ತುಮಕೂರು ಒಂದೇ ದಿನ 15 ಜನಕ್ಕೆ ಸೋಂಕು.
ಸೋಂಕಿತರ ಮೂಲವೇ ತಿಳಿದಿಲ್ಲ.
ಪಾವಗಡಕ್ಕೂ ವಕ್ಕರಸಿದ ಕೊರೋನಾ.
ತುಮಕೂರು : ರಾಜ್ಯಾದ್ಯಂತ ಕೊರೋನಾ ಸೋಂಕು ದಿನ ದಿಂದ ದಿನ ಹೆಚ್ಚುತ್ತಲೆ ಇದೆ. ಜಿಲ್ಲೆಯಲ್ಲಿ 11005 ಜನ ಕ್ಕೆ ಸೋಂಕು ಇಲ್ಲಿಯ ವರೆಗು ವ್ಯಾಪಿಸಿದ್ದರೆ, 180 ಜನ ಸಾವನ್ನಪ್ಪಿದ್ದಾರೆ. 6,918 ಮಂದಿ ಚೇತರಿಸಿಕೊಂಡಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 15 ಜನರಿಗೆ ಸೋಂಕು ತಗುಲಿದೆ.ಇದರಿಂದ 73 ಕ್ಕೆ ಏರಿದೆ ಸೋಂಕಿತರ ಸಂಖ್ಯೆ.
ಆತಂತದಲ್ಲಿ ಪಾವಗಡ
ಪಾವಗಡ ತಾಲ್ಲೂಕಿನಲ್ಲಿ 4 ಜನರಿಗೆ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.
ಸೋಂಕಿನ ಮೂಲವೇ ಇಲ್ಲ
ಪಾವಗಡ ತಾಲ್ಲೂಕಿನ (1)55 ವರ್ಷ ದ ವ್ಯಕ್ತಿ, DMK.67, (2) 29 ವರ್ಷ ದ ವ್ಯಕ್ತಿ TMK 69, (3) 45 ವರ್ಷದ ವ್ಯಕ್ತಿ TMK 70, (4) ಪಾವಗಡ ತಾಲ್ಲೂಕಿನ ಕಣಿವೇನ ಹಳ್ಳಿಯ 40 ವರ್ಷದ ವ್ಯಕ್ಕಿಗೆ ಸೋಂಕು ತಗುಲಿದ್ದು TMK 66 ಎಂದು ಗುರುತಿಸಲಾಗಿದೆ.
ಪಾವಗಡ ತಾಲೂಕಿನ ಈ ಸೋಂಕಿತರ ಮೂಲ ತಿಳಿದುಬಂದಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿರುವುದು ಆತಂಕ ಮೂಡಿಸಿದೆ.
ಪಾವಗಡ ತಾಲ್ಲೂಕಿನ ಬಹಳಷ್ಟು ಭಾಗದಲ್ಲಿ ಕೊರೋನಾ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನ ಮರೆತಿದ್ದಾರೆ. ಮಾಸ್ಕ್ ಇಲ್ಲ, ಇನ್ನು ಸಾಮಾಜಿಕ ಅಂತರ ಕನಸಿನ ಮಾತಾಗಿದೆ. ಇನ್ನು ಮುಂದೆ ಯಾದರು, ಸಾಮಾಜಿಕ ಅಂತರ , ಮಾಸ್ಕ, ವಿನಾಕಾರಣ ಓಡಾಟ ನಿಲ್ಲಿಸಿ ಕೊರೋನಾ ಹರಡದಂತೆ ಎಚ್ಚರಿಕೆ ವಹಿಸಬೇಕಿದೆ ಪಾವಗಡ ಮಂದಿ.