IMG 20230223 WA0039

ಪಾವಗಡ:ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕತೆಯಿಂದ, ನಿಷ್ಠೆಯಿಂದ ಕೆಲಸ ಮಾಡಿ…!

DISTRICT NEWS ತುಮಕೂರು

ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕತೆಯಿಂದ, ನಿಷ್ಠೆಯಿಂದ ಕೆಲಸ ಮಾಡಿ.ಲೋಕಾಯುಕ್ತ ಜಿಲ್ಲಾ ಎಸ್ ಪಿ ವಾಲಿ ಭಾಷಾ.

ಪಾವಗಡ : ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರನ್ನು ವಿನಾಕಾರಣ ಅಲಿಸದೆ, ನಿಷ್ಠೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಪಟ್ಟಣದ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಬುಧುವಾರ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು,
ಮಾನವ ಸೇವೆಯೇ ಮಾಧವ ಸೇವೆ ಎಂಬಂತೆ, ಸಾರ್ವಜನಿಕರು ಅಧಿಕಾರಿಗಳ ಬಳಿ ಸಮಸ್ಯೆಯನ್ನು ಹೇಳಿಕೊಂಡು ಬಂದರೆ ಅದಕ್ಕೆ ಪರಿಹಾರ ಹುಡುಕಿ ಕೊಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದರು.
ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರಿಗೆ ಪದೇಪದೇ ಅಲೆದಾಡಿಸುವ ಕೆಲಸ ಮಾಡಬಾರದು ನಿಮ್ಮ ಕೈಯಲ್ಲಿ ಆಗುವ ಕೆಲಸ ಇದ್ದರೆ ವಿಚಾರಿಸಿ ಕೆಲಸ ಮಾಡಿಕೊಡಿ ಇಲ್ಲವಾದರೆ ಎಂಡೋಸ್ಮೆಂಟ್ ಕೊಟ್ಟು ಅವರಿಗೆ ಕಳಿಸಿಕೊಡಿ ಎಂದರು.

ಲೋಕಾಯುಕ್ತ ಇಲಾಖೆಗೆ ಬಹಳಷ್ಟು ದೂರುಗಳು ಬರುತ್ತಿರುವುದೆಂದರೆ ಅದರಲ್ಲಿ ಹೆಚ್ಚಾಗಿ ಸರ್ವೇ ಇಲಾಖೆ ಕಂದಾಯ ಇಲಾಖೆ ಹಾಗು ಪಿಡಿಒ ಅಧಿಕಾರಿಗಳ ಮೇಲೆ ಹೆಚ್ಚಾಗಿ ದೂರುಗಳು ಬರುತ್ತಿದ್ದೇವೆ ತಕ್ಷಣ ಬದಲಾವಣೆ ಮಾಡಿಕೊಳ್ಳಿ ನಿಮ್ಮ ಇಲಾಖೆಗಳಲ್ಲಿ ದೂರುಗಳು ಬರದಂತೆ ನೋಡಿಕೊಳ್ಳುವುದು ಉತ್ತಮ ಇಲ್ಲವಾದರೆ ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.

ಪಾವಗಡ ಪುರಸಭೆ ಇಲಾಖೆಗೆ ಮೂರು ದೂರುಗಳು ಬಂದಿದ್ದು ಅದರಲ್ಲಿ
ಪುರಸಭೆ ಇಲಾಖೆಗೆ ಬಿ.ಎಮ್ ನಾಗರಾಜ ಎಂಬವರು ನೀಡಿದ ದೂರಿನಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ ಸಿಲ್ಕ್ ಇಂಡಿಯಾ ಅಡಿಯಲ್ಲಿ ಆದಂತಹ ಉಚಿತ ಹೊಲಿಗೆ ಯಂತ್ರ ಹಾಗೂ ಮಿಷನ್ ಕೊಡುವಲ್ಲಿ ಬಹಳಷ್ಟು ನಡೆದಿದೆ ಎಂಬುದಾಗಿ ಹೇಳಿ ದೂರು ಸಲ್ಲಿಸಿದ್ದಾರೆ. 11-10-2021 ರಲ್ಲಿ ಕೇಂದ್ರ ಸರ್ಕಾರದ ಯೋಜನೆಯ ಅಡಿಯಲ್ಲಿ ನೀಡಿರುವಂತ ಸಿಲ್ಕ್ ಇಂಡಿಯಾ ಎಂಬ ಯೋಜನೆ ಅಡಿಯಲ್ಲಿ 150 ಜನ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಹಾಗೂ ಅವರಿಗೆ ಉಚಿತವಾಗಿ ಟೈಲರಿಂಗ್ ಕಲಿಸಿ ನಂತರ ಟೈಲರಿಂಗ್ ಮಷೀನ್ ಅಗಲಿ ಅವರಿಗೆ ಪ್ರಮಾಣ ಪತ್ರ ಆಗಲಿ ನೀಡಿರುವುದಿಲ್ಲ ಇದರ ಬಗ್ಗೆ ತನಿಖೆ ನಡೆಸಲು ದೂರು ಸಲ್ಲಿಸಿದ್ದಾರೆ.

ಮಂಗಳವಾಡ ಪಂಚಾಯಿತಿ ಹಾಗೂ ಅರಸಿಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸೂಕ್ತ ತನಿಖೆ ಮಾಡಿ ಎಂದು ಲೋಕಾಯುಕ್ತ ಎಸ್.ಪಿ.ತಾಲೂಕು ಪಂಚಾಯತಿ ಇಓ ಶಿವರಾಜಯ್ಯ ಅವರಿಗೆ ಸೂಚಿಸಿದರು.
ತಾಲೂಕಿನ ಗೋಡೆಟಿ ಗ್ರಾಮದ ಲಕ್ಷ್ಮಮ್ಮ ಎಂಬವರು ತಮ್ಮ ನಿವೇಶನದ ಸರ್ವೆ ನಂ 188/226 ರ ಪಾವತಿ ಖಾತೆ ಬಗ್ಗೆ ನಾಲ್ಕು ವರ್ಷಗಳಿಂದ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಕೆಲಸ ಮಾಡಿಕೊಟ್ಟಿಲ್ಲ ಎಂದು ದೂರು ಸಲ್ಲಿಸಿದ್ದ ಮಹಿಳೆ.

ತಾಲೂಕಿನ ಮಂಗಳವಾಡ ಗ್ರಾಮದ ಮಹಿಳೆಗೆ ಸೇರಿದ ಜಾಗದಲ್ಲಿ ಬೇರೊಬ್ಬರು ಒತ್ತುವರಿ ಮಾಡಿಕೊಂಡಿದ್ದಾರೆ ಇದರ ಬಗ್ಗೆ ಹಲವು ಬಾರಿ ಅವರ ಗಮನಕ್ಕೆ ತಂದರು ಯಾವುದೇ ಪ್ರಯೋಜನಾಗುತ್ತಿಲ್ಲ ನನ್ನ ಗಂಡನ ಆರೋಗ್ಯ ಸರಿಯಿಲ್ಲ. ಇರುವ ಸ್ವಲ್ಪ ಜಾಗವು ಸಹ ಒತ್ತುವರಿ ಮಾಡಿಕೊಂಡಿದ್ದಾರೆ ಈಗಾಗಲೇ ನನ್ನ ಬಳಿ ಇದ್ದಂತ ತಾಳಿ ಬಟ್ಟನ್ನು ಅಡ ಇಟ್ಟು ಆ ಹಣದಲ್ಲಿ ನ್ಯಾಯಾಲಯದ ಸುತ್ತು ಓಡಾಡುವ ಪರಿಸ್ಥಿತಿ ಉಂಟಾಗಿದೆ ನನಗೆ ನ್ಯಾಯ ಕೊಡಿಸುವವರು ಯಾರು ಇಲ್ಲವೆ ಎಂಬುದಾಗಿ ಅಳುತ್ತಾ ತಮ್ಮ ರೋದನೆ ವ್ಯಕ್ತಪಡಿಸಿದಳು ಅದಕ್ಕೆ ತಕ್ಷಣ ಲೋಕಾಯುಕ್ತ ಎಸ್ಪಿ ವಲಿ ಭಾಷಾ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲು ಮುಂದಾಗುತ್ತೇನೆ ಎಂದರು.

ಕಳೆದ ವಾರದಿಂದ ಲೋಕಾಯುಕ್ತ ಕುಂದು ಕೊರತೆಗಳ ಸಭೆ ಇದೆ ಎಂಬುದಾಗಿ ಪ್ರಚಾರ ಇದ್ದರು
ಈ ದಿನ ಮೂಲ ಅಧಿಕಾರಿಗಳು ಬಾರದೆ ಮಾಹಿತಿ ತಿಳಿದೇ ಇರುವಂತಹ ಅಧಿಕಾರಿಗಳು ಸಭೆಗೆ ಬಂದಿದ್ದು ವಿಷಯವಾಗಿತ್ತು.
ಲೋಕಾಯುಕ್ತ ಅಧಿಕಾರಿಗಳಿಗೆ ಸುಮಾರು 15 ಅರ್ಜಿಗಳು ಬಂದಿದ್ದು ಅವುಗಳಲ್ಲಿ ಪುರಸಭೆ ಮೂರು.ತಾಲೂಕು ಕಚೇರಿ ನಾಲ್ಕು. ಬೆಸ್ಕಾಂ ಒಂದು. ಪೊಲೀಸ್ ಇಲಾಖೆ ಒಂದು. ತಾಲೂಕು ಪಂಚಾಯಿತಿ ಆರು ಅರ್ಜಿಗಳು ದೂರಿನ ಮೂಲಕ ಬಂದಿದ್ದವು.
ಇನ್ನು ನೊಂದ ಮಹಿಳೆಯ ವಾದವನ್ನು ಕೇಳಿದ ಲೋಕಾಯುಕ್ತರು ನಾವು ಸ್ಥಳಕ್ಕೆ ಭೇಟಿ ನೀಡಿ ನಿಮ್ಮ ಸಮಸ್ಯೆ ಬಗ್ಗೆ ಕುಲಂಕುಶವಾಗಿ ಮಾಹಿತಿ ಪಡೆಯುತ್ತೇವೆ ಎಂದು ಮಹಿಳೆಗೆ ಉತ್ತರಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲಿ, ಡಿಎಸ್ಪಿ ಮಂಜುನಾಥ್, ಪಿಐಗಳಾದ ಸತ್ಯನಾರಾಯಣ, ಶಿವರುದ್ರಪ್ಪ, ಸಭೆಯಲ್ಲಿ ಉಪಸ್ಥಿತರಿದ್ದರು, ಅದೇ ರೀತಿ ತಹಸಿಲ್ದಾರ್ ಸುಜಾತ ಕಾರ್ಯನಿರ್ವಹಣಾಧಿಕಾರಿ ಶಿವರಾಜಯ್ಯ, ಶಿರಸ್ತೆದಾರ ಎನ್ ಮೂರ್ತಿ ,ಎ ಡಿ ರಂಗನಾಥ್, ಇಂಜಿನಿಯರ್’ಗಳಾದ ಅನಿಲ್ ಕುಮಾರ್, ಬಸವಲಿಂಗಪ್ಪ, ಹನುಮಂತರಾಯಪ್ಪ, ತೋಟಗಾರಿಕಾ ಸಹಾಯಕ ನಿರ್ದೇಶಕ ಶಂಕರ್ ಮೂರ್ತಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯ ಮೂರ್ತಿ, ಅಬಕಾರಿ ಇನ್ಸ್ಪೆಕ್ಟರ್ ಶಂಕರ್, ಸಿಡಿಪಿಓ ನಾರಾಯಣ್, ದೈಹಿಕ ಶಿಕ್ಷಣ ಪರೀಕ್ಷಕರಾದ ಎಮ್ ಚಿದಾನಂದ ಸ್ವಾಮಿ, ಎಡಿಎಂಎಂ ಶಂಕರಪ್ಪ, ಹಿರಿಯ ಪಶು ವೈದ್ಯಾಧಿಕಾರಿಗಳಾದ ಸಿದ್ದಗಂಗಯ್ಯ, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.