ಹಿಂದೂ ಧರ್ಮವನ್ನು ರಕ್ಷಿಸಿದ ವೀರ ಶಿವಾಜಿ. ಪಾವಗಡ. ತಾಲೂಕಿನ ವೆಂಕಟಾಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಇಂದು 392 ನೇ ಶಿವಾಜಿ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ರಾಮಕೃಷ್ಣಪ್ಪ ಮಾತನಾಡುತ್ತಾ ಪ್ರಪಂಚದ ಏಕೈಕ ಹಿಂದೂ ರಾಜ್ಯ ಭಾರತ, ಹಿಂದುಗಳೆಲ್ಲಾ ಒಗ್ಗಟ್ಟಾಗಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು, ಇಲ್ಲವಾದಲ್ಲಿ ಹಿಂದೂ ಧರ್ಮದಲ್ಲಿ ಒಡಕು ಉಂಟಾಗಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದರು.
ಶಿವಾಜಿ ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾದ ವ್ಯಕ್ತಿಯಲ್ಲ ಮಧ್ಯಯುಗದ ಭಾರತದಲ್ಲಿ ಹಿಂದೂಗಳಿಗೆ ಹಿಂದೂ ಧರ್ಮಕ್ಕೆ ರಕ್ಷಣೆ ಇಲ್ಲದಂತಹ ಕಾಲದಲ್ಲಿ ಹಿಂದೂಗಳಿಗೆ ರಕ್ಷಣೆ ನೀಡಲು ಮುಂದಾದ ಏಕೈಕ ಸಾಮ್ರಾಜ್ಯ ಮರಾಠ ಸಾಮ್ರಾಜ್ಯ ಎಂದರು. 1870 ರಲ್ಲಿ ಶಿವಾಜಿ ಜಯಂತಿಯನ್ನು ಜ್ಯೋತಿಬಾ ಪುಲೆ ರವರು ಪ್ರಾರಂಭಿಸಿದರ ಭಾರತದ ಸ್ವತಂತ್ರ ಹೋರಾಟಗಾರ ಬಾಲಗಂಗಾಧರ ತಿಲಕ್ ಶಿವಾಜಿ ಜಯಂತಿಯನ್ನು ಪ್ರಚಾರ ಮಾಡುವ ಮೂಲಕ ಹೆಚ್ಚು ಜನಪ್ರಿಯಗೊಳಿಸಿದರು. ಶಿವಾಜಿ ತಾಯಿಯಾದ ಜೀಜಾಬಾಯಿಯಿಂದ ಪ್ರೇರಿತನಾಗಿ ಹಿಂದೂ ಧರ್ಮದ ರಕ್ಷಣೆಗಾಗಿ ಪಣತೊಟ್ಟ ನೆಂದು ಇತಿಹಾಸ ತಿಳಿಸುತ್ತದೆ. ಪಂಚಾಯತ್ ಅಧ್ಯಕ್ಷರಾದ ಆಂಜಿನೇಯುಲು ಉಪಾಧ್ಯಕ್ಷರಾದ ಲಕ್ಷ್ಮಿ ನಾರಾಯಣ ಸದಸ್ಯರಾದ ಲಕ್ಷ್ಮಣ್ ಲಕ್ಷ್ಮೀಶ ವೆಂಕಟರಾವಣಪ್ಪ ಮಾಜಿ ಸದಸ್ಯರಾದ ರಾಮಕೃಷ್ಣ ಇದ್ದರು. ಕಾರ್ಯಕ್ರಮದಲ್ಲಿ ಪಿಡಿಒ ರಂಗಧಾಮ ಗೈರು ಹಾಜರಾಗಿದ್ದರು. ಈ ರೀತಿಯ ಜಯಂತಿಗಳಿಗೆ ಪಿಡಿಒ ಗೈರುಹಾಜರಾಗಿರುವುದು ಎಷ್ಟು ಸರಿ ಎಂದು ವೆಂಕಟಾಪುರ ಗ್ರಾಮದ ಶ್ರೀನಾಥ್ ,ನಾಗೇಶ್, ಸುಮನ್ ಖಂಡಿಸಿದರು.
ವರದಿ: ಶ್ರೀನಿವಾಸುಲು ಎ