* ತುಂಗಭದ್ರಾ ಕುಡಿಯುವ ನೀರಿನ ಪೈಪ್ ಲೈನ್ ಡ್ಯಾಮೇಜ್.
* ದಿನೇಶ್ ಇಂಜನಿಯರಿಂಗ್ ಕಂಪನಿಯ ಅನಧಿಕೃತ ಕಾಮಗಾರಿಗಳಿಗೆ ಅಸ್ತು ಎಂದವರು ಯಾರು…,?
* ವೈ ಎನ್ ಹೊಸಕೋಟೆ ಹೋಬಳಿ ಹಲವಾರು ಹಳ್ಳಿಗಳಿ ಗೆ ನೀರು ಸರಬರಾಜಿಗೆ ತೊಂದರೆ
* ಡ್ಯಾಮೇಜ್ ಮಾಡಿರುವ ಖಾಸಗಿ ಕಂಪನಿಯ ಮೇಲೆ ಕ್ರಮ ತೆಗೆದುಕೊಳ್ಳುತ್ತಾರ…?
ಪಾವಗಡ : ತಾಲ್ಲೂಕಿನ ತುಂಗಭದ್ರಾ ಕುಡಿಯುವ ನೀರಿನ ಯೋಜನೆ ಗೆ ಖಾಸಗಿ ಕಂಪನಿ ಅಡ್ಡಿ ಪಡಿಸುತ್ತಿದೆ.
ದಿನೇಶ ಇಂಜನಿಯರಿಂಗ್ ಎಂಬ ಖಾಸಗಿ ಕಂಪನಿ( DEPL ) ಅನದೀಕೃತವಾಗಿ ಕೇಬಲ್ ಹಾಕುವ ಕೆಲಸವನ್ನು ಮಾಡುತ್ತಿದ್ದು. ಈ ಕಾಮಗಾರಿ ಗೆ ಸಂಬಂಧ ಪಟ್ಡ ಇಲಾಖೆಗಳ ಅನುಮತಿ ಪಡೆದಿಲ್ಲ.
ಕೆಲಸ ಮಾಡುವ ಸಮಯದಲ್ಲಿ . ತುಂಗಭದ್ರಾ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಲೈನ್ ಗಳನ್ನು ಡ್ಯಾಮೇಜ್ ಮಾಡಿದೆ. ಪಾವಗಡ ಪಟ್ಟಣ ಹೊರವಲಯದಿಂದ ನಾಗಲಾಪುರ ದ ಮಾರ್ಗ ದಲ್ಲಿ ಪೈ ಪ್ ಲೈನ್ ಡ್ಯಾಮೇಜ್ ಆಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಬಸವಲಿಂಗಪ್ಪ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೂರ್ಣಗೊಂಡ ಕಾಮಗಾರಿಗೆ ವಿಘ್ನ :
ತಾಲೂಕಿನಾದ್ಯಂತ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಈಗಾಗಲೇ ಮುಗಿದಿದ್ದು, ಪ್ರತಿ ಹಳ್ಳಿಗೂ ನೀರು ಕೊಡಲು ತಯಾರು ಮಾಡಿಕೊಂಡಿದ್ದು. ಸದರಿ ಪೈಪ್ ಲೈನ್ ಜಾಗವನ್ನು ನಾಗಲಮಡಿಕೆ ಕ್ರಾಸ್ ನಿಂದ ನಾಗಲಾಪುರ ಗೇಟ್ ವರೆಗೆ ಕೇಬಲ್ ಅಳವಡಿಸಲು ಖಾಸಗಿ ಕಂಪನಿಯೊಂದು ಯಾವುದೇ ಅನುಮತಿ ಇಲ್ಲದೆ. ದಿನೇಶ ಇಂಜನಿಯರಿಂಗ್ ಕಂಪನಿ ಕೆಲಸ ಮಾಡುತ್ತಿದ್ದರು ಪ್ರಶ್ನಿಸುವ ಗೋಜಿಗೆ ಹೋಗದೆ ಇರುವುದು ತಾಲ್ಲೂಕು ಆಡಳಿತ ವ್ಯವಸ್ಥೆ ಕಾರ್ಯವೈಖರಿ ಒಂದು ಸ್ಪಷ್ಟ ಉದಾರಣೆ.
ಡ್ಯಾಮೇಜ್ ಆದ ಮೇಲೆ ಎಚ್ಚೆತ್ತ ಅಧಿಕಾರಿಗಳು :
ತಾಲೂಕಿನಾದ್ಯಂತ ಕೇಬಲ್ ಲೈನ್ ಹಾಕಲು ಜೆಸಿಬಿ ಮುಖಾಂತರ ಗುಂಡಿ ತೆಗೆಯಲು ಹೋಗಿ ಪೈಪ್ ಲೈನ್ ಅನ್ನು ಡ್ಯಾಮೇಜ್ ಮಾಡಿರುತ್ತಾರೆ.ಎಷ್ಟು ಬಾರಿ ಹೇಳಿದರೂಪ್ರಯೋಜನ ವಾಗಿಲ್ಲವಂತೆ.
ಪೈಪ್ ಲೈನ್ ಡ್ಯಾಮೇಜ್ ಆದ ನಂತರ ಅಧಿಕಾರಿಗಳು ಪಾವಗಡ ಪೋಲೀಸ್ ಠಾಣೆ ಗೆ ದೂರು ನೀಡಿದ್ದಾರೆ. ನಿಜಕ್ಕೂ ಇವರ ಬದ್ಧತೆಯನ್ನು ಮೆಚ್ಚಬೇಕು ಅಲ್ಲವೇ…!
ಪೋಲಿಸರು ಕ್ರಮ ಕೈಗೊಳ್ಳತ್ತಾರ…?
ಪ್ಲೋರೇಡ್ ಮುಕ್ತ ಕುಡಿಯುವ ನೀರು ಕುಡಿಯಲು ಹಲವು ವರ್ಷಗಳಿಂದ ಕಾಯುತ್ತಿರುವ ಪಾವಗಡ ತಾಲ್ಲೂಕು ಜನತೆ ಯ ಕನಸಿಗೆ ಅಡ್ಡಿ ಪಡಿಸಿದ ದಿನೇಶ್ ಇಂಜನಿಯರಿಂಗ್ ಕಂಪನಿಯ ಮೇಲೆ ಪಾವಗಡ ಪೋಲೀಸರು ಯಾವ ರೀತಿಯ ಕ್ರಮ ಕೈಗೊಳ್ಳುತಾರೆ ಎನ್ಬುವುದಕ್ಕೆ ಕಾಲ ವೇ ಉತ್ತರಿಸಿಬೇಕು.