ಪಾವಗಡ . ಲಾಕ್ ಡೌನ್ ಕೊನೆಗೊಳ್ಳುವವರೆಗೂ ಅನ್ನದಾನ ಕೈ ಹಿಡಿದ ಪಾವಗಡ ಶಾಸಕ ವೆಂಕಟರಮಣಪ್ಪ. ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಇಡೀ ಕರ್ನಾಟಕವನ್ನು ಲಾಕ್ ಡೌನ್ ಮಾಡಲಾಗಿದೆ. ಜನ ಮತ್ತು ವಾಹನ ಸಂಚಾರವಿಲ್ಲದೇ ಬಹುತೇಕ ಸ್ತಬ್ದಗೊಂಡಿದೆ. ಸರ್ಕಾರದ ಆದೇಶದ ಮೇರೆಗೆ ಕೆಲ ಅಂಗಡಿ-ಮುಂಗಟ್ಟುಗಳಷ್ಟೇ ಬಾಗಿಲು ತೆರೆದಿವೆ. ರಸ್ತೆ ಬದಿ ಹೋಟೆಲ್ಗಳೆಲ್ಲವೂ ಬಂದ್ ಆಗಿವೆ. ಬಡವರಿಗೆ ಊಟ ಮಾಡಲು ಅವಕಾಶ ಇದ್ದ ಎಲ್ಲಾ ಅವಕಾಶಗಳು ಮುಚ್ಚಿವೆ. ರಸ್ತೆಬದಿ ಹೋಟೆಲ್ಗಳನ್ನು ನಂಬಿಕೊಂಡಿದ್ದ ನಿರ್ಗತಿಕರು ಊಟಕ್ಕಾಗಿ ಪರದಾಡುವಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ಬಡವರು ಮತ್ತು ನಿರ್ಗತಿಕರ ಸಹಾಯಕ್ಕೆ ಶಾಸಕ ವೆಂಕಟರಮಣಪ್ಪ ಹಾಗೂ ಅವರ ಪುತ್ರ ಜಿಲ್ಲಾ ಪಂಚಾಯಿತಿ ಸದಸ್ಯ ಹೆಚ್ ವಿ ವೆಂಕಟೇಶ್ ಮುಂದಾಗಿದ್ದಾರೆ ಪಟ್ಟಣದ ಸಾರ್ವಜನಿಕರ ಸರ್ಕಾರಿ ಆಸ್ಪತ್ರೆಯಲ್ಲಿ ಇದು ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಮಾತನಾಡಿದ ಅವರು. ಕೊರೋನಾ ತನ್ನ ಬಲ ಪ್ರಯೋಗಿಸುತ್ತಿದ್ದು, ವಿಶ್ವದಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ. ಮೊದಲ ಅಲೆಯ ಹೊಡೆತದಿಂದ ಇನ್ನೂ ಸುಧಾರಿಸದ ಜನ ಸಾಮಾನ್ಯರಿಗೆ ಎರಡನೇ ಅಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಿರುವಾಗ ಬಡತನದಿಂದಾಗಿ ಹಲವರಿಗೆ ದಿನದೂಡುವುದೇ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇದಕ್ಕೆ ಕಳೆದ ವರ್ಷ ಕೊರೋನಾ ಹೊಡೆತದ ವೇಳೆ ಕಂಡು ಬಂದ ಘಟನೆಗಳೇ ಸಾಕ್ಷಿ ಲಾಕ್‌ಡೌನ್‌ನಿಂದ ಕಂಗಾಲಾಗಿದ್ದಾರೆ ಬಡವರಿಗೆ ಊಟ ಮಾಡಲು ಅವಕಾಶ ಇದ್ದ ಎಲ್ಲಾ ಅವಕಾಶಗಳು ಮುಚ್ಚಿವೆ ರಸ್ತೆಬದಿ ಹೋಟೆಲ್ಗಳನ್ನು ನಂಬಿಕೊಂಡಿದ್ದ ನಿರ್ಗತಿಕರು ಊಟಕ್ಕಾಗಿ ಪರದಾಡುವಂತಾಗಿದೆ ಇಂಥ ಪರಿಸ್ಥಿತಿಯಲ್ಲಿ ಬಡವರು ಮತ್ತು ನಿರ್ಗತಿಕರ ಸಹಾಯಕ್ಕೆ ನಾನು ಸದಾ ಸಿದ್ಧ ಹಾಗೂ ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂದು ಹೇಳಿದರು
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್ ವಿ ವೆಂಕಟೇಶ್. ಮಾಜಿ ಪುರಸಭೆ ಅಧ್ಯಕ್ಷ ಶಂಕರ್ ರೆಡ್ಡಿ ಪುರಸಭೆ ಸದಸ್ಯ ಸುದೇಶ್ ಬಾಬು ರಾಜೇಶ್ ರವಿ ವೇಲು ರಾಜ್. ಮಹಮ್ಮದ್ ಇಮ್ರಾನ್. ಮಾಲಿನ್ ತಾಜ್. ವಿಜಿ ಕುಮಾರ್. ಹಾಗೂ ಮುಖಂಡರಾದ ಕನಿಕಲ ಬಂಡೆ ಅನಿಲ್. ಹನುಮಂತರಾಯಪ್ಪ. ಪ್ರಮೋದ್ ಕುಮಾರ್. ಅಲಿ. ಮಣಿ ಹಾಗೂ ಹೆಚ್ .ವಿ ವೆಂಕಟೇಶ್ ಅಭಿಮಾನಿಗಳ ಬಳಗದ ಅಭಿಮಾನಿಗಳು ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು
ವರದಿ ಬುಲೆಟ್ ವೀರಸೇನಯಾದವ್