IMG 20230223 WA0030

ಮಧುಗಿರಿ:ತಾಡಿಗ್ರಾಮ ಅಭಿವೃದ್ಧಿಗೆ 2.6 ಕೋಟಿ…!

DISTRICT NEWS ತುಮಕೂರು

ತಾಡಿಗ್ರಾಮ ಅಭಿವೃದ್ಧಿಗೆ 2.6 ಕೋಟಿ ಶಾಸಕ ವೀರಭದ್ರಯ್ಯ

ಮಧುಗಿರಿ : ಗಡಿ ಭಾಗದ ಗ್ರಾಮವಾದ ತಾಡಿ ಗ್ರಾಮದ ಅಭಿವೃದ್ಧಿಗಾಗಿ 2.6 ಕೋಟಿ ಅನುದಾನ ನೀಡಿದ್ದು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ ಎಂದು ಶಾಸಕ ಎಂ.ವಿ. ವೀರಭದ್ರಯ್ಯ ತಿಳಿಸಿದರು.

ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ.ಸೂರನಾಗೇನಹಳ್ಳಿ 20 ಲಕ್ಷ, ಐ.ಡಿ.ಹ ಳ್ಳಿ. ಹೋಬಳಿ ತಾಡಿ ಗ್ರಾಮದಲ್ಲಿ 40ಲಕ್ಷ, ಸಿದ್ದಾಪುರದಲ್ಲಿ 20 ಲಕ್ಷ ಸೇರಿ ಒಟ್ಟು 1.2 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ತಾಡಿಯಲ್ಲಿ ಮಾತನಾಡಿದ ಅವರು, ಇದೇ ಗ್ರಾಮದಲ್ಲಿ ರಸ್ತೆ, ಚರಂಡಿ, ಅಂಗನವಾಡಿ, ಬಸ್ ನಿಲ್ದಾಣ, ಶುದ್ಧ ಕುಡಿಯುವ ನೀರಿನ ಘಟಕ, ಶಾಲಾ ಕಟ್ಟಡ, ಸೇರಿದಂತೆ 2.6 ಕೋಟಿಯಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಎಂದರು.

ಶಾಸಕನಾದ ನಂತರ ಇಲ್ಲಿಯವರೆಗೂ ಭೀಕರ ಬರಗಾಲ, ಕರೋನ, ಹಾಗೂ ನೆರೆಹಾವಳಿಯಿಂದಾಗಿ ಅನುದಾನ ತರಲು ಕಷ್ಟವಾಗಿತ್ತು. ಮೊದಲ ವರ್ಷದಲ್ಲಿ ಕುಮಾರಸ್ವಾಮಿಯವರ ಅವಧಿಯಲ್ಲಿ 6 ಕೋಟಿ ವೆಚ್ಚದಲ್ಲಿ ಮನೆಮನೆಗೆ ಜಾನುವಾರುಗಳ ಮೇವನ್ನು ಹಂಚಿಕೆ ಮಾಡಲಾಯಿತು. ಬರಗಾಲದಲ್ಲಿ 300 ಬೋರ್ವೆಲ್ ಕೊರೆಸಿದ್ದು ದಾಖಲೆಯಾಗಿದೆ. ಇಲ್ಲಿವರೆಗೂ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರದಿಂದ ತಾರತಮ್ಯ ನಡೆದರೂ 1200 ಕೋಟಿ ಅನುದಾನ ತಂದು ಕೆಲಸ ಮಾಡಿದ್ದೇನೆ.

ಕ್ಷೇತ್ರದಲ್ಲಿ ಜೆಡಿಎಸ್ ಪರ ಅಲೆ
ಸದ್ಯ ಪಂಚರತ್ನ ಯೋಜನೆಗಳ ಕಾರಣದಿಂದ ಜೆಡಿಎಸ್ ಪರವಾಗಿ ರಾಜ್ಯದ ಉದ್ದಗಲಕ್ಕೂ ಎದ್ದಿದೆ. ಉಚಿತವಾಗಿ ಬಡವರಿಗೆ ಶಿಕ್ಷಣ, ಆರೋಗ್ಯ , ರೈತರಿಗೆ ನೆರವು, ಮನೆ ನಿರ್ಮಾಣ ಸೇರಿದಂತೆ .ವಿದ್ಯಾವಂತ ಯುವಕರಿಗೆ ಉದ್ಯೋಗ ನೀಡುವ ಕಾರ್ಯಕ್ರಮವನ್ನು ಜನತೆ ಮೆಚ್ಚಿಕೊಂಡಿದ್ದಾರೆ. ಇದಲ್ಲದೆ ವೃದ್ಧರಿಗೆ ಮಾಸಿಕ 5000, ವಿಧವಾ ಮಹಿಳೆಯರಿಗೆ 2500, ಹಾಗೂ ಸ್ತ್ರೀಶಕ್ತಿ ಸಂಘಗಳ ಸಾಲ ಸಂಪೂರ್ಣ ಮನ್ನ ಮಾಡುವ ಕಾರ್ಯಕ್ರಮದಿಂದ ಪಕ್ಷಕ್ಕೆ ಬಲ ಬಂದಿದೆ.

ಈ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆಂಬ ಅಚಲ ವಿಶ್ವಾಸವಿದ್ದು, ನೀವುಗಳು ಈ ಬಾರಿಯೂ ಸಹ ನನಗೆ ಆಶೀರ್ವಾದ ಮಾಡುವುದರ ಮೂಲಕ ಪಂಚರತ್ನ ಯೋಜನೆ ಜಾರಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಬಸವರಾಜು, ಹೋಬಳಿ ಅಧ್ಯಕ್ಷರಾದ ಲಕ್ಷ್ಮೀ ನರಸಿಂಹ ರೆಡ್ಡಿ, ರಾಮಚಂದ್ರಪ್ಪ, ಎಸ್, ಸಿ, ಘಟಕದ ಅಧ್ಯಕ್ಷ ಗುಂಡಗಲ್ಲು ಶಿವಣ್ಣ, ಮುಖಂಡರಾದ ಆರ್.ಕೆ.ರೆಡ್ಡಿ, ನರಸಿಂಹಯ್ಯ, ವೆಂಕಟರಂಗ ರೆಡ್ಡಿ, ಗುಂಡಗಲ್ಲು ಜಯರಾಮ್, ಜಿಲಾನ್, ರಿಯಾಜ್, ಕೂರ್ಲಪ್ಪ, ಸಿದ್ಧಗಂಗಪ್ಪ, ಲಕ್ಷ್ಮೀನಾರಾಯಣ್, ಸುರೇಶ್ , ಸಣ್ಣಪ್ಪ, ಅಂಜಿನಪ್ಪ, ಪಿಡಿಓಗಳಾದ ಪ್ರಕಾಶ್, ಶಿಲ್ಪ, ಗುತ್ತಿಗೆದಾರರು ಹಾಗೂ ಗ್ರಾಮಸ್ಥರು ಹಾಜರಿದ್ದರು.

ವರದಿ. ಲಕ್ಷ್ಮಿಪತಿ ದೊಡ್ಡ ಯ ಲ್ಕೂರು.