IMG 20230510 WA0018

ಪಾವಗಡ: ವೈ ಎನ್ ಹೊಸಕೋಟೆ ದಾಖಲೆ ಯ ಮತದಾನ….!

DISTRICT NEWS ತುಮಕೂರು

ವೈ.ಎನ್.ಹೊಸಕೋಟೆ : ಹೋಬಳಿ ಕೇಂದ್ರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಶಾಂತಿಯುತ ಮತದಾನ ನೆರವೇರಿತು.

ಇದೇ ಹೋಬಳಿಯವರಾದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ಮತ್ತು ಶಾಸಕ ವೆಂಕಟರಮಣಪ್ಪ ಹನುಮಂತನಹಳ್ಳಿ ಗ್ರಾಮದಲ್ಲಿ ಮತ ಚಲಾಯಿಸಿದರು.
ಹೋಬಳಿ ಕೇಂದ್ರದ ಮತಗಟ್ಟೆ 22 ರಲ್ಲಿ ಪ್ರಾರಂಭಿಕವಾಗಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಸುಮಾರು 139 ಮತಗಳ ಚಲಾವಣೆಯ ನಂತರ ಮತಯಂತ್ರವನ್ನು ವಿ.ವಿ ಪ್ಯಾಡ್ ಬದಲಾವಣೆ ಮಾಡಿ ನಂತರ ಮತ ಚಲಾವಣೆ ಪ್ರಾರಂಭವಾಗಿದೆ. ಸುಮಾರು ಒಂದು ಗಂಟೆಯ ಕಾಲ ಮತಗಟ್ಟೆಯಲ್ಲಿ ಮತದಾರರು ಕಾದು ಕುಳಿತು ನಂತರ ಮತದಾನ ಮಾಡಿದ್ದಾರೆ.

IMG 20230510 WA0008


ಬೇಸಿಗೆಯ ಬಿಸಿಲನ್ನು ಲೆಕ್ಕಿಸದೆ ಮತದಾರರು ಉತ್ಸಾಹದಲ್ಲಿ ಮತಚಲಾವಣೆ ಮಾಡಲು ಮತಗಟ್ಟೆಗಳಿಗೆ ಬರುತ್ತಿದ್ದುದು ಗಮನಾರ್ಹ ವಿಷಯವಾಗಿತ್ತು. ಹೋಬಳಿ ಕೇಂದ್ರದಲ್ಲಿ 11 ಮತಗಟ್ಟೆಗಳಿವೆ. ಗ್ರಾಮದ ಒಟ್ಟು 8571 ಮತಗಳ ಪೈಕಿ 7363 ಮತಗಳು ಮತ್ತು 92 ಅಂಚೆ ಮತಗಳು ಚಲಾವಣೆಗೊಂಡಿದ್ದು, ಶೇ 86% ರಷ್ಟು ಮತದಾನ ನಡೆದಿದೆ

.ಕಾಂಗ್ರೆಸ್

ಮತದಾನ ದ ಮುಗಿದ ನಂತರ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು.ವೈ. ಎನ್ ಹೊಸೋಟೆ ಪಟ್ಟಣ ದಲ್ಲಿ‌ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ‌ಹೆ ವು ವೆಂಕಟೇಶ್‌ ಗೆ ಲೀಡ್ ಬರಲಿದೆ ಎಂದು ಗಾಮ ಪಂಚಾಯತಿ ಮಾಜಿ ಸದಸ್ಯ M C ಜಯರಾಮ್ ತಿಳಿಸಿದ್ದಾರೆ.

ಜೆಡಿ ಎಸ್

ವೈ ಎನ್ ಹೊಸಕೋಟೆ ಪಟ್ಟಣ ದಲ್ಲಿ‌ ಜೆಡಿ ಎಸ್ ಅಭ್ಯರ್ಥಿ ಗೆ ಲೀಡ್ ಬರುವ ‌ಅವಕಾಶ ಹೆಚ್ಚಾಗಿದೆ ಎನ್ನುತ್ತಾರೆ ಜೆಡಿ ಎಸ್ ನಾಯಕರು. ಅಂತಿಮವಾಗಿ ಯಾರು ಗೆಲ್ಲುತ್ತಾರೆ ಎಂಬುದು 13 ರಂದು ತಿಳಿಯಲಿದೆ