ಪಾವಗಡ :- ಪಾವಗಡ ಪುರಸಭೆಯ ನೂತನ ಅಧ್ಯಕ್ಷ ರಾಗಿ ಗಂಗಮ್ಮ ಅವಿರೋಧವಾಗಿ ಆಯ್ಕೆಯಾದರು.
ಇತ್ತೀಚೆಗೆ ಅಧ್ಯಕ್ಷ ರಾಗಿದ್ದ ರಾಮಾಂಜಿನಪ್ಪ ಅವರ ರಾಜಿನಾಮೆ ನೀಡಿದ್ದರಿಂದ ಸ್ಥಾನವು ತೆರವಾಗಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಪಾವಗಡದ ತಹಶೀಲ್ದಾರ್ ನಾಗರಾಜುರವರು ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು
ಪಾವಗಡ ಪಟ್ಟಣದಲ್ಲಿ 23 ವಾರ್ಡ್ ಗಳಿದ್ದು. 20 ವಾರ್ಡ್ ಗಳಲ್ಲಿ ಕಾಂಗ್ರೆಸ್ ಸದಸ್ಯರಿದ್ದು. 2 ವಾರ್ಡ್ ಗಳಲ್ಲಿ ಜೆಡಿಎಸ್ ಸದಸ್ಯರಿದ್ದು. 01 ವಾರ್ಡಿನಲ್ಲಿ ಸ್ವತಂತ್ರ ಅಭ್ಯರ್ಥಿ ಸದಸ್ಯರಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಗಂಗಮ್ಮ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಯೂ ಆದ ತಹಶೀಲ್ದಾರ್ ನಾಗರಾಜುರವರು ಘೋಷಿಸಿದರು.
ಗಂಗಮ್ಮ ನವರು ಪಾವಗಡ ಪಟ್ಟದ 9 ನೇ ವಾರ್ಡ ಸದಸ್ಯರಾಗಿದ್ದು ಈ ಹಿಂದೆ ನಡೆದ ಪುರಸಭೆ ಚುನಾವಣೆಯಲ್ಲಿ ಒಂದು ಓಟಿನ ಅಂತರದಲ್ಲಿ ಗೆದ್ದು ಪಟ್ಟಣ ಪಂಚಾಯತಿಯ ಸದಸ್ಯರಾಗಿದ್ದರು.
ಪಾವಗಡದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪರಿಶಿಷ್ಟ ಜಾತಿಯ ಮಹಿಳೆ ಪುರಸಭೆಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವುದು ಹರ್ಷಿ ಸಬೇಕಾದ ಸಂಗತಿಯಾಗಿದೆ
ಇದರ ಎಲ್ಲಾ ಕ್ರೆಡಿಟ್ ಶಾಸಕ ವೆಂಕಟರಮಣಪ್ಪ ನವರಿಗೆ ಸಲ್ಲುತ್ತದೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ವೆಂಕಟರವಣಪ್ಪ ಹಾಗೂ ಇತರೆ ಕಾಂಗ್ರೆಸ್ ಮುಖಂಡರು ಪರಸ್ಪರ ಸಿಹಿ ಹಂಚಿಕೊಳ್ಳುವ ಮುಖಾಂತರ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಾಬು. ತೆಂಗಿನಕಾಯಿ ರವಿ. ರಾಜೇಶ್ ರಿಜ್ವಾನ್ ಉಲ್ಲಾ. ಬಾಲಸುಬ್ರಮಣ್ಯಂ .ಇಮ್ರಾನ್. ಅಲಿ .ರಾಮಾಂಜಿನಪ್ಪ ಮತ್ತಿತರರು ಉಪಸ್ಥಿತರಿದ್ದರು
ವರದಿ: ಎ ಶ್ರೀನಿವಾಸುಲು