರಕಾರ್ಯಕ್ರಮದ ಆಯೋಜಕರಾದ ಕಾಂತರಾಜು .ಚಾಣಕ್ಯರವರಿಗೆ. ಕೊಡಿ ಗೇನಹಳ್ಳಿ ಹೋಬಳಿಯ ಎಲ್ಲಾ ವಿ.ಎಸ್.ಎಸ್ ಎನ್ ಕಾರ್ಯದರ್ಶಿಗಳಿಗೂ ಕೂಡ ಅಭಿನಂದನೆಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಎಸ್. ಎಸ್. ಎಲ್. ಸಿ. ಹಾಗೂ ಪಿ.ಯು.ಸಿ.ತೇರ್ಗಡೆ ಹೊಂದಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರನ್ನು ಅಭಿನಂದಿಸಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಸರ್ವೋದಯ ಕಾಲೇಜಿನ ಪ್ರಾಂಶುಪಾಲರ ಕೆ .ವಿ. ಸತ್ಯನಾರಾಯಣ್ ಸರ್ಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷರಾದ ಎನ್ .ಮಹಾಲಿಂಗೇಶ್. ಉಪನ್ಯಾಸಕರಾದ ರಾಮಚಂದ್ರಪ್ಪ. ಮುಖ್ಯ ಶಿಕ್ಷಕರಾದ ಸದಾಶಿವ ರೆಡ್ಡಿ. ರೇಣುಕಪ್ಪ. ಪ್ರಕಾಶ್. ಶಿವಾನಂದ ರೆಡ್ಡಿ. ರಂಗಧಾಮಯ್ಯ. ಪ್ರಾಂಶುಪಾಲರಾದ ರಂಗಪ್ಪ. ಎಂ ಜೆ ಶಿವಣ್ಣ. ಬಾಲಕೃಷ್ಣ. ಮಂಜುನಾಥ್. ಕೆ.ಪಿ.ಸಿ.ಸಿ.ಯ ಸದಸ್ಯರಾದ ಎಂ.ಎಸ್. ಮಲ್ಲಿಕಾರ್ಜುನಯ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ಗೋಪಾಲಯ್ಯ ಹಾಗೂ ಶಿಕ್ಷಕರುಗಳು ಕೆ.ಎನ್.ಆರ್. ಅಭಿಮಾನಿಗಳು ಹಾಗೂ ಆರ್. ಆರ್. ಅಭಿಮಾನಿಗಳು ಶಿಕ್ಷಕರುಗಳು ಮತ್ತಿತರರು ಹಾಜರಿದ್ದರು.

ವರದಿ. ಲಕ್ಷ್ಮಿಪತಿ ದೊಡ್ಡ ಯ ಲ್ಕೂರು