ಪಾವಗಡ ತಾಲೂಕು ಆಡಳಿತ ಕಚೇರಿ ಮುಂದೆ ಗ್ರೇಡ್ 2 ತಹಶೀಲ್ದಾರ್ ಸುಮತಿ ಅವರ ಕಾರ್ಯವೈಖರಿಯನ್ನು ಪ್ರಶ್ನಿಸಿ ಪ್ರತಿಭಟನೆ.
ಪಾವಗಡ: ಗ್ರೇಡ್ 2 ತಹಶಿಲ್ದಾರ್ ಸುಮತಿ ಅವರು ಅಂಗವಿಕಲ ವೇತನ ಪಡೆಯಲು ಅರ್ಜಿ ಸಲ್ಲಿಸಲು ಬರುವ ಅಂಗವಿಕಲರಿಗೆ ಕೆಲಸವನ್ನು ಮಾಡಿಕೊಡದೆ ಸದಾ ಅಲೆಸುತ್ತಾರೆ
.ವಿದ್ಯಾರ್ಥಿಗಳ ಶಾಲಾ ದಾಖಲಾತಿ ವರ್ಜಿನಲ್ ಕೊಡಬೇಕು. ನಕಲು ಪ್ರತಿಗಳನ್ನು ಸ್ವೀಕರಿಸಲಾಗುವುದಿಲ್ಲ. ಶಾಲಾ ದಾಖಲಾತಿ ವರ್ಜಿನಲ್ ಪಡೆಯುವಂತೆ ಸರ್ಕಾರದ ಆದೇಶವಿದೆ ಎಂದು ಸದಾ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಅಲೆದಾಡಿ ಸುವುದು ಸಾಮಾನ್ಯವಾಗಿಬಿಟ್ಟಿದೆ
ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯುವ ಉದ್ದೇಶದಿಂದಾಗಿ ಹಲವಾರು ವಿದ್ಯಾರ್ಥಿಗಳು ತಮ್ಮ ತರಗತಿಗಳಿಗೆ ಹಾಜರಾಗುವುದನ್ನು ಬಿಟ್ಟುಶಾಲೆಗೆ ಬಂದು ಶಾಲಾ ದಾಖಲಾತಿಯನ್ನು ಬರೆಸಿಕೊಂಡು ತಾಲೂಕು ಕಚೇರಿಗೆ ಅಲೆಯುವಂತಹ ಪರಿಸ್ಥಿತಿ ಒದಗಿಬಂದಿದೆ.
ಎಸ್ ಎಸ್ ವೈ ಮತ್ತು ವೃದ್ಧಾಪ್ಯ ವೇತನ ಪಡೆಯಲು ಅರ್ಜಿದಾರರನ್ನು ಪದೇಪದೇ ಕಚೇರಿಗೆ ಅಲೆದಾಡಿಸುತ್ತಾರೆ ಮತ್ತು ಪಿಂಚಣಿ ಮಂಜೂರು ಮಾಡಲು ಮೊಬೈಲ್ ಆಪ್ ನಲ್ಲಿ ಮಾಡುತ್ತೇನೆಂದುಸಾರ್ವಜನಿಕರಿಂದ ಬಹಳಷ್ಟು ದೂರು ಬಂದಿರುವ ಹಿನ್ನೆಲೆ ಇಂದು ಪಾವಗಡ ರೈತಸಂಘದ ಮುಖಂಡರು ಪ್ರತಿಭಟನೆ ನಡೆಸಿದರು
ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಶಿವರಾಜು ನರಸಣ್ಣ ಉಪಾಧ್ಯಕ್ಷ ವೆಂಕಟಸ್ವಾಮಿ ನಾರಾಯಣಪ್ಪದಲಿತ ಮುಖಂಡ ರಾಮ ಸುಬ್ಬಯ್ಯ ಇತರರು ಹಾಜರಿದ್ದರು
ಏನೇ ಆಗಲಿ ಈ ರೀತಿಯ ಬೇಜವಾಬ್ದಾರಿಅಧಿಕಾರಿಯನ್ನು ಈ ಕೂಡಲೇ ವರ್ಗಾವಣೆ ಮಾಡಿ ಜನರಿಗೆ ಉತ್ತಮ ಸೇವೆ ನೀಡುವಂತಹ ಅಧಿಕಾರಿಯನ್ನು ಕರೆಸಬೇಕೆಂಬುದು ಪಾವಗಡ ಜನರು ಆಶಯವಾಗಿದೆ