3865b645 be17 450a b340 792286f5a483 768x432 1

ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ ಘಟಿಕೋತ್ಸವ : ಮೋದಿ ಮಾತು

DISTRICT NEWS

ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ ಘಟಿಕೋತ್ಸವ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೈಸೂರುವಿಶ್ವವಿದ್ಯಾಲಯದ ಶತಮಾನೋತ್ಸವ ಘಟಿಕೋತ್ಸವ2020ನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಮೈಸೂರು ವಿಶ್ವವಿದ್ಯಾಲಯ ಪ್ರಾಚೀನ ಭಾರತದ ಶ್ರೇಷ್ಠಶಿಕ್ಷಣ ವ್ಯವಸ್ಥೆ ಮತ್ತು ಭವಿಷ್ಯದ ಭಾರತದ ಆಶೋತ್ತರಗಳುಮತ್ತು ಸಾಮರ್ಥ್ಯದ ಕೇಂದ್ರವಾಗಿದೆ ಹಾಗೂ ರಾಜರ್ಷಿನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಎಂ. ವಿಶ್ವೇಶ್ವರಯ್ಯನವರ ಸಂಕಲ್ಪವನ್ನು ಸಾಕಾರಗೊಳಿಸಿದೆಎಂದರು

IMG 20201019 210827.

ಭಾರತರತ್ನ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರಂಥವಿದ್ವಾಂಸರು ಈ ವಿಶ್ವವಿದ್ಯಾಲಯದಲ್ಲಿ ಬೋಧನೆಮಾಡಿದ್ದಾರೆ ಎಂದರು.

ಕಲಿತ ವಿದ್ಯೆಯನ್ನು ತಮ್ಮ ನಿಜ ಬದುಕಿನ ವಿವಿಧಹಂತಗಳಲ್ಲಿ ಸಮರ್ಥವಾಗಿ ಬಳಸುವಂತೆ ಅವರು ಕರೆನೀಡಿದರು. ನೈಜ ಜೀವನ ಒಂದು ಶ್ರೇಷ್ಠ ವಿಶ್ವವಿದ್ಯಾಲಯಎಂದು ಬಣ್ಣಿಸಿದ ಅವರು, ಅದು ಜ್ಞಾನವನ್ನು ಬಳಸುವಅನೇಕ ಮಾರ್ಗಗಳನ್ನು ತೋರಿಸುತ್ತದೆ ಎಂದರು.

ಪ್ರಧಾನಮಂತ್ರಿಯವರು ಕನ್ನಡದ ಹೆಸರಾಂತ ಚಿಂತಕ, ಲೇಖಕ ಗೊರೊರು ರಾಮಸ್ವಾಮಿ ಅಯ್ಯಂಗಾರ್ ಅವರ‘ಶಿಕ್ಷಣವೇ ಜೀವನದ  ಬೆಳಕು’ ಎಂಬ ಹೇಳಿಕೆಉಲ್ಲೇಖಿಸಿದರು.

21ನೇ ಶತಮಾನದ ಅಗತ್ಯಗಳಿಗೆ ಅನುಗುಣವಾಗಿಭಾರತದ ಶಿಕ್ಷಣ ವ್ಯವಸ್ಥೆಯ ಪರಿವರ್ತನೆಯ ಪ್ರಯತ್ನಗಳುನಿರಂತರವಾಗಿ ನಡೆಯುತ್ತಿವೆ ಎಂದ ಅವರು, ಮೂಲಸೌಕರ್ಯ ಸೃಷ್ಟಿ ಮತ್ತು ವಿನ್ಯಾಸಿತಸುಧಾರಣೆಗಳಿಗೆ ವಿಶೇಷ ಗಮನ ಹರಿಸಲಾಗಿದೆ ಎಂದುತಿಳಿಸಿದರು. ಭಾರತವನ್ನು ಒಂದು ಉನ್ನತ ಶಿಕ್ಷಣತಾಣವಾಗಿ ಮಾಡಲು ಮತ್ತು ನಮ್ಮ ಯುವಜನರನ್ನುಸ್ಪರ್ಧಾತ್ಮಕಗೊಳಿಸಲು ಗುಣಾತ್ಮಕವಾಗಿ ಮತ್ತುಪ್ರಮಾಣಾತ್ಮಕ ಪ್ರಯತ್ನ ಸಾಗಿದೆ ಎಂದರು.

ಸ್ವಾತಂತ್ರ್ಯ ಬಂದು ಹಲವು ವರ್ಷಗಳ ಬಳಿಕವೂ2014ರವರೆಗೆ ದೇಶದಲ್ಲಿ 16 ಐಐಟಿಗಳು ಮಾತ್ರ ಇದ್ದವು. ಕಳೆದ 6 ವರ್ಷಗಳಲ್ಲಿ ಪ್ರತಿ ವರ್ಷಕ್ಕೆ ಒಂದರಂತೆ ಹೊಸಐಐಟಿ ಸ್ಥಾಪಿಸಲಾಗಿದೆ. ಇದರಲ್ಲಿ ಒಂದು ಕರ್ನಾಟಕದಧಾರವಾಡದಲ್ಲೂ ಇದೆ ಎಂದರು. 2014ರವರೆಗೆ ಕೇವಲ 9ಐಐಐಟಿಗಳು, 13 ಐಐಎಂಗಳು ಮತ್ತು 7 ಏಮ್ಸ್ದೇಶದಲ್ಲಿತ್ತು. ನಂತರದ 5 ವರ್ಷಗಳಲ್ಲಿ ದೇಶದಲ್ಲಿ 16ಐಐಐಟಿಗಳು, 7 ಐಐಎಂಗಳು ಮತ್ತು 8 ಏಮ್ಸ್ ಗಳುಸ್ಥಾಪನೆಯಾಗಿವೆ ಇಲ್ಲವೇ ಸ್ಥಾಪನೆ ಪ್ರಕ್ರಿಯೆ ಪ್ರಗತಿಯಲ್ಲಿದೆಎಂದರು.

IMG 20201019 210959

ಉನ್ನತ ಶಿಕ್ಷಣದಲ್ಲಿನ ಪ್ರಯತ್ನಗಳು ಕಳೆದ 5-6ವರ್ಷಗಳಲ್ಲಿ ಕೇವಲ ಹೊಸ ಸಂಸ್ಥೆ ಸ್ಥಾಪಿಸುವುದಕ್ಕಷ್ಟೇಸೀಮಿತವಾಗಿಲ್ಲ, ಜೊತೆಗೆ ಲಿಂಗ ಸಮಾನತೆ ಮತ್ತುಸಾಮಾಜಿಕ ಒಳಗೊಳ್ಳುವಿಕೆಯ ಖಾತ್ರಿಗಾಗಿ ಆಡಳಿತಸುಧಾರಣೆಯೂ ಈ ಸಂಸ್ಥೆಗಳಲ್ಲಿ ನಡೆದಿದೆ. ಈಸಂಸ್ಥೆಗಳಿಗೆ ಹೆಚ್ಚಿನ ಸ್ವಾಯತ್ತತೆಯನ್ನೂ ನೀಡಲಾಗಿದ್ದು, ಅವರು ತಮ್ಮ ಅಗತ್ಯಗಳಿಗೆ ತಕ್ಕಂತೆ ನಿರ್ಣಯಕೈಗೊಳ್ಳಬಹುದಾಗಿದೆ ಎಂದರು.

ಪ್ರಥಮ ಐಐಎಂ ಕಾಯ್ದೆ ದೇಶಾದ್ಯಂತದ ಐಐಎಂಗಳಿಗೆಹೆಚ್ಚಿನ ಅಧಿಕಾರ ನೀಡಿದೆ ಎಂದು ತಿಳಿಸಿದರು. ವೈದ್ಯಕೀಯಶಿಕ್ಷಣದಲ್ಲಿ ಪಾರದರ್ಶಕತೆ ತರಲು ರಾಷ್ಟ್ರೀಯ ವೈದ್ಯಕೀಯಆಯೋಗ ಸ್ಥಾಪನೆ ಮಾಡಲಾಗಿದೆ. ಹೋಮಿಯೋಪತಿಮತ್ತು ಭಾರತೀಯ ವೈದ್ಯ ಪದ್ಧತಿಗಳಲ್ಲಿ ಸುಧಾರಣೆ ತರಲುಎರಡು ಹೊಸ ಕಾಯ್ದೆ ರೂಪಿಸಲಾಗಿದೆ ಎಂದರು.

ದೇಶದ ಎಲ್ಲ ಹಂತಗಳ ಶಿಕ್ಷಣದಲ್ಲೂ ಒಟ್ಟಾರೆ ಬಾಲಕಿಯದಾಖಲಾತಿ ಪ್ರಮಾಣ ಬಾಲಕರಿಗಿಂತ ಹೆಚ್ಚಾಗಿದೆ ಎಂದುಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಇಡೀ ಶಿಕ್ಷಣ ವಲಯದಲ್ಲೇಮೂಲಭೂತ ಬದಲಾವಣೆಗಳನ್ನು ತರಲು ಹೊಸ ಚೈತನ್ಯನೀಡುತ್ತದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಹೊಂದಿಕೊಳ್ಳುವ ಮತ್ತು ಹೆಚ್ಚುಅಳವಡಿಸಿಕೊಳ್ಳುವಂಥ ಶಿಕ್ಷಣ ವ್ಯವಸ್ಥೆಯೊಂದಿಗೆ ನಮ್ಮಯುವಜನರನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸಲು ಬಹುಆಯಾಮ ಹೊಂದಿದೆ ಎಂದರು. ಕೌಶಲ, ಮರು ಕೌಶಲಮತ್ತು ಕೌಶಲ್ಯವರ್ಧನೆ ಈ ಹೊತ್ತಿನ ಅತ್ಯಗತ್ಯವಾಗಿದೆಎಂದು ಹೇಳಿದರು.

ದೇಶದ ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವಮೈಸೂರು ವಿಶ್ವವಿದ್ಯಾಲಯವು, ಹೊರಹೊಮ್ಮುತ್ತಿರುವಹೊಸ ಸನ್ನಿವೇಶಗಳಿಗೆ ಅನುಗುಣವಾಗಿ ನಾವಿನ್ಯತೆರೂಢಿಸಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ತಿಳಿಸಿದರು. ಇನ್ ಕ್ಯುಬೇಷನ್ ಕೇಂದ್ರಗಳು, ತಂತ್ರಜ್ಞಾನ ಅಭಿವೃದ್ಧಿಕೇಂದ್ರಗಳು, ಕೈಗಾರಿಕೆ- ಶಿಕ್ಷಣ ಸಂಸ್ಥೆಗಳ ಸಂಪರ್ಕ ಮತ್ತುಅಂತ ಶಿಸ್ತೀಯ ಸಂಶೋಧನೆಗಳಿಗೆ ಗಮನ ಹರಿಸುವಂತೆಆಗ್ರಹಿಸಿದರು. ಸಂಬಂಧಿತ ಜಾಗತಿಕ ಮತ್ತು ಸಮಕಾಲೀನವಿಷಯಗಳೊಂದಿಗೆ ಸ್ಥಳೀಯ ಸಂಸ್ಕೃತಿ, ಸ್ಥಳೀಯ ಕಲೆಮತ್ತು ಇತರ ಸಾಮಾಜಿಕ ವಿಚಾರಗಳ ಬಗ್ಗೆ ಸಂಶೋಧನೆಗೆಉತ್ತೇಜನ ನೀಡುವಂತೆ ಅವರು ವಿಶ್ವವಿದ್ಯಾಲಯಕ್ಕೆಮನವಿ ಮಾಡಿದರು. ತಮ್ಮ ವೈಯಕ್ತಿಕ ಶಕ್ತಿಗೆಅನುಗುಣವಾಗಿ ಔನ್ನತ್ಯ ಸಾಧಿಸುವಂತೆ ಅವರುವಿದ್ಯಾರ್ಥಿಗಳಿಗೆ ಆಗ್ರಹಿಸಿದರು.