IMG 20210227 WA0012

ಬೀದರ್ ನಲ್ಲಿ ಜೆಡಿಎಸ್ ಸಂಘಟನಾ ಸಭೆ….!

DISTRICT NEWS ಉತ್ತರ ಕರ್ನಾಟಕ

ಬೀದರ್ ನಲ್ಲಿ ಜೆಡಿಎಸ್ ಸಂಘಟನಾ ಸಭೆ: ಕಲ್ಯಾಣ ಕರ್ನಾಟಕ ಭಾಗದ ನಾಯಕರು ಭಾಗಿ

ಬೀದರ್ (ಫೆ.27): ಜಾತ್ಯಾತೀತ ಜನತಾದಳ (ಜೆಡಿಎಸ್) ಬೀದರ್ ಜಿಲ್ಲಾ ಘಟಕದಿಂದ ನಗರದ ಖಾಸಗಿ ಫಂಕ್ಷನ್ ಹಾಲ್ ನಲ್ಲಿ ನಡೆದ ‘ಪಕ್ಷದ ಸಂಘಟನಾ ಸಭೆ’ಯನ್ನು ಸಸಿಗಳಿಗೆ ನೀರು ಹಾಕುವ ಮೂಲಕ ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಮಾಜಿ ಸಚಿವರುಗಳಾದ ಶಾಸಕ ವೆಂಕಟರಾವ್ ನಾಡಗೌಡ, ಶಾಸಕ ಬಂಡೆಪ್ಪ ಖಾಶೆಂಪುರ್, ಎನ್.ಎಂ ನಬಿರವರು ಉದ್ಘಾಟಿಸಿದರು.
ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಚಿವರು, ಸಿಂಧನೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ವೆಂಕಟರಾವ್ ನಾಡಗೌಡ ಅವರು, ನಮ್ಮ ಪಕ್ಷ ನಾಯಕರನ್ನು ಹುಟ್ಟು ಹಾಕುವ ಪಕ್ಷವಾಗಿದೆ. ಬಿಜೆಪಿ, ಕಾಂಗ್ರೆಸ್ ಗಳಲ್ಲಿರುವ ಬಹುತೇಕ ನಾಯಕರುಗಳು, ಶಾಸಕರುಗಳು, ಮಂತ್ರಿಗಳು ಜೆಡಿಎಸ್ ನಿಂದ ಹೋಗಿರುವವರೇ ಆಗಿದ್ದಾರೆ. ನಮ್ಮ ಪಕ್ಷ ನಾಯಕರನ್ನು ಹುಟ್ಟುಹಾಕುವ ಕಾರ್ಖಾನೆಯಾಗಿದೆ ಅಂತ ಹೇಳೋಕೆ ನಮಗೆ ಹೆಮ್ಮೆ ಎನಿಸುತ್ತಿದೆ.
ಯಾರು ಪಕ್ಷದ ಸಂಘಟನೆಗಾಗಿ ಕೆಲಸ ಮಾಡ್ತಾರೆ ಅವರನ್ನು ಗುರುತಿಸುವ ಕೆಲಸವನ್ನು ಪಕ್ಷ ಮಾಡುತ್ತದೆ. ಯಾರು ಜನರ ಮಧ್ಯದಲ್ಲಿ ಕೆಲಸ ಮಾಡ್ತಿರಿ ಅವರು ಮಾತ್ರ ನಾಯಕತ್ವ ಬೆಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.IMG 20210227 WA0011

ಇದೇ ವೇಳೆ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಅವರು, ಜೆಡಿಎಸ್ ಪಕ್ಷ ರೈತರ ಪರವಾಗಿ, ಬಡವರ ಪರವಾಗಿ ಕೆಲಸ ಮಾಡುತ್ತಿದೆ. ಒಳ್ಳೆಯ ಕೆಲಸ ಮಾಡಿದ ಶ್ರೇಯಸ್ಸು ಜೆಡಿಎಸ್ ಗೆ ಸಲ್ಲುತ್ತದೆ. ನಾವು ಅಧಿಕಾರಕ್ಕೆ ಬಂದಾಗಲೆಲ್ಲಾ ರೈತರ ಸಾಲ ಮನ್ನಾ ಮಾಡಿದ್ದಿವಿ. ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಕೂಡ ಅಂದು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಿದರು.
ಮುಂಬರುವ 2023ರ ಚುನಾವಣೆ ನಮ್ಮ ಮುಖಂಡರ ಎಲೆಕ್ಷನ್ ಅಲ್ಲ. ಹಳ್ಳಿ ಹಳ್ಳಿಯಲ್ಲಿರುವ ನಮ್ಮ ಕಾರ್ಯಕರ್ತರ ಎಲೆಕ್ಷನ್. ನಾವು 2023ರ ಚುನಾವಣೆಯಲ್ಲಿ 123ಕ್ಕೂ ಹೆಚ್ಚಿನ ಸಿಟ್ ಗಳನ್ನು ಪಡೆದುಕೊಳ್ಳಲು ಶ್ರಮಿಸುತ್ತೇವೆ. ಮುಂದಿನ ದಿನಗಳಲ್ಲಿ ಬಹಳಷ್ಟು ಕಡೆಗಳಲ್ಲಿ ಜೆಡಿಎಸ್ ಸಮಾವೇಶಗಳು ನಡೆಯುತ್ತವೆ. ಪಕ್ಷವನ್ನು ಸಂಘಟಿಸುವ ಕೆಲಸ ನಡೆಯುತ್ತದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ಅವರು ಹೇಳಿದರು.IMG 20210227 WA0013

ಮಾಜಿ ಸಚಿವ ಎನ್.ಎಂ ನಬಿ, ಜೆಡಿಎಸ್ ಬೀದರ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲಪೂರ, ದೇವದುರ್ಗದ ಕರೆಮ್ಮ ಜಿ ನಾಯಕ, ನಾಸೀರ್ ಹುಸೇನ್, ತಿಮ್ಮಯ್ಯ ಪುರ್ಲೆ ಸೇರಿದಂತೆ ಅನೇಕರು ಮಾತನಾಡಿದರು. ಜೆಡಿಎಸ್ ಪಕ್ಷದ ಮುಖಂಡರು, ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು…..