ಎಸ್. ಎಸ್ ಎಲ್ ಸಿ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ: ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ.
ಪಾವಗಡ : ರಾಜ್ಯದಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆ ಮಾರ್ಚ್ 21ರಿಂದ ಏಪ್ರಿಲ್ 4ರ ವರೆಗೆ ನಡೆಯಲಿದ್ದು. ವಿದ್ಯಾರ್ಥಿಗಳು ಭಯಪಡದೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ ಮಾಹಿತಿ ತಿಳಿಸಿದ್ದಾರೆ.
ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಂಬಂಧಿಸಿದಂತೆ ತಾಲ್ಲೂಕಿನಲ್ಲಿ ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ತಾಲೂಕಿನಾದ್ಯಂತ 12 ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ.ಪಟ್ಟಣದಲ್ಲಿ 03 ಪರೀಕ್ಷಾ ಕೇಂದ್ರಗಳು ಗ್ರಾಮಾಂತರ ಪ್ರದೇಶದಲ್ಲಿ 9 ಪರೀಕ್ಷಾ ಕೇಂದ್ರಗಳಿವೆ ಎಂದರು.
ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸರ್ಕಾರಿ ಶಾಲೆಯ 1166 ವಿದ್ಯಾರ್ಥಿಗಳು ಅನುದಾನಿತ ಶಾಲೆಯ 1149 ವಿದ್ಯಾರ್ಥಿಗಳು
ಹಾಗೂ ಖಾಸಗಿ ಶಾಲೆಯ 535 ವಿದ್ಯಾರ್ಥಿಗಳು
ಒಟ್ಟು 2850 ಮತ್ತು ಖಾಸಗಿ ಪುನರಾವರ್ತಿತ 75 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.
ಪರೀಕ್ಷೆಯಲ್ಲಿ ನಕಲು ಮಾಡುವುದನ್ನು ತಡೆಯುವ ಉದ್ದೇಶದಿಂದ
ತಾಲ್ಲೂಕು ಮಟ್ಟದ ವಿಚಕ್ಷಣಾ ದಳದಲ್ಲಿ
ತಹಶೀಲ್ದಾರ್ ತಂಡ, ಈ .ಒ ತಂಡ, ಬಿ.ಇ.ಒ ತಂಡ ಮತ್ತು ಬಿ. ಆರ್. ಸಿ. ಎ.ಡಿ. ಎಂ. ಎಂ ತಂಡ ಕಾರ್ಯನಿರ್ವಹಿಸಲಿದೆ ಎಂದರು.
05 ಮಾರ್ಗಗಳಿಗೆ 05 ಮಾರ್ಗ ಅಧಿಕಾರಿ ಅಧಿಕಾರಿಗಳು, 12 ಅಧಿಕಾರಿಗಳನ್ನು ಮೊಬೈಲ್ ಸ್ಕ್ವಾರ್ಡ್ ತಂಡವನಾಗಿ,
12. ಅಧಿಕಾರಿಗಳುನ್ನು ಸಿ.ಸಿ.ಟಿ.ವಿ ತಾಂತ್ರಿಕ ಪರಿವೀಕ್ಷಕರನ್ನಾಗಿ, 12 ಅಧಿಕಾರಿಗಳನ್ನು ಸಿಟ್ಟಿಂಗ್ ಸ್ಕ್ವಾಡ್ ಗಳಾಗಿ ನೇಮಕ ಮಾಡಲಾಗಿದೆ ಎಂದರು.
ನಕಲು ತಡೆಯಲು ಪರೀಕ್ಷಾ ಕೇಂದ್ರಗಳ ಪ್ರತಿ ಕೊಠಡಿಗಳಿಗೂ ಸಿಸಿ ಕ್ಯಾಮೆರಾ, ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದರು.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಏರ್ಪಡಿಸಲಾಗಿದೆ ಎಂದರು.
ಫಲಿತಾಂಶ ಹೆಚ್ಚಳಕ್ಕೆ ಕ್ರಮ.: –
ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಯ ಫಲಿತಾಂಶ ಉತ್ತಮ ಪಡಿಸಲು, ರಾತ್ರಿ ವೇಳೆಯ ವಿಶೇಷ ತರಗತಿಗಳನ್ನು ಸರ್ಕಾರಿ ಅನುದಾನಿತ ಅನುದಾನಿತ ರಹಿತ ಶಾಲೆಗಳಲ್ಲಿ ಕೈಗೊಳ್ಳಲಾಗಿತ್ತು ಎಂದರು.
ಜಿಲ್ಲಾ ಮಟ್ಟದ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು. ಕಲಿಕಾಸರೆ ಮತ್ತು ಕಲಿಕಾ ಪುಷ್ಟಿ ಪುಸ್ತಕಗಳನ್ನು ವಿತರಿಸಲಾಯಿತು ಎಂದರು.
ವಿದ್ಯಾರ್ಥಿಗಳಿಗೆ ಮುನ್ಸೂಚನೆಗಳು.
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುವಾಗ ಪ್ರಶ್ನೆ ಪತ್ರಿಕೆಯನ್ನು ಉತ್ತಮವಾಗಿ ಅರ್ಥೈಸಿಕೊಂಡು ಉತ್ತರ ಬರೆಯಲು ತಿಳಿಸಿದರು.
ಪರೀಕ್ಷೆ ಬರೆಯುವಾಗ ಭಯಪಟ್ಟುಕೊಂಡರೆ ಓದಿದ ಅಂಶಗಳೂ ಮರೆತು ಹೋಗುತ್ತವೆ.ಪರಿಕ್ಷೆ ಬರೆಯುವಾಗ ಸಮಯಪಾಲನೆ ಅಗತ್ಯವಾಗಿದ್ದು, ಪರೀಕ್ಷಾ ಅವಧಿಯನ್ನು ಪ್ರಶ್ನೆಗಳಿಗೆ ಹೊಂದಿಸಿಕೊಂಡು ಉತ್ತರ ಬರೆಯಬೇಕು.
ಪರೀಕ್ಷಾ ಸಮಯದಲ್ಲಿ ಯಾವುದೇ ಗೊಂದಲಗಳಿಗೆ ಒಳಗಾಗಬಾರದು ಎಂದರು.ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ವರದಿ : ಶ್ರೀನಿವಾಸಲು ಎ