ತಾಲ್ಲೂಕಿನ ಅಭಿವೃದ್ಧಿಗೆ ಪೂರಕವಾದ ವಿಶೇಷ ಪ್ರಣಾಳಿಕೆ ಪ್ರಕಟಿಸಲಾಗುವುದು. ನಾಗೇಂದ್ರ ಕುಮಾರ್
ಪಾವಗಡ: ಪಟ್ಟಣದ ತುಮಕೂರು ರಸ್ತೆಯಲ್ಲಿರುವ ಜನಸೇವಾ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ , ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಆಕಾಂಕ್ಷಿ ಅಭ್ಯರ್ಥಿ ನೇರಳೆಕುಂಟೆ ನಾಗೇಂದ್ರ ಮಾತನಾಡಿ,
ಇದೇ ತಿಂಗಳ ಫೆಬ್ರವರಿ 26ರಂದು ಪಟ್ಟಣದ ಗುರುಭವನದ ಮೈದಾನದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಹಿರಂಗ ಸಭೆ ನಡೆಯಲಿದೆ ಎಂದುರು.
ಗಾಲಿ ಜನಾರ್ಧನರೆಡ್ಡಿ ಪಾವಗಡಕ್ಕೆ ಆಗಮಿಸಿ ಭಾನುವಾರ ಬೆಳಿಗ್ಗೆ ಕಣಿವೇನಹಳ್ಳಿ ಗೇಟ್ ಬಳಿಯ ಅಭಯ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಪಕ್ಷದ ಕಚೇರಿಯನ್ನು ಉದ್ಘಾಟಿಸಲಿದ್ದಾರೆಂದು,
ನಂತರ ಹಿಂದೂಪುರ ವೃತ್ತದ ಬಳಿ ಕನಕದಾಸರ ವಿಗ್ರಹಕ್ಕೆ ಹೂಮಾಲೆ ಸಮರ್ಪಿಸಿ, ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಗಾರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಲಿದ್ದಾರೆ ಎಂದರು..
ಪಟ್ಟಣದಲ್ಲಿ ವಿವಿಧ ಕಲಾ ತಂಡಗಳು, ವಾದ್ಯ ವೃಂದದೊಂದಿಗೆ ಶನೈಶ್ಚರ ವೃತ್ತದಿಂದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ಮೂಲಕ ಹೋಗಿ ಅಂಬೇಡ್ಕರ್ ವಿಗ್ರಹಕ್ಕೆ ಪುಷ್ಪ ನಮನ ಸಲ್ಲಿಸುತ್ತಾರೆ.
ಗುರುಭವನದಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ತಾಲ್ಲೂಕಿನ ಬಗ್ಗೆ ವಿಶೇಷ ಪ್ರಣಾಳಿಕೆ ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡ ಕರಿಯಣ್ಣ, ಚನ್ನಕೇಶವರೆಡ್ಡಿ, ಜಯಶಂಕರರೆಡ್ಡಿ, ಎಸ್. ಹನುಮಂತರಾಪ್ಪ, ನಲಿಗಾನಹಳ್ಳಿ ಮಂಜುನಾಥ್, ಕಿರಣ್, ಮಲ್ಲಿಕಾರ್ಜುನ್, ರವಿ ಉಪಸ್ಥಿತರಿದ್ದರು.